Bigg Boss Kannada 12: ಫಿನಾಲೆಗೂ ಮೊದಲು ಅಶ್ವಿನಿ-ಧ್ರುವಂತ್‌ಗೆ ಕಿಚ್ಚನ ಚಪ್ಪಾಳೆ

Untitled design 2026 01 10T232106.096

ಬಿಗ್ ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಇನ್ನೇನು ಕೇವಲ ಒಂದು ವಾರ ಮಾತ್ರ ಬಾಕಿ ಇದೆ. 112 ದಿನಗಳ ಕಾಲ ನಿರಂತರವಾಗಿ ಸಾಗುತ್ತಿರುವ ಈ ಸೀಸನ್ ಹಲವು ತಿರುವುಗಳು, ಭಾವನಾತ್ಮಕ ಕ್ಷಣಗಳು ಹಾಗೂ ಅಚ್ಚರಿ ನಿರ್ಧಾರಗಳಿಂದ ಗಮನ ಸೆಳೆಯುತ್ತಿದೆ. ಈ ಸೀಸನ್‌ನ ಅಂತಿಮ ಹಂತದಲ್ಲಿ ಕಿಚ್ಚ ಸುದೀಪ್ ನೀಡಿದ ಒಂದು ನಿರ್ಧಾರ ಮಾತ್ರ ಅಶ್ವಿನಿ ಗೌಡ ಮತ್ತು ಧ್ರುವಂತ್ ಅಭಿಮಾನಿಗಳ ಹೃದಯ ಗೆದ್ದಿದೆ.

ಈ ಸೀಸನ್‌ನ ಕೊನೆಯ ‘ಕಿಚ್ಚನ ಚಪ್ಪಾಳೆ’ ಗೌರವವನ್ನು ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರಿಗೆ ನೀಡಿ ಕಿಚ್ಚ ಸುದೀಪ್ ಅವರು ವಿಶೇಷ ಗೌರವ ಸಲ್ಲಿಸಿದ್ದಾರೆ. ಸಾಮಾನ್ಯವಾಗಿ ವಾರಕ್ಕೊಬ್ಬರಿಗೆ ಮಾತ್ರ ನೀಡಲಾಗುವ ಈ ಗೌರವ ಈ ಬಾರಿ ಇಬ್ಬರಿಗೆ ದೊರೆತಿರುವುದೇ ಈ ವಾರದ ದೊಡ್ಡ ಸ್ಪೆಷಾಲಿಟಿ.

ಅಶ್ವಿನಿ ಗೌಡ ಕನಸು ನನಸಾದ ಕ್ಷಣ

ಈ ಸೀಸನ್‌ನಲ್ಲಿ ಗಿಲ್ಲಿ, ರಕ್ಷಿತಾ ಸೇರಿದಂತೆ ಹಲವು ಸ್ಪರ್ಧಿಗಳು ಕಿಚ್ಚನ ಚಪ್ಪಾಳೆ ಪಡೆದಿದ್ದರು. ಆದರೆ ಅಶ್ವಿನಿ ಗೌಡ ಮಾತ್ರ ಇದುವರೆಗೆ ಆ ಗೌರವದಿಂದ ವಂಚಿತರಾಗಿದ್ದರು. ಇದಲ್ಲದೆ, ಇಡೀ ಸೀಸನ್‌ನಲ್ಲಿ ಅವರು ಒಮ್ಮೆಯೂ ಕ್ಯಾಪ್ಟನ್ ಆಗದಿರುವುದು ಅವರ ಮನಸ್ಸಿಗೆ ನೋವು ತಂದಿತ್ತು.

“ಕನಿಷ್ಠವಾಗಿ ಕಿಚ್ಚನ ಚಪ್ಪಾಳೆಯನ್ನಾದರೂ ಪಡೆಯಬೇಕು” ಎಂಬುದು ಅಶ್ವಿನಿ ಅವರ ಕನಸಾಗಿತ್ತು. ಆದರೆ ವಾರಗಳು ಕಳೆಯುತ್ತಿದ್ದರೂ ಆ ಅವಕಾಶ ಕೈಗೂಡಿರಲಿಲ್ಲ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಈ ಕನಸು ನನಸಾಗದೇ ಹೋಗಬಹುದು ಎಂಬ ಆತಂಕವೂ ಅವರಲ್ಲಿತ್ತು.

ಆದರೆ, ಕೊನೆಯ ವಾರದಲ್ಲಿ ಕಿಚ್ಚ ಸುದೀಪ್ ನೀಡಿದ ಈ ಸರ್ಪ್ರೈಸ್ ಅಶ್ವಿನಿ ಗೌಡ ಅವರ ಬದುಕಿನ ಮರೆಯಲಾಗದ ಕ್ಷಣವಾಗಿಬಿಟ್ಟಿದೆ. ಕಿಚ್ಚನ ಚಪ್ಪಾಳೆ ಸ್ವೀಕರಿಸುವ ವೇಳೆ ಅವರು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ..

ಧ್ರುವಂತ್‌ಗೂ ದೊರಕಿದ ಗೌರವ

ಅಶ್ವಿನಿಯ ಜೊತೆಗೆ ಧ್ರುವಂತ್ ಕೂಡ ಕಿಚ್ಚನ ಚಪ್ಪಾಳೆಗೆ ಪಾತ್ರರಾಗಿದ್ದಾರೆ. ಆಟದ ಮೇಲಿನ ಅವರ ಫೋಕಸ್, ಹಠ ಮತ್ತು ತಾಳ್ಮೆ ಕಿಚ್ಚ ಸುದೀಪ್ ಅವರನ್ನು ಮೆಚ್ಚುವಂತೆ ಮಾಡಿತ್ತು. ಇಬ್ಬರೂ ಈ ಗೌರವವನ್ನು ಹಂಚಿಕೊಂಡಿದ್ದಾರೆ..

ಕಿಚ್ಚನ ಮಾತುಗಳು 

ಜನವರಿ 10ರಂದು ಪ್ರಸಾರವಾದ ‘ವಾರದ ಕತೆ ಕಿಚ್ಚನ ಜೊತೆ’ ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಈ ಘೋಷಣೆ ಮಾಡಿದ್ದಾರೆ. “ಈ ವಾರದ ಎಪಿಸೋಡ್‌ಗಳನ್ನು ನೋಡಿದಾಗ ನನಗೆ ಕಂಡಿದ್ದು ಒಬ್ಬ ವ್ಯಕ್ತಿಯ ಹಠ ಮತ್ತು ಫೋಕಸ್. ಅವಮಾನ ಮಾಡಿದವರಿಂದಲೇ ಮುಂದೆ ಹೊಗಳಿಸಿಕೊಳ್ಳುವ ಕ್ಷಣ ಬರುತ್ತದೆ. ಅಲ್ಲಿಯೇ ಗೆಲುವಿನ ಪ್ರಾರಂಭ,” ಎಂದು ಹೇಳುತ್ತಾ, “ಈ ಸೀಸನ್‌ನ ಕೊನೆಯ ಕಿಚ್ಚನ ಚಪ್ಪಾಳೆ ಅಶ್ವಿನಿ ಗೌಡ ಹಾಗೂ ಧ್ರುವಂತ್ ಅವರಿಗೆ,” ಎಂದು ಘೋಷಿಸಿದ ಕ್ಷಣವೇ ಮನೆ ತುಂಬಾ ಸಂಭ್ರಮ ಮನೆಮಾಡಿತ್ತು.

ಫಿನಾಲೆಗೆ ದಿನಗಣನೆ

ಈ ವಾರ ಬಿಗ್ ಬಾಸ್ ಮನೆಯಲ್ಲಿ ಇನ್ನೂ ಹಲವು ಟ್ವಿಸ್ಟ್‌ಗಳು ನಡೆಯುವ ಸಾಧ್ಯತೆ ಇದೆ. ಫಿನಾಲೆ ಹತ್ತಿರವಾಗುತ್ತಿದ್ದಂತೆ ಆಟ ಮತ್ತಷ್ಟು ರೋಚಕವಾಗುತ್ತಿದ್ದು, ಯಾರು ಟ್ರೋಫಿ ಗೆಲ್ಲುತ್ತಾರೆ ಎಂಬ ಕುತೂಹಲ ದಿನೇ ದಿನೇ ಹೆಚ್ಚುತ್ತಿದೆ.

Exit mobile version