ಬಿಗ್ ಬಾಸ್ ಕನ್ನಡ ಸೀಸನ್ 12ರ ಈ ವಾರದ ವೀಕೆಂಡ್ ಎಪಿಸೋಡ್ ಇನ್ನೂ ಬರಲೇ ಇಲ್ಲ, ಆದರೆ ಕಿಚ್ಚ ಸುದೀಪ್ ಅವರ “ಕಿಚ್ಚನ ಪಂಚಾಯಿತಿ” ಪ್ರೋಮೋ ಒಂದೇ ಸಾಕು ಸೋಶಿಯಲ್ ಮೀಡಿಯಾ ಸಿಕ್ಸರ್ “ಮನೆಗೆ ಬಂದ ಅತಿಥಿಗಳು ಅತಿರೇಕ ಮಾಡಿದ್ರಾ? ಸಿಬ್ಬಂದಿ ಗೆದ್ದರಾ? ಹೆಡ್ ವೇಟರ್ ಆಗಿ ಎಡವಿದ್ರಾ? ಪ್ರಶ್ನೆ ಯಾರಿಗೆ? ಉತ್ತರ ಯಾರಿಗೆ? ಪಾಠ ಯಾರಿಗೆ?” ಎಂದು ಕಿಚ್ಚ ಕೇಳಿರುವುದು ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ಧನುಷ್ ಗೌಡರಿಗೆ ನೇರ ಗುರಿಯಾಗಿದೆ ಎಂದು ಅಭಿಮಾನಿಗಳು ಭಾವಿಸುತ್ತಿದ್ದಾರೆ.
ಈ ವಾರ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿತ್ತು. ಸೀಸನ್ 11ರ ಸ್ಟಾರ್ ಸ್ಪರ್ಧಿಗಳಾದ ತ್ರಿವಿಕ್ರಮ್, ಚೈತ್ರಾ ಕುಂದಾಪುರ, ರಜತ್, ಉಗ್ರಂ ಮಂಜು (ಮ್ಯಾಕ್ಸ್ ಮಂಜು), ಮೋಕ್ಷಿತಾ ಪೈ ಅತಿಥಿಗಳಾಗಿ ಬಂದಿದ್ದರು. ಆದರೆ ಆಗಿದ್ದೇ ಬೇರೆ ಅತಿಥಿಗಳು ರೆಸಾರ್ಟ್‌ಗೆ ಬಂದವರಂತೆ ಬೇಡಿಕೆ ಇಟ್ಟರು ಬಗೆಬಗೆಯ ಊಟ-ತಿಂಡಿ, ಹೆಡ್ ಮಸಾಜ್, ಕಾಲು ಒತ್ತಿಸಿಕೊಳ್ಳುವುದು. ಈ ಸೀಸನ್ ಸ್ಪರ್ಧಿಗಳು ಸರಿಯಾಗಿ ಸೇವೆ ಮಾಡಲಿಲ್ಲ ಎಂಬ ಆರೋಪ ಬಂದಿದೆ. ವಿಶೇಷವಾಗಿ ಗಿಲ್ಲಿ ನಟನನ್ನು ತ್ರಿವಿಕ್ರಮ್, ರಜತ್, ಮ್ಯಾಕ್ಸ್ ಮಂಜು ಟಾರ್ಗೆಟ್ ಮಾಡಿದ್ದು ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪ್ರೋಮೋದಲ್ಲಿ ಕಿಚ್ಚ ಕೇಳಿರುವ ಪ್ರಶ್ನೆಗಳೇ ಗಿಲ್ಲಿ ನಟನಿಗೆ ಸೀರಿಯಸ್ ವಾರ್ನಿಂಗ್ ಎಂಬಂತೆ ಕಾಣುತ್ತಿದೆ. “ಹೆಡ್ ವೇಟರ್ ಆಗಿ ಎಡವಿದ್ರಾ?” ಎಂಬ ಪ್ರಶ್ನೆ ನೇರವಾಗಿ ಗಿಲ್ಲಿ ನಟನಿಗೆ ಹೆಡ್ ವೇಟರ್ ರೋಲ್‌ಗೆ ಸಂಬಂಧಿಸಿದೆ. ಗಿಲ್ಲಿ ನಟ “ನನಗೆ ಬುದ್ಧಿ ಇಲ್ಲ” ಎಂದು ಸೀನಿಯರ್‌ಗಳು ಹೇಳಬೇಕು ಎಂದು ಒತ್ತಾಯ ಮಾಡಿದ್ದನ್ನು ಕಿಚ್ಚ ಗಮನಿಸಿದ್ದಾರೆ. ಅಶ್ವಿನಿ ಗೌಡ ಅವರು “ಅದು ಆಗೋದಿಲ್ಲ” ಎಂದು ತಡೆದಿದ್ದಕ್ಕೂ ಕಿಚ್ಚ ಕ್ಲಾಸ್ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಇನ್ನೊಂದು ಬಿಸಿ ವಿಷಯ ಗಿಲ್ಲಿ ನಟನ ಕಾಮಿಡಿ, ಮ್ಯಾಕ್ಸ್ ಮಂಜುಗೆ “ಮಲೇರಿಯಾ ಬಂದಿದೆಯಾ? ಎರಡನೇ-ಮೂರನೇ ಮದುವೆ ಆಗ್ತಿದೆಯಾ?” ಎಂದು ಕೇಳಿದ್ದು, “ಬಿಟ್ಟಿ ಊಟ ತಿನ್ನೋಕೆ ಬಂದಿದ್ದೀಯಾ?” ಎಂದು ಹೇಳಿದ್ದು ಅತಿಥಿಗಳನ್ನು ಕೆರಳಿಸಿದೆ. ಈಗ ಕಿಚ್ಚ ಇದಕ್ಕೆ ಏನು ಹೇಳ್ತಾರೆ ಎಂಬುದು ಕುತೂಹಲ.
ಧನುಷ್ ಗೌಡ ಅವರಿಗೂ ಕಿಚ್ಚನ ಕಣ್ಣು ಬಿದ್ದಿದೆ. ಅಶ್ವಿನಿ-ಗಿಲ್ಲಿ ವಿಷಯ ಬಂದಾಗ ಧನುಷ್ ಅವರು ಅಶ್ವಿನಿಗೆ ಬೆಂಬಲ ಕೊಟ್ಟಿದ್ದಕ್ಕೆ ಗಿಲ್ಲಿಯನ್ನು ಕಂಡ್ರೆ “ಉರಿ” ಬರುತ್ತಿದೆಯೇ ಎಂಬ ಪ್ರಶ್ನೆ ಕೇಳಲಾಗುವ ಸಾಧ್ಯತೆ ಇದೆ.
ಒಟ್ಟಾರೆ, ಈ ವಾರದ ಕಿಚ್ಚನ ಪಂಚಾಯಿತಿ ಗಿಲ್ಲಿ ನಟ, ಅಶ್ವಿನಿ ಗೌಡ ಮತ್ತು ಧನುಷ್ ಗೌಡರಿಗೆ ಭಾರೀ ಕಿರಿಕಿರಿ ಆಗಲಿದೆ ಎಂಬುದು ಪ್ರೋಮೋ ನೋಡಿ ಸ್ಪಷ್ಟವಾಗಿದೆ. ಕಿಚ್ಚನ ಫೈರ್ ಯಾರ ಮೇಲೆ ಬೀಳುತ್ತದೆ? ಭಾನುವಾರ ಸಂಜೆ 9 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಕಾದು ನೋಡಿ.
