ಬಿಗ್ ಬಾಸ್‌‌ನಲ್ಲಿ ಗಿಲ್ಲಿ ಎಲ್ಲರ ಟಾರ್ಗೆಟ್..! ಕಾವ್ಯಾಳಿಂದಲೂ ವಿರೋಧ!

Web (6)

ಬಿಗ್ ಬಾಸ್ ಕನ್ನಡ ಸೀಸನ್ 12ರ ಭಾನುವಾರದ ಎಪಿಸೋಡ್‌ನಲ್ಲಿ ಡ್ರಾಮಾ ಮತ್ತೊಮ್ಮೆ ಉತ್ತುಂಗಕ್ಕೇರಿದೆ. ಕಿಚ್ಚ ಸುದೀಪ್ ಅವರು ಮನೆಯ ಸ್ಪರ್ಧಿಗಳಿಗೆ ಒಂದು ರೋಚಕ ಟಾಸ್ಕ್ ನೀಡಿದ್ದು, “ಯಾರು ನಿಮ್ಮ ಟಾರ್ಗೆಟ್?” ಎಂಬ ಪ್ರಶ್ನೆಯಿಂದ ಎಲ್ಲರ ಗುರಿಯನ್ನು ಬಯಲಿಗೆಳೆದಿದ್ದಾರೆ. ಆದರೆ ಆಶ್ಚರ್ಯಕರ ತಿರುವಿನಲ್ಲಿ, ಮನೆಯ ಬಹುತೇಕ ಸ್ಪರ್ಧಿಗಳು–ಅಶ್ವಿನಿ, ರಾಶಿಕಾ ಮತ್ತು ಆತ್ಮೀಯ ಗೆಳತಿಯಾಗಿದ್ದ ಕಾವ್ಯಾ ಶೈವ ಸಹ–ಗಿಲ್ಲಿ ನಟನನ್ನೇ ಟಾರ್ಗೆಟ್ ಮಾಡಿದ್ದಾರೆ. ಈ ಟಾಸ್ಕ್ ಮನೆಯೊಳಗಿನ ಸಂಬಂಧಗಳನ್ನು ತಲೆಕೆಳಗಾಗಿಸಿದೆ ಮತ್ತು ಫ್ಯಾನ್ಸ್‌ರಲ್ಲಿ ಚರ್ಚೆ ಜೋರಾಗಿದೆ.

ಕಿಚ್ಚ ಸುದೀಪ್ ಅವರು ಈ ಎಪಿಸೋಡ್‌ನಲ್ಲಿ ಒಂದು ವಿಶೇಷ ಆಟವನ್ನು ಆಯೋಜಿಸಿದ್ದು, ಸ್ಪರ್ಧಿಗಳಿಗೆ “ನಿಮ್ಮ ಟಾರ್ಗೆಟ್ ಯಾರು?” ಎಂಬ ಪ್ರಶ್ನೆಯ ಮೂಲಕ ಮನೆಯೊಳಗಿನ ರಾಜಕೀಯವನ್ನು ಬಯಲಿಗೆಳೆಯಲು ಯತ್ನಿಸಿದರು. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಗುರಿಯನ್ನು ತೆರೆದಿಟ್ಟಾಗ, ಬಹುತೇಕ ಎಲ್ಲರ ಉತ್ತರವೂ ಒಂದೇ  ಗಿಲ್ಲಿ ನಟ.

“ಗಿಲ್ಲಿ ಮನೆಯಲ್ಲಿ ಸ್ವಾರ್ಥಿಯಾಗಿ ಆಟವಾಡುತ್ತಿದ್ದಾರೆ. ಅವರನ್ನು ಟಾರ್ಗೆಟ್ ಮಾಡದೆ ಬೇರೆ ದಾರಿಯಿಲ್ಲ”.”ಗಿಲ್ಲಿಯ ಆಟದ ರೀತಿಯಿಂದ ಮನೆಯ ವಾತಾವರಣ ಬದಲಾಗಿದೆ. ಅವರೇ ನನ್ನ ಟಾರ್ಗೆಟ್”.ಗಿಲ್ಲಿಯೊಂದಿಗೆ ಆತ್ಮೀಯ ಬಾಂಡಿಂಗ್ ಹೊಂದಿದ್ದ ಕಾವ್ಯಾ ಶೈವ ಸಹ ಆಶ್ಚರ್ಯಕರವಾಗಿ ಗಿಲ್ಲಿಯನ್ನೇ ಟಾರ್ಗೆಟ್ ಆಗಿ ಆಯ್ಕೆ ಮಾಡಿದ್ದಾರೆ. “ಗಿಲ್ಲಿಯ ಆಕ್ಟಿವಿಟಿಗಳು ಮನೆಯಲ್ಲಿ ವಿಭಿನ್ನವಾಗಿವೆ, ಅವರೇ ನನ್ನ ಗುರಿ” ಎಂದು ಕಾವ್ಯಾ ಹೇಳಿದ್ದಾರೆ.

ಈ ಟಾಸ್ಕ್‌ನಿಂದ ಗಿಲ್ಲಿಯ ಮೇಲಿನ ಒತ್ತಡ ದುಪ್ಪಟ್ಟಾಗಿದೆ. ಮನೆಯೊಳಗಿನ ಎಲ್ಲರ ಗುರಿಯಾಗಿರುವ ಗಿಲ್ಲಿ, ಇದೀಗ ತಮ್ಮ ಆಟದ ರಣತಂತ್ರವನ್ನು ಬದಲಾಯಿಸಬೇಕಾದ ಸ್ಥಿತಿಯಲ್ಲಿದ್ದಾರೆ.

ಗಿಲ್ಲಿಯೊಂದಿಗೆ ಕಾವ್ಯಾ ಶೈವ ಅವರ ಬಾಂಡಿಂಗ್ ಮನೆಯೊಳಗೆ ಮತ್ತು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಯಾಗಿತ್ತು. ಆದರೆ ಕಾವ್ಯಾ ಸಹ ಗಿಲ್ಲಿಯನ್ನು ಟಾರ್ಗೆಟ್ ಮಾಡಿದ್ದು, ಫ್ಯಾನ್ಸ್‌ಗೆ ಆಘಾತವನ್ನುಂಟು ಮಾಡಿದೆ.

Exit mobile version