ಬಿಗ್ ಬಾಸ್ ಕನ್ನಡ ಸೀಸನ್ 12 ದಿನದಿಂದ ದಿನಕ್ಕೆ ಭಾರೀ ರೋಚಕತೆ ಪಡೆದುಕೊಳ್ಳುತ್ತಿದೆ. ಕಳೆದ ವಾರ ಜಾನ್ವಿ ಅನಿರೀಕ್ಷಿತವಾಗಿ ಹೊರಬಿದ್ದಿದ್ದರು. ಈ ವಾರ ಮತ್ತೊಂದು ದೊಡ್ಡ ಶಾಕ್, ಸ್ಟ್ರಾಂಗ್ ಕಂಟೆಂಡರ್ ಎಂದು ಭಾವಿಸಲಾಗಿದ್ದ ಅಭಿಷೇಕ್ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಗೆ ವಿದಾಯ ಹೇಳಿದ್ದಾರೆ ಎನ್ನಲಾಗುತ್ತಿದೆ.
ಈ ವಾರ ನಾಮಿನೇಟ್ ಆಗಿದ್ದ 9 ಸ್ಪರ್ಧಿಗಳು: ಅಭಿಷೇಕ್, ಧ್ರುವಂತ್, ಗಿಲ್ಲಿ ನಟ, ಕಾವ್ಯಾ ಶೈವ, ಮಾಳು ನಿಪನಾಳ, ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಸ್ಪಂದನಾ, ಸೂರಜ್ ಸಿಂಗ್.
ಅಭಿಷೇಕ್ ಮನೆಯೊಳಗೆ ಆರಂಭದಿಂದಲೂ ಸಕ್ರಿಯವಾಗಿ ಆಡುತ್ತಿದ್ದರು. ಟಾಸ್ಕ್‌ಗಳಲ್ಲಿ ಉತ್ತಮ ಪ್ರದರ್ಶನ, ಗುಂಪು ಚರ್ಚೆಗಳಲ್ಲಿ ಧೈರ್ಯದ ಮಾತುಗಳು, ಇವೆಲ್ಲವೂ ಅವರನ್ನು ಸ್ಟ್ರಾಂಗ್ ಕಂಟೆಂಡರ್ ಎಂದು ಭಾವಿಸಿದವು. ಆದರೆ ಕಳೆದ ಎರಡು ವಾರಗಳಿಂದ ಅವರ ಆಟ ಸ್ವಲ್ಪ ಮಂದಗತಿಯಾಗಿತ್ತು. ವೈಲ್ಡ್ ಕಾರ್ಡ್ ಎಂಟ್ರಿ ರಜತ್ ಮತ್ತು ಚೈತ್ರಾ ಅವರ ಆಗಮನದಿಂದ ಆಟದ ಡೈನಾಮಿಕ್ಸ್ ಬದಲಾಯಿತು. ಅದೇ ರೀತಿ ಧ್ರುವಂತ್‌ರ ಸ್ವಯಂ ಎಲಿಮಿನೇಷನ್ ಡ್ರಾಮಾ ಕೂಡ ಗಮನ ಸೆಳೆಯಿತ್ತು.
ಅಭಿಷೇಕ್ ಎಲಿಮಿನೇಟ್ ಆದ ಬಳಿಕ ಮನೆಯಲ್ಲಿ ಭಾವನಾತ್ಮಕ ವಾತಾವರಣ ನಿರ್ಮಾಣವಾಗಿದೆ. ರಜತ್, ಚೈತ್ರಾ ನಂತಹ ವೈಲ್ಡ್ ಕಾರ್ಡ್ ಸ್ಪರ್ಧಿಗಳು ಮನೆಯನ್ನು ರಣರಂಗ ಮಾಡಿದ್ದಾರೆ. ಇದರೊಂದಿಗೆ ಧ್ರುವಂತ್ ಇನ್ನೂ ಆಟದಲ್ಲಿ ಇದ್ದಾರೆ ಎಂಬುದು ಮತ್ತೊಂದು ಆಶ್ಚರ್ಯ.
ಈಗ ಮನೆಯಲ್ಲಿ ಉಳಿದಿರುವ ಸ್ಪರ್ಧಿಗಳು ಮತ್ತಷ್ಟು ಹೈ ಅಲರ್ಟ್ ಆಗಿದ್ದಾರೆ. ಬಿಗ್ ಬಾಸ್ ಮನೆಯಿಂದ ಮುಂದಿನ ವಾರಗಳಲ್ಲಿ ಯಾರು ಎಲಿಮಿನೇಟ್ ಆಗುತ್ತಾರೆ ಕಾದು ನೋಡಬೇಕಿದೆ. ಫೈನಲ್‌ಗೆ ಇನ್ನೂ ಹಲವು ವಾರಗಳು ಬಾಕಿ ಇರುವುದರಿಂದ ಈ ಎಲಿಮಿನೇಷನ್ ಆಟದ ದಿಕ್ಕನ್ನೇ ಬದಲಾಯಿಸಬಹುದು ಎನ್ನಲಾಗುತ್ತಿದೆ.
