ಬಿಗ್ ಬಾಸ್ ಕನ್ನಡ ಸೀಸನ್ 12 ಇದೀಗ ತೀವ್ರ ಪೈಪೋಟಿಯ ಹಂತಕ್ಕೆ ಬಂದು ನಿಂತಿದೆ. ಫೈನಲ್ ಹತ್ತಿರವಾದಂತೆ ಸ್ಪರ್ಧಿಗಳ ನಡುವೆ ಒಳಗಿನ ಆಟ ತಾರಕಕ್ಕೇರಿದೆ. ಡಿಸೆಂಬರ್ 1ರ ಸಂಚಿಕೆಯಲ್ಲಿ ನಡೆದ “ಬ್ಯಾಕ್ ಸ್ಟ್ಯಾಬಿಂಗ್” ಟಾಸ್ಕ್ ಮನೆಯನ್ನೇ ಬೆಚ್ಚಿ ಬೀಳಿಸಿದೆ. ಬೆನ್ನಿಗೆ ಕಟ್ಟಿದ ವಸ್ತುವಿಗೆ ಚೂರಿ ಚುಚ್ಚಿ, ಮನೆಯಲ್ಲಿ ಇರಲು ಅಯೋಗ್ಯ ಎಂದು ಭಾವಿಸಿದವರನ್ನು ನಾಮಿನೇಟ್ ಮಾಡುವ ಈ ಟಾಸ್ಕ್ ನಲ್ಲಿ ಎಲ್ಲರೂ ಎಲ್ಲರ ಬೆನ್ನಿಗೆ ಚೂರಿ ಹಾಕಿದ್ದಾರೆ.
ಕಾವ್ಯಾ ಶೈವ ಎದುರು ರಕ್ಷಿತಾ ಶೆಟ್ಟಿ ನೇರವಾಗಿ ಚೂರಿ ಚುಚ್ಚಿದ್ದಾರೆ. “ನೀನೇ ನನ್ನ ದೊಡ್ಡ ಕಾಂಪಿಟೀಟರ್, ಆದರೆ ನಿನ್ನಲ್ಲಿ ಒಂದು ಪರ್ಸೆಂಟ್ ಕೂಡ ಏಫರ್ಟ್ ಇಲ್ಲ” ಎಂದು ರಕ್ಷಿತಾ ಆರೋಪಿಸಿದರು. ಈದಕ್ಕೆ ಕಾವ್ಯಾ ಉತ್ತರಿಸಿದ್ದು, “ನಿನ್ನ ಗಿಮಿಕ್, ನಿನ್ನ ಸ್ಟ್ರಾಟಜಿ ನನ್ನ ಮೇಲೆ ನಡೆಯೋದಿಲ್ಲ. ನನ್ನ ಜೊತೆ ಮಾತಾಡೋಕ್ಕೆ ನಿನಗೆ ಮೀಟರ್ ಇಲ್ವಾ?” ಎಂದು ಅಬ್ಬರಿಸಿದ್ದರು. ಇಬ್ಬರ ನಡುವಿನ ಈ ತೀವ್ರ ಗಲಾಟೆ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದೆ.
ಅದೇ ಟಾಸ್ಕ್‌ನಲ್ಲಿ ರಘು ತಂಡ ಗಿಲ್ಲಿಗೆ ಚೂರಿ ಹಾಕಿದ್ದು ಸಂಚಲನ ಮೂಡಿಸಿದೆ. ಅಶ್ವಿನಿ ಗೌಡ, ಗಿಲ್ಲಿ ಸೇರಿ ಹಲವರ ಬೆನ್ನಿಗೂ ಚೂರಿ ಚುಚ್ಚಲಾಗಿದೆ. ಗಿಲ್ಲಿಗೆ ಧನುಷ್ ಎರಡನೇ ರ್ಯಾಂಕ್ ಕೊಟ್ಟಿದ್ದಕ್ಕೆ ರಕ್ಷಿತಾ-ರಘು ತಂಡದಲ್ಲಿ ಗಲಾಟೆಯಾಗಿದೆ. “ಮನೆ ಕೆಲಸ ಏನೂ ಮಾಡೋದಿಲ್ಲ, ಶುದ್ಧ ಸೋಮಾರಿ” ಎಂದು ರಕ್ಷಿತಾ ಗಿಲ್ಲಿಯನ್ನು ನೇರವಾಗಿ ಟೀಕಿಸಿದರೆ, “ಅವನೇ ಮನೆಯಲ್ಲಿ ಅತಿ ಸೋಮಾರಿ, ಆದರೂ ಎರಡನೇ ಸ್ಥಾನದಲ್ಲಿ ಇದ್ದಾನೆ” ಎಂದು ರಘು ಕೆಂಡಾಮಂಡಲರಾದರು. ಇದಕ್ಕೆ ಗಿಲ್ಲಿ ಕೂಡ ಸುಮ್ಮನಿರದೆ ಪ್ರತ್ಯುತ್ತರ ನೀಡಿದರು.
ನೆಟ್ಟಿಗರ ಮಾತಿನಂತೆ ಈ ಎಲ್ಲಾ ಡ್ರಾಮಾದ ಹಿಂದೆ ಗಿಮಿಕ್ ಇದೆಯೇ? ಗಿಲ್ಲಿ ಇಲ್ಲದಿದ್ದರೆ ಕಾವ್ಯಾ ಕಾಣಿಸಿಕೊಳ್ಳಲ್ಲ, ರಕ್ಷಿತಾ ತುಂಬಾ ಓವರ್ ಆಕ್ಟಿಂಗ್ ಮಾಡುತ್ತಿದ್ದಾರೆ ಎಂದು ಧ್ರುವ ಈಗಾಗಲೇ ಹೇಳಿದ್ದರು. ಅದೇ ಮಾತನ್ನು ಈಗ ಪ್ರೇಕ್ಷಕರು ಒಪ್ಪುತ್ತಿದ್ದಾರೆ. ಒಟ್ಟಾರೆಯಾಗಿ ಈ ವಾರದ ನಾಮಿನೇಷನ್ ಟಾಸ್ಕ್ ಮನೆಯನ್ನೇ ಎರಡು ಗುಂಪುಗಳಾಗಿ ವಿಭಜಿಸಿದೆ. ಒಂದೆಡೆ ರಕ್ಷಿತಾ-ರಘು-ಅಶ್ವಿನಿ ತಂಡ, ಮತ್ತೊಂದೆಡೆ ಕಾವ್ಯಾ-ಗಿಲ್ಲಿ-ಧನುಷ್ ಗುಂಪು ಆಗಿದೆ.
ಫೈನಲ್ ಹತ್ತಿರ ಬಂದಂತೆ ಈ ಒಳಗಿನ ಆಟ, ಬೆನ್ನಿಗೆ ಚೂರಿ, ಮಾತಿನ ಗಲಾಟೆಗಳು ಇನ್ನಷ್ಟು ತೀವ್ರಗೊಳ್ಳಲಿವೆ ಎನ್ನುವುದು ಖಚಿತ.
