ಬೆಂಗಳೂರು: ಹಬ್ಬದ ಸೀಸನ್‌ನಲ್ಲಿ ಬೈಕ್ ಖರೀದಿಯನ್ನು ಸುಲಭಗೊಳಿಸಲು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ಮುಂದಾಗಿದ್ದು, 2026ರ ಬಹುನಿರೀಕ್ಷಿತ ‘ಯೆಜ್ಡಿ ಟ್ರಿನಿಟಿ’ ಸರಣಿಯ ಬೈಕುಗಳನ್ನು ಇದೀಗ ಜನಪ್ರಿಯ ಇ-ಕಾಮರ್ಸ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲಿಯೂ ಬಿಡುಗಡೆ ಮಾಡಿದೆ.
ಇದರಿಂದ ದೇಶಾದ್ಯಂತ ಇರುವ ಯೆಜ್ಡಿ ಪ್ರಿಯರು ಈಗ ಸುಲಭವಾಗಿ ‘ಯೆಲ್ಲೋ ಫಾಲ್ಕನ್ ಅಡ್ವೆಂಚರ್’, ‘ಗ್ರೀನ್ ಮಾಂಬಾ ರೋಡ್‌ಸ್ಟರ್’ ಹಾಗೂ ‘ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್’ ಬೈಕ್‌ಗಳನ್ನು ಆನ್‌ಲೈನ್ ಮೂಲಕವೇ ಬುಕ್ ಮಾಡಬಹುದಾಗಿದೆ. ಹೊಸ ಬಣ್ಣಗಳು ಹಾಗೂ ರೈಡರ್‌ಗಳ ಬೇಡಿಕೆಗೆ ತಕ್ಕಂತಹ ಅಪ್‌ಗ್ರೇಡ್‌ಗಳೊಂದಿಗೆ ಈ ಬೈಕ್‌ಗಳು ಮಾರುಕಟ್ಟೆಗೆ ಬಂದಿವೆ.
ಯೆಜ್ಡಿಯ ಈ ಮೂರೂ ಬೈಕ್‌ಗಳು ವಿಭಿನ್ನ ರೈಡಿಂಗ್ ಅನುಭವಗಳಿಗಾಗಿಯೇ ವಿನ್ಯಾಸಗೊಂಡಿವೆ. ಇದರಲ್ಲಿ ‘ಯೆಲ್ಲೋ ಫಾಲ್ಕನ್ ಯೆಜ್ಡಿ ಅಡ್ವೆಂಚರ್’ ಸುದೀರ್ಘ ಪ್ರಯಾಣಕ್ಕೆ ಹೇಳಿಮಾಡಿಸಿದ ಬೈಕ್ ಆಗಿದೆ. ಗ್ರಾಹಕರ ಬಹುದೊಡ್ಡ ಬೇಡಿಕೆಯಾಗಿದ್ದ ಟ್ಯೂಬ್‌ಲೆಸ್ ಕ್ರಾಸ್-ಸ್ಪೋಕ್ ವೀಲ್‌ಗಳನ್ನು ಇದರಲ್ಲಿ ನೀಡಲಾಗಿದೆ. ಇದು 334ಸಿಸಿ ಲಿಕ್ವಿಡ್-ಕೂಲ್ಡ್ ಆಲ್ಫಾ2 ಎಂಜಿನ್ ಹೊಂದಿದ್ದು, 29.6 ಪಿಎಸ್ ಪವರ್ ಹಾಗೂ 29.8 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ.
ದೈನಂದಿನ ರಸ್ತೆಗಳ ಬಳಕೆಗೆ ಸೂಕ್ತವಾದ ‘ಗ್ರೀನ್ ಮಾಂಬಾ ರೋಡ್‌ಸ್ಟರ್’ ಬೈಕ್, ಮ್ಯಾಟ್ ಗ್ರೀನ್ ಫಿನಿಶ್, ಅರೇಬಿಕಾ-ಬ್ರೌನ್ ಸೀಟ್‌ಗಳು ಹಾಗೂ ಆಕರ್ಷಕ ತಾಮ್ರದ ಡಿಕಾಲ್‌ಗಳನ್ನು ಹೊಂದಿದೆ. ಇದು 6-ಸ್ಪೀಡ್ ಗೇರ್‌ಬಾಕ್ಸ್, ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್‌ನೊಂದಿಗೆ 334ಸಿಸಿ ಆಲ್ಫಾ2 ಎಂಜಿನ್ ಅನ್ನು ಒಳಗೊಂಡಿದೆ.
ಇನ್ನು ಸಾಹಸಮಯ ರೈಡಿಂಗ್‌ಗೆ (ಆಫ್-ರೋಡಿಂಗ್) ಸೂಕ್ತವಾದ ‘ಗ್ರೇ ಪ್ಯಾಂಥರ್ ಸ್ಕ್ರ್ಯಾಂಬ್ಲರ್’ ಬೈಕ್, ಮೆಟಾಲಿಕ್ ಗ್ರೇ ಫಿನಿಶ್, ಅರೇಬಿಕಾ-ಬ್ರೌನ್ ಸೀಟ್‌ಗಳು ಹಾಗೂ ಅದಕ್ಕೆ ಒಪ್ಪುವ ಟ್ಯಾಂಕ್ ಪ್ಯಾಡ್‌ಗಳನ್ನು ಹೊಂದಿದೆ. 334ಸಿಸಿ ಕಟಾರ್ ಎಂಜಿನ್ ಹೊಂದಿರುವ ಈ ಬೈಕ್, ಯೆಜ್ಡಿಯ ಪ್ರಸಿದ್ಧ ’30-30-30 ಫಾರ್ಮುಲಾ’ದಂತೆ 30 ಪಿಎಸ್ ಪವರ್, 30 ಎನ್‌ಎಂ ಟಾರ್ಕ್ ಹಾಗೂ 30 ಕಿಮೀ/ಲೀ ಮೈಲೇಜ್ ಅನ್ನು ನೀಡುತ್ತದೆ.
ಈ ಹೊಸ ಹೆಜ್ಜೆಯ ಕುರಿತು ಪ್ರತಿಕ್ರಿಯಿಸಿರುವ ಕ್ಲಾಸಿಕ್ ಲೆಜೆಂಡ್ಸ್‌ನ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಯೆಜ್ಡಿ ಬೈಕ್‌ಗಳು ವಿಭಿನ್ನವಾಗಿ ಯೋಚಿಸುವ ರೈಡರ್‌ಗಳನ್ನು ಯಾವಾಗಲೂ ಆಕರ್ಷಿಸುತ್ತವೆ. 2026ರ ಸರಣಿಯು ಮೂರು ವಿಶಿಷ್ಟ ಬೈಕ್‌ಗಳ ಮೂಲಕ ಇದೇ ಉತ್ಸಾಹವನ್ನು ಮುಂದುವರಿಸಿದ್ದು, ರೈಡರ್‌ಗಳು ತಾವು ಎಲ್ಲಿ ಮತ್ತು ಹೇಗೆ ಸವಾರಿ ಮಾಡುತ್ತಾರೆ ಎಂಬುದರ ಆಧಾರದ ಮೇಲೆ ತಮಗೆ ಬೇಕಾದ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಹಬ್ಬದ ಸೀಸನ್‌ನಲ್ಲಿ ಯೆಜ್ಡಿಯನ್ನು ಗ್ರಾಹಕರಿಗೆ ಇನ್ನಷ್ಟು ಸುಲಭವಾಗಿ ತಲುಪಿಸುವ ಉದ್ದೇಶದಿಂದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಬುಕಿಂಗ್ ಸೌಲಭ್ಯವನ್ನು ಪರಿಚಯಿಸಲಾಗಿದೆ,” ಎಂದರು.
ಆನ್‌ಲೈನ್‌ನಲ್ಲಿ ಬೈಕ್ ಖರೀದಿಸುವುದು ಹೇಗೆ?
ಆನ್‌ಲೈನ್‌ನಲ್ಲಿ ಬೈಕ್ ಖರೀದಿಸುವ ಪ್ರಕ್ರಿಯೆ ಕೂಡ ಅತ್ಯಂತ ಸರಳವಾಗಿದೆ. ಗ್ರಾಹಕರು ಅಮೆಜಾನ್ ಅಥವಾ ಫ್ಲಿಪ್‌ಕಾರ್ಟ್‌ನಲ್ಲಿ ತಮಗೆ ಇಷ್ಟವಾದ ಯೆಜ್ಡಿ ಬೈಕ್ ಅನ್ನು ಆಯ್ಕೆ ಮಾಡಿ, ಅಲ್ಲಿ ನಿಗದಿಪಡಿಸಲಾದ ಎಕ್ಸ್-ಶೋರೂಮ್ ಬೆಲೆಯನ್ನು ಪಾವತಿಸಬೇಕು.
ಆನ್‌ಲೈನ್ ಬುಕಿಂಗ್ ಆದ ತಕ್ಷಣ, ನಿಮ್ಮ ಹತ್ತಿರದ ಅಧಿಕೃತ ಸ್ಥಳೀಯ ಡೀಲರ್ ನಿಮ್ಮನ್ನು ಸಂಪರ್ಕಿಸಿ ಆರ್ಡರ್ ಅನ್ನು ದೃಢೀಕರಿಸುತ್ತಾರೆ.
ಉಳಿದ ಹಣ ಪಾವತಿ, ವಿಮೆ ಮತ್ತು ವಾಹನ ನೋಂದಣಿ ಪ್ರಕ್ರಿಯೆಗಳಿಗೆ ಡೀಲರ್‌ಗಳೇ ಸಂಪೂರ್ಣ ಸಹಾಯ ಮಾಡುತ್ತಾರೆ. ಎಲ್ಲಾ ದಾಖಲಾತಿಗಳು ಮುಗಿದ ನಂತರ, ಗ್ರಾಹಕರು ತಮ್ಮ ಹತ್ತಿರದ ಜಾವಾ-ಯೆಜ್ಡಿ ಶೋರೂಮ್‌ಗೆ ತೆರಳಿ ವಾಹನವನ್ನು ಡೆಲಿವರಿ ಪಡೆಯಬಹುದು.
ಪ್ರಸ್ತುತ ದೇಶಾದ್ಯಂತ 450 ಕ್ಕೂ ಹೆಚ್ಚು ಶೋರೂಮ್‌ಗಳಿದ್ದು, ಈ ಇ-ಕಾಮರ್ಸ್ ಬುಕಿಂಗ್ ಪ್ರಕ್ರಿಯೆಯು ಗ್ರಾಹಕರಿಗೆ ಆನ್‌ಲೈನ್ ಖರೀದಿಯ ಸುಲಭ ದಾರಿಯನ್ನು ಒದಗಿಸಿದೆ.
ವಾರಂಟಿ ಮತ್ತು ಮಾಲೀಕತ್ವದ ಸೌಲಭ್ಯಗಳು
ಗ್ರಾಹಕರಿಗೆ ನೆಮ್ಮದಿಯ ಮಾಲೀಕತ್ವದ ಅನುಭವವನ್ನು ನೀಡಲು ಜಾವಾ ಯೆಜ್ಡಿ ಮೋಟಾರ್‌ಸೈಕಲ್ಸ್ ‘ಓನರ್‌ಶಿಪ್ ಅಶ್ಯೂರೆನ್ಸ್ ಪ್ರೋಗ್ರಾಂ’ ಅನ್ನು ನೀಡುತ್ತಿದ್ದು, ಈ ಕೆಳಗಿನ ಸೌಲಭ್ಯಗಳನ್ನು ಒಳಗೊಂಡಿದೆ.
* 4-ವರ್ಷ ಅಥವಾ 50,000-ಕಿ.ಮೀ ವರೆಗೆ ಸ್ಟ್ಯಾಂಡರ್ಡ್ ವಾರಂಟಿ.
* ವಾರಂಟಿಯನ್ನು 6 ವರ್ಷಗಳವರೆಗೆ ವಿಸ್ತರಿಸುವ ಅವಕಾಶ.
* 8 ವರ್ಷಗಳವರೆಗೆ ರೋಡ್‌ಸೈಡ್ ಅಸಿಸ್ಟೆನ್ಸ್ ಸೌಲಭ್ಯ.
* ದೇಶಾದ್ಯಂತ ಅನ್ವಯವಾಗುವಂತೆ 5 ವರ್ಷಗಳವರೆಗೆ ಎಎಂಸಿ ಸೌಲಭ್ಯ.
* ದೇಶಾದ್ಯಂತ ಇರುವ 450 ಕ್ಕೂ ಹೆಚ್ಚು ಸೇಲ್ಸ್ ಮತ್ತು ಸರ್ವಿಸ್ ಕೇಂದ್ರಗಳಲ್ಲಿ ಸಮಗ್ರ ಮಾಲೀಕತ್ವದ ಬೆಂಬಲ ಲಭ್ಯ.
