ಟೆಸ್ಟ್ ರೈಡ್ ಮಾಡಿ, ಉಚಿತವಾಗಿ ಡ್ರೀಮ್ ಬೈಕ್ ಗೆಲ್ಲಿ!: ‘ಜಾವಾ ಯೆಜ್ಡಿ’ಯಿಂದ ದೀಪಾವಳಿ ಧಮಾಕಾ ಆಫರ್‌

Your paragraph text 2026 11 03T142625.716

ಬೆಂಗಳೂರು: ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್ ಖರೀದಿಸುವ ಕನಸು ಕಾಣುತ್ತಿರುವವರಿಗೆ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಂಪನಿ ಭರ್ಜರಿ ಆಫರ್‌ ಘೋಷಿಸಿದೆ. ಬೈಕ್ ಪ್ರಿಯರ ಕನಸನ್ನು ನನಸು ಮಾಡಲು ಮಾತೃಸಂಸ್ಥೆ ಕ್ಲಾಸಿಕ್ ಲೆಜೆಂಡ್ಸ್ ಭರ್ಜರಿ ಫೈನಾನ್ಸ್ ಆಫರ್‌ಗಳ ಜೊತೆಗೆ ‘ಟೆಸ್ಟ್ ರೈಡ್ ಮಾಡಿ, ನಿಮ್ಮ ಡ್ರೀಮ್ ಬೈಕ್ ಗೆಲ್ಲಿ’ ಎಂಬ ವಿಶೇಷ ಅಭಿಯಾನವನ್ನು ಘೋಷಿಸಿದೆ.

ನೀವು ಹತ್ತಿರದ ಜಾವಾ-ಯೆಜ್ಡಿ ಶೋರೂಮ್‌ಗೆ ಭೇಟಿ ನೀಡಿ, ನಿಮಗೆ ಇಷ್ಟವಾದ ಬೈಕ್ ಅನ್ನು ಕೇವಲ ‘ಟೆಸ್ಟ್ ರೈಡ್’ ಮಾಡಿದರೆ ಸಾಕು, ನೀವು ಆ ಬೈಕ್ ಅನ್ನು ಉಚಿತವಾಗಿ ಗೆಲ್ಲುವ ಅದೃಷ್ಟಶಾಲಿಗಳಾಗಬಹುದು. ಇದರ ಜೊತೆಗೆ, ಗ್ರಾಹಕರಿಗೆ ಬೈಕ್ ಖರೀದಿಯನ್ನು ಇನ್ನಷ್ಟು ಸುಲಭಗೊಳಿಸಲು ಕಂಪನಿಯು ಅತ್ಯಾಕರ್ಷಕ ಹಣಕಾಸು ಆಯ್ಕೆಗಳನ್ನು ಸಹ ಒದಗಿಸುತ್ತಿದೆ:

ಅತಿ ಕಡಿಮೆ ಇಎಂಐ: ನಿಮ್ಮ ಸಾಲದ ಮೊತ್ತದ ಪ್ರತಿ ಒಂದು ಲಕ್ಷ ರೂಪಾಯಿಗೆ, ಮಾಸಿಕ ಕಂತು ಕೇವಲ 1,888 ರೂ.ಗಳಿಂದ ಪ್ರಾರಂಭವಾಗುತ್ತದೆ.
ಕಡಿಮೆ ಬಡ್ಡಿ ದರ: ಸಾಲದ ಮೇಲಿನ ಬಡ್ಡಿ ದರವು ಶೇ. 4.75ರಿಂದ ಶುರುವಾಗುತ್ತದೆ.
ಕಡಿಮೆ ಡೌನ್ ಪೇಮೆಂಟ್: ಕೇವಲ 4,999 ರೂ.ಗಳಷ್ಟು ಕಡಿಮೆ ಮುಂಗಡ ಹಣ ಕಟ್ಟಿ ನಿಮ್ಮ ನೆಚ್ಚಿನ ಬೈಕ್ ಅನ್ನು ಮನೆಗೊಯ್ಯಬಹುದು.

ಈ ಅತ್ಯಾಕರ್ಷಕ ಆಯ್ಕೆಗಳು ಗ್ರಾಹಕರಿಗೆ ಯಾವುದೇ ಆರ್ಥಿಕ ಹೊರೆಯಿಲ್ಲದೆ, ಸುಲಭವಾಗಿ ವಾಹನ ಖರೀದಿಸಲು ಅನುವು ಮಾಡಿಕೊಡಲಿವೆ.

ಜಾವಾ, ಯೆಜ್ಡಿ ಅಥವಾ ಬಿಎಸ್‌ಎ ಬೈಕ್‌ಗಳು ತಮ್ಮದೇ ಆದ ವಿಶಿಷ್ಟ ಇತಿಹಾಸ ಮತ್ತು ಗಾಂಭೀರ್ಯವನ್ನು ಹೊಂದಿವೆ. ಹಳೆಯ ಕಾಲದ ಟೈಮ್‌ಲೆಸ್ ಸ್ಟೈಲ್ ಇಷ್ಟಪಡುವವರಿಗೆ ‘ಜಾವಾ’, ಸಾಹಸ ಮತ್ತು ಬೋಲ್ಡ್ ಲುಕ್ ಬಯಸುವವರಿಗೆ ‘ಯೆಜ್ಡಿ’ ಹಾಗೂ ಬ್ರಿಟಿಷ್ ಕರಕುಶಲತೆಯ ಗತ್ತು ಬೇಕೆನ್ನುವವರಿಗೆ ‘ಬಿಎಸ್‌ಎ’ ಹೇಳಿ ಮಾಡಿಸಿದ ಬೈಕ್‌ಗಳಾಗಿವೆ. ಪ್ರತಿಯೊಬ್ಬ ಸವಾರನೂ ತನ್ನ ವ್ಯಕ್ತಿತ್ವಕ್ಕೆ ಒಪ್ಪುವ ಬೈಕ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.

ಈ ಹಬ್ಬದ ಕೊಡುಗೆಗಳ ಕುರಿತು ಮಾತನಾಡಿದ ಕ್ಲಾಸಿಕ್ ಲೆಜೆಂಡ್ಸ್ ಸಹ-ಸಂಸ್ಥಾಪಕ ಅನುಪಮ್ ಥರೇಜಾ, “ಬಹಳಷ್ಟು ಜನರಿಗೆ ತಾವು ಇಷ್ಟಪಡುವ ಬೈಕ್ ಅನ್ನು ಖರೀದಿಸುವುದು ಒಂದು ದೊಡ್ಡ ಕನಸಾಗಿರುತ್ತದೆ. ರಸ್ತೆಯಲ್ಲಿ ಹೋಗುವಾಗಲೋ, ಆನ್‌ಲೈನ್‌ನಲ್ಲೋ ಅಥವಾ ಸ್ನೇಹಿತರ ಬಳಿಯೋ ಆ ಬೈಕ್ ನೋಡಿ ತಾವು ಅದನ್ನು ಕೊಳ್ಳಬೇಕು ಎಂದು ಬಯಸುತ್ತಾರೆ. ಈ ದೀಪಾವಳಿಯಂದು ಅವರ ಆ ಕನಸನ್ನು ನನಸು ಮಾಡಲು ನಾವು ಬಯಸಿದ್ದೇವೆ. ನಮ್ಮ ಬ್ರ್ಯಾಂಡ್‌ಗಳು ಸವಾರರೊಂದಿಗೆ ಬಲವಾದ ಭಾವನಾತ್ಮಕ ಬಂಧವನ್ನು ಹೊಂದಿವೆ. ಈ ಅತ್ಯಾಕರ್ಷಕ ಆಫರ್‌ಗಳು ಮತ್ತು ಟೆಸ್ಟ್ ರೈಡ್ ಅಭಿಯಾನವು ಗ್ರಾಹಕರನ್ನು ಅವರ ನೆಚ್ಚಿನ ಮೋಟಾರ್‌ಸೈಕಲ್‌ಗಳಿಗೆ ಇನ್ನಷ್ಟು ಹತ್ತಿರ ತರಲಿದೆ,” ಎಂದು ಅಭಿಪ್ರಾಯಪಟ್ಟರು.

ಹಾಗಾದ್ರೆ ಇನ್ನೇಕೆ ತಡ? ನಿಮ್ಮ ಕನಸಿನ ಬೈಕ್ ನಿಮ್ಮದಾಗಿಸಿಕೊಳ್ಳಲು ಈ ದೀಪಾವಳಿ ಹಬ್ಬವನ್ನು ಸದುಪಯೋಗಪಡಿಸಿಕೊಳ್ಳಿ. ಇಂದೇ ನಿಮ್ಮ ಹತ್ತಿರದ ‘ಜಾವಾ ಯೆಜ್ಡಿ’ ಅಧಿಕೃತ ಶೋರೂಮ್‌ಗೆ ಭೇಟಿ ನೀಡಿ, ಟೆಸ್ಟ್ ರೈಡ್ ಮಾಡಿ ಹಾಗೂ ಬೈಕ್ ಗೆಲ್ಲುವ ಅವಕಾಶ ನಿಮ್ಮದಾಗಿಸಿಕೊಳ್ಳಿ.

Exit mobile version