ಮೀರತ್‌ನಲ್ಲಿ ನಮೋ ಭಾರತ್ ರೈಲು ಮತ್ತು ಮೀರತ್ ಮೆಟ್ರೋ ರೈಲು ವಿಸ್ತರಣೆ ಸೇರಿದಂತೆ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನಂತರ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ಪಕ್ಷವನ್ನು ತೀವ್ರವಾಗಿ ಟೀಕಿಸಿದರು. ಇತ್ತೀಚೆಗೆ ನಡೆದ ಇಂಡಿಯಾ AI ಇಂಪ್ಯಾಕ್ಟ್ ಸಮ್ಮೇಳನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ನಡೆಸಿದ ಅರೆಬೆತ್ತಲೆ ಪ್ರತಿಭಟನೆಯನ್ನು ಉಲ್ಲೇಖಿಸಿ, “ನೀವು ಈಗಾಗಲೇ ಬೆತ್ತಲಾಗಿದ್ದೀರಿ, ಹಾಗಾದರೆ ಬಟ್ಟೆ ಬಿಚ್ಚುವ ಅಗತ್ಯ ಏಕೆ ಬಂತು?” ಎಂದು ವ್ಯಂಗ್ಯವಾಡಿದರು.
ಪ್ರಧಾನಿ ಮೋದಿ ಹೇಳಿದರು: “ದೇಶದ ಅತ್ಯಂತ ಹಳೆಯ ಪಕ್ಷವು ಸೈದ್ಧಾಂತಿಕವಾಗಿ ದಿವಾಳಿಯಾಗಿದೆ ಮತ್ತು ಬಡತನದಲ್ಲಿದೆ ಎಂಬುದನ್ನು ಈ ಪ್ರತಿಭಟನೆ ತೋರಿಸುತ್ತದೆ. ಕಾಂಗ್ರೆಸ್ ತನ್ನದೇ ದೇಶವನ್ನು ದೂಷಿಸುವಲ್ಲಿ ನಿರತವಾಗಿದೆ. ದೇಶದ ಯಶಸ್ಸನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲದ ಕೆಲವು ರಾಜಕೀಯ ಪಕ್ಷಗಳು ಇದ್ದವು.”
ಜಾಗತಿಕ ಕಾರ್ಯಕ್ರಮಕ್ಕೆ ಕೊಳಕು ರಾಜಕೀಯ ಆರೋಪ ಭಾರತದಲ್ಲಿ ನಡೆದ ವಿಶ್ವದ ಅತಿದೊಡ್ಡ AI ಸಮ್ಮೇಳನವನ್ನು ಕಾಂಗ್ರೆಸ್ ತನ್ನ “ಕೊಳಕು ಮತ್ತು ಬೆತ್ತಲೆ ರಾಜಕೀಯ”ಕ್ಕೆ ವೇದಿಕೆಯನ್ನಾಗಿ ಪರಿವರ್ತಿಸಿತು ಎಂದು ಆರೋಪಿಸಿದರು. “ಇದು ಬಿಜೆಪಿ ಕಾರ್ಯಕ್ರಮವಲ್ಲ, ರಾಷ್ಟ್ರೀಯ ಕಾರ್ಯಕ್ರಮವಾಗಿತ್ತು. ವಿದೇಶಿ ಅತಿಥಿಗಳ ಮುಂದೆ ಕಾಂಗ್ರೆಸ್ ನಾಯಕರು ಬೆತ್ತಲೆಯಾಗಿ ಬಂದರು. ದೇಶವೇ ನಿಮ್ಮ ನಿಜ ಸ್ವರೂಪ ತಿಳಿದಿದೆ, ಇನ್ನೂ ಬಟ್ಟೆ ಬಿಚ್ಚುವ ಅಗತ್ಯ ಏಕೆ?” ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರು ತನ್ನನ್ನು ದ್ವೇಷಿಸುತ್ತಾರೆ, ತನ್ನ ಸಮಾಧಿಯನ್ನು ಮಾಡಲು ಬಯಸುತ್ತಾರೆ ಮತ್ತು ತನ್ನ ತಾಯಿಯನ್ನೂ ಅವಮಾನಿಸಲು ಹಿಂಜರಿಯುವುದಿಲ್ಲ ಎಂದು ಆರೋಪಿಸಿದರು. ಕಾಂಗ್ರೆಸ್‌ನ ಈ ನಡೆಯನ್ನು ಇಡೀ ದೇಶ ಖಂಡಿಸುತ್ತಿದೆ ಎಂದು ಹೇಳಿದರು.
ಮಿತ್ರಪಕ್ಷಗಳಿಂದಲೇ ವಿರೋಧ ಪ್ರಧಾನಿ ಮೋದಿ ಯುವ ಕಾಂಗ್ರೆಸ್ ಪ್ರತಿಭಟನೆಯನ್ನು ಟೀಕಿಸಿದ್ದಕ್ಕಾಗಿ ವಿರೋಧ ಪಕ್ಷಗಳಿಗೆ ಧನ್ಯವಾದ ಅರ್ಪಿಸಿದರು. ತೃಣಮೂಲ ಕಾಂಗ್ರೆಸ್, ದ್ರಾವಿಡ ಮುನ್ನೇತ್ರ ಕಳಗಂ, ಬಹುಜನ ಸಮಾಜ ಪಕ್ಷ ಮತ್ತು ಜಮ್ಮು-ಕಾಶ್ಮೀರ ನ್ಯಾಷನಲ್ ಕಾನ್ಫರೆನ್ಸ್ ಸೇರಿದಂತಹ ಮಿತ್ರಪಕ್ಷಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ ಎಂದು ಉಲ್ಲೇಖಿಸಿ, ಇದು ಕೇವಲ ಕಾಂಗ್ರೆಸ್‌ನ ಸೀಮಿತ ಕೃತ್ಯ ಎಂದು ಹೇಳಿದರು. ಸತ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪರವಾಗಿ ನಿಂತಿರುವುದಕ್ಕಾಗಿ ಅವರಿಗೆ ಧನ್ಯವಾದಗಳು ಎಂದರು.
ಪ್ರತಿಭಟನಾಕಾರರ ಬಂಧನ ಎಐ ಸಮ್ಮೇಳನದಲ್ಲಿ ಪ್ರತಿಭಟನೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ನಾನ್-ಬೇಲೆಬಲ್ ಕೇಸ್ ದಾಖಲಾಗಿದೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಕೃಷ್ಣ ಹರಿ, ಬಿಹಾರ ಯುವ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ ಕುಂದನ್ ಯಾದವ್, ಯುಪಿ ಯುವ ಕಾಂಗ್ರೆಸ್ ಉಪಾಧ್ಯಕ್ಷ ಅಜಯ್ ಕುಮಾರ್ ಮತ್ತು ರಾಷ್ಟ್ರೀಯ ಸಂಯೋಜಕ ನರಸಿಂಹ ಯಾದವ್ ಸೇರಿದಂತಹ ನಾಲ್ವರನ್ನು ಬಂಧಿಸಲಾಗಿದ್ದು, ಅವರನ್ನು 5 ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಈ ಘಟನೆಯು ರಾಜಕೀಯ ವಲಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದ್ದು, ಪ್ರಧಾನಿ ಮೋದಿಯವರ ತೀವ್ರ ಟೀಕೆಯಿಂದ ಕಾಂಗ್ರೆಸ್‌ಗೆ ದೊಡ್ಡ ಆಘಾತವಾಗಿದೆ.





