ಜನ್ಮಸಂಖ್ಯೆ 1, 10, 19, 28
ಇಂದು ನೀವು ಪ್ಲಾನ್ ಬಿ ಸಿದ್ಧಪಡಿಸಿಕೊಳ್ಳುವುದರಿಂದ ದೊಡ್ಡ ಸಂಕಷ್ಟದಿಂದ ಪಾರಾಗುವಿರಿ. ಕಠಿಣ ಸವಾಲುಗಳನ್ನು ಸಲೀಸಾಗಿ ಎದುರಿಸುವ ನಿಮ್ಮ ಜಾಣ್ಮೆಗೆ ಇತರರು ಬೆರಗಾಗಲಿದ್ದಾರೆ. ಆರ್ಥಿಕವಾಗಿ ಇಂದು ನಿಮಗೆ ಶುಭದಿನ. ಅಂದುಕೊಂಡಿದ್ದಕ್ಕಿಂತ ಕಡಿಮೆ ಖರ್ಚಿನಲ್ಲಿ ಕೆಲಸಗಳು ಪೂರ್ಣಗೊಳ್ಳಲಿವೆ. ಉದ್ಯೋಗ ಬದಲಿಸಿ ಹೊಸ ವ್ಯಾಪಾರ ಆರಂಭಿಸುವ ಬಗ್ಗೆ ಸ್ನೇಹಿತರೊಂದಿಗೆ ಗಂಭೀರ ಚರ್ಚೆ ನಡೆಸುವಿರಿ.
ಜನ್ಮಸಂಖ್ಯೆ 2, 11, 20, 29
ಸಹೋದ್ಯೋಗಿಗಳು ನಿಮ್ಮನ್ನು ಕೆಲವು ಬದಲಾವಣೆಗಳಿಗೆ ಒಪ್ಪಿಸಲು ಪ್ರಯತ್ನಿಸಬಹುದು. ನಿಮ್ಮ ಬದ್ಧತೆ ಮತ್ತು ಸಾಮರ್ಥ್ಯದ ಬಗ್ಗೆ ಇಂದು ಮುಕ್ತವಾಗಿ ಮಾತನಾಡಲಿದ್ದೀರಿ. ಕೆಲವು ಗುಪ್ತ ವಿಚಾರಗಳನ್ನು ಹಂಚಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಆತಂಕ ಬೇಡ, ವೈದ್ಯಕೀಯ ಪರೀಕ್ಷೆಗಳಲ್ಲಿ ಯಾವುದೇ ಗಂಭೀರ ಸಮಸ್ಯೆ ಇಲ್ಲದಿರುವುದು ಸಾಬೀತಾಗಿ ನೆಮ್ಮದಿ ನೀಡಲಿದೆ.
ಜನ್ಮಸಂಖ್ಯೆ 3, 12, 21, 30
ಇಂದು ವಾಸ್ತವದ ಅರಿವಿರಲಿ. ಬೇರೆಯವರಿಂದ ಬರಬೇಕಾದ ಹಣ ಅಥವಾ ಸಹಾಯದ ಭರವಸೆಯನ್ನು ನಂಬಿ ಹೊಸ ಪ್ರಾಜೆಕ್ಟ್‌ಗಳಿಗೆ ಕೈ ಹಾಕಬೇಡಿ. ನಿಮ್ಮ ಕೈಯಲ್ಲಿರುವ ಹಣದ ಮೇಲೆ ಮಾತ್ರ ನಂಬಿಕೆ ಇಡಿ. ಹೋಟೆಲ್ ಉದ್ಯಮಿಗಳಿಗೆ ಇಂದು ಹೆಚ್ಚಿನ ಲಾಭ ದೊರೆಯಲಿದೆ. ಪ್ರೇಮಿಗಳಿಗೆ ಇಂದು ಮಧುರ ಕ್ಷಣಗಳನ್ನು ಕಳೆಯುವ ಯೋಗವಿದೆ.
ಜನ್ಮಸಂಖ್ಯೆ 4, 13, 22, 31
ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವ ಮೂಲಕ ಮಾನಸಿಕ ಶಾಂತಿ ಪಡೆಯುವಿರಿ. ಬಾಕಿ ಉಳಿದಿರುವ ಹಣವನ್ನು ವಸೂಲಿ ಮಾಡಲು ಇಂದು ಸೂಕ್ತ ದಿನ. ಬಹಳ ದಿನಗಳಿಂದ ಮನಸ್ಸಿನಲ್ಲಿ ಅಡಗಿದ್ದ ಮಾತುಗಳನ್ನು ಸಂಬಂಧಪಟ್ಟವರಿಗೆ ನೇರವಾಗಿ ತಿಳಿಸುವಿರಿ. ವಿದ್ಯಾರ್ಥಿಗಳು ಏಕಾಗ್ರತೆಯ ಕೊರತೆ ಅನುಭವಿಸಬಹುದು. ಸ್ನೇಹಿತರೊಂದಿಗೆ ದೂರ ಪ್ರಯಾಣದ ಸಾಧ್ಯತೆಗಳಿವೆ.
ಜನ್ಮಸಂಖ್ಯೆ 5, 14, 23
ಮನೆಯ ಖರ್ಚು ವೆಚ್ಚಗಳು ನಿಮ್ಮ ಬಜೆಟ್ ಮೀರುವ ಸಾಧ್ಯತೆ ಇದೆ. ಆದಾಯ ಮತ್ತು ಖರ್ಚಿನ ನಡುವೆ ಸಮತೋಲನ ಕಾಪಾಡುವುದು ಸವಾಲಾಗಲಿದೆ. ಹೆಚ್ಚುವರಿ ಆದಾಯದ ಮೂಲಕ್ಕಾಗಿ ನೀವು ಪಡುವ ಶ್ರಮ ಇಂದು ಫಲ ನೀಡಲಿದೆ. ಸಂಗಾತಿಯೊಂದಿಗೆ ಗುಣಮಟ್ಟದ ಸಮಯ ಕಳೆಯುವಿರಿ. ನಿಮ್ಮ ಕೆಲವು ನಿಲುವುಗಳಿಗೆ ಸಂಬಂಧಿಕರಿಂದ ವಿರೋಧ ವ್ಯಕ್ತವಾಗಬಹುದು.
ಜನ್ಮಸಂಖ್ಯೆ 6, 15, 24
ಇಂದು ನಿರ್ಭಾವುಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸು ಮಾಡಲಿದ್ದೀರಿ. ಕೆಲಸದ ಸ್ಥಳದಲ್ಲಿ ನಿಮ್ಮ ಮೇಲೆ ಹೊರಿಸಲಾದ ಜವಾಬ್ದಾರಿಗಳು ಅಸಾಧ್ಯವೆನಿಸಬಹುದು. ನೀವು ನಂಬಿದ್ದ ವ್ಯಕ್ತಿಗಳು ಕೊನೆ ಕ್ಷಣದಲ್ಲಿ ಕೈಕೊಡುವುದರಿಂದ ಇಕ್ಕಟ್ಟಿಗೆ ಸಿಲುಕುವಿರಿ. ಆದರೆ, ಕೊಟ್ಟ ಮಾತಿನಂತೆ ನಡೆಯುವ ನಿಮ್ಮ ಬದ್ಧತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಲಿದೆ. ಪ್ರಯಾಣದ ವೆಚ್ಚ ಹೆಚ್ಚಾಗಬಹುದು.
ಜನ್ಮಸಂಖ್ಯೆ 7, 16, 25
ಮನಸ್ಸಿನಲ್ಲಿ ಇಂದು ಉತ್ಸಾಹದ ಕೊರತೆ ಇರಲಿದೆ. ಆದಾಯದ ಇಳಿಕೆ ಮತ್ತು ಪ್ರಯತ್ನಗಳ ವಿಫಲತೆ ನಿಮ್ಮನ್ನು ಚಿಂತಿತರನ್ನಾಗಿ ಮಾಡಬಹುದು. ಉದ್ಯೋಗದಲ್ಲಿ ನಿಮ್ಮನ್ನು ಕಡೆಗಣಿಸುತ್ತಿರುವ ಭಾವನೆ ಕಾಡಲಿದ್ದು, ಈ ಬಗ್ಗೆ ಪ್ರಶ್ನಿಸುವಿರಿ. ಆರೋಗ್ಯದ ಬಗ್ಗೆ ಜಾಗ್ರತೆಯಿರಲಿ, ಪ್ರಾಣಿಗಳಿಂದ ಕಡಿತಕ್ಕೊಳಗಾಗುವ ಸಾಧ್ಯತೆ ಇದೆ, ಎಚ್ಚರದಿಂದಿರಿ.
ಜನ್ಮಸಂಖ್ಯೆ 8, 17, 26
ಮನಸ್ಸಿಗೆ ನೆಮ್ಮದಿ ನೀಡುವಂತಹ ದಿನವಿದು. ಉದ್ಯೋಗಾಕಾಂಕ್ಷಿಗಳಿಗೆ ಪ್ರತಿಷ್ಠಿತ ಸಂಸ್ಥೆಗಳಿಂದ ಕರೆ ಬರಬಹುದು. ವೃತ್ತಿಪರರು ಇಂದು ಕೆಲವು ಕ್ಲೈಂಟ್ ಸಂಬಂಧಗಳನ್ನು ಕಡಿದುಕೊಳ್ಳುವ ನಿರ್ಧಾರ ತೆಗೆದುಕೊಳ್ಳಬಹುದು. ಸ್ನೇಹಿತರೊಂದಿಗೆ ಸೇರಿ ಊಟ-ತಿಂಡಿಗಾಗಿ ದೂರದ ಸ್ಥಳಗಳಿಗೆ ಭೇಟಿ ನೀಡುವಿರಿ. ಕೋರ್ಟ್ ವ್ಯವಹಾರಗಳಲ್ಲಿ ಸಂಧಾನದ ಪ್ರಸ್ತಾಪ ಬರಲಿದೆ.
ಜನ್ಮಸಂಖ್ಯೆ 9, 18, 27
ಸ್ನೇಹಿತರು ನಿಮ್ಮ ಮೇಲೆ ಪ್ರಭಾವ ಬೀರಲು ಅಥವಾ ಹಿಡಿತ ಸಾಧಿಸಲು ಪ್ರಯತ್ನಿಸಬಹುದು, ಇದು ನಿಮಗೆ ಕಿರಿಕಿರಿ ಉಂಟುಮಾಡಲಿದೆ. ಆಸ್ತಿ, ಜಮೀನು ಅಥವಾ ಮನೆ ನಿರ್ಮಾಣದ ಕೆಲಸಗಳಲ್ಲಿ ತೊಡಗಿರುವವರು ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ. ನಿಯಮಾನುಸಾರ ಕೆಲಸಗಳು ನಡೆಯುತ್ತಿವೆಯೇ ಎಂದು ಖಚಿತಪಡಿಸಿಕೊಳ್ಳುವುದು ಉತ್ತಮ.





