ಬಿಗ್ ಬಾಸ್ ಕನ್ನಡ ಸೀಸನ್‌ನ ಭಾನುವಾರದ (ಜನವರಿ 11) ಸಂಚಿಕೆಯು ಭರ್ಜರಿ ಮನರಂಜನೆಯಿಂದ ಕೂಡಿದೆ. ಮನೆಯಲ್ಲಿ ಮೊದಲಿನಿಂದಲೂ ಸಕ್ರಿಯವಾಗಿರುವ ‘ಗಿಲ್ಲಿ’ ನಟ ಅವರು ಇದೀಗ ಸಹಸ್ಪರ್ಧಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸ್ನೇಹದ ನಡುವೆಯೇ ಸಣ್ಣಪುಟ್ಟ ಕಿರಿಕಿರಿಗಳು ನಡೆಯುವುದು ಸಹಜ, ಆದರೆ ಈ ಬಾರಿ ಗಿಲ್ಲಿ ಅವರನ್ನೇ ಮನೆಯ ಸದಸ್ಯರು ಟಾರ್ಗೆಟ್ ಮಾಡಿದ್ದು ವಿಶೇಷವಾಗಿದೆ.
ಗಿಲ್ಲಿಗೆ ಸರಿಯಾದ ಶಿಕ್ಷೆ ನೀಡಿದ ಕಾವ್ಯಾ !
ಮನೆಯಲ್ಲಿ ಗಿಲ್ಲಿ ನಟ ಮತ್ತು ಕಾವ್ಯಾ ಶೈವ ನಡುವೆ ಮೊದಲಿನಿಂದಲೂ ಆತ್ಮೀಯ ಸ್ನೇಹವಿದೆ. ಆದರೆ, ಹಲವು ಬಾರಿ ಗಿಲ್ಲಿ ಅವರ ನಡೆ ಮತ್ತು ಮಾತುಗಳು ಕಾವ್ಯಾಗೆ ಮುಜುಗರ ಹಾಗೂ ಕಿರಿಕಿರಿ ಉಂಟುಮಾಡಿದ್ದವು. ಇಷ್ಟು ದಿನ ಆ ಕೋಪವನ್ನು ಹತ್ತಿಕ್ಕಿಕೊಂಡಿದ್ದ ಕಾವ್ಯಾ ಶೈವ, ಇಂದಿನ ಸಂಚಿಕೆಯಲ್ಲಿ ಸರಿಯಾಗಿ ತೀರಿಸಿಕೊಂಡಿದ್ದಾರೆ. ಮನೆಯ ಟಾಸ್ಕ್ ಅಥವಾ ಫನ್ ಆಕ್ಟಿವಿಟಿಯ ಭಾಗವಾಗಿ ಕಾವ್ಯಾ ಅವರು ಗಿಲ್ಲಿಗೆ ಶಿಕ್ಷೆ ವಿಧಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ. ಟಾಸ್ಕ್‌ನಂತೆ ಕಾವ್ಯ, ನನಗೆ ಇರಿಟೇಟ್ ಮಾಡಿದ್ದಷ್ಟಕ್ಕೂ ಎಂದು ಹೇಳಿ ಗಿಲ್ಲಿ ನಟನ ಕಾಲಿಗೆ ಮತ್ತು ಕೈಗೆ ವಾಕ್ಸ್ ಹಾಕಿದ್ದಾರೆ.
ಟಾರ್ಗೆಟ್ ಆದ ಗಿಲ್ಲಿ ನಟ
ಬರೀ ಕಾವ್ಯಾ ಮಾತ್ರವಲ್ಲದೆ, ಮ್ಯೂಟೆಂಟ್ ರಘು ಕೂಡ ಗಿಲ್ಲಿಗೆ ನಿಂಬೆಹಣ್ಣು ಮತ್ತು ಮೆನಸಿನ ಕಾಯಿಯನ್ನ ತಿನ್ನಿಸುತ್ತಾರೆ. ಅವರ ಜೊತೆಗೆ ರಾಶಿಕಾ ಶೆಟ್ಟಿ ಮತ್ತು ಅಶ್ವಿನಿ ಗೌಡ ಅವರೂ ಕೂಡ ಗಿಲ್ಲಿಯನ್ನೇ ಗುರಿಯಾಗಿಸಿಕೊಂಡು ಈ ಫನ್ ಗೇಮ್ ಆಡಿದ್ದಾರೆ. ಮನೆಯ ಬಹುತೇಕ ಸದಸ್ಯರಿಗೆ ಗಿಲ್ಲಿ ಅವರ ಆಟ ಅಥವಾ ವ್ಯಕ್ತಿತ್ವದ ಮೇಲೆ ಅಸಮಾಧಾನವಿರುವುದು ಈ ಸಂಚಿಕೆಯಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಭಾನುವಾರದ ಸಂಚಿಕೆಯ ಪ್ರೋಮೋ ಈಗಾಗಲೇ ವೈರಲ್ ಆಗಿದ್ದು, ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ.
ಸೋಷಿಯಲ್ ಮೀಡಿಯಾದಲ್ಲಿ ಗಿಲ್ಲಿ ಕ್ರೇಜ್:
ಮನೆಯೊಳಗೆ ಎಷ್ಟೇ ವಿರೋಧವಿದ್ದರೂ, ಮನೆಯ ಹೊರಗೆ ಗಿಲ್ಲಿ ನಟ ಅವರಿಗೆ ಅಭಿಮಾನಿಗಳ ಬೆಂಬಲ ಭರ್ಜರಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅವರ ಫ್ಯಾನ್ ಫಾಲೋಯಿಂಗ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಲವು ವೀಕ್ಷಕರು ಈ ಬಾರಿ ಬಿಗ್ ಬಾಸ್ ಟ್ರೋಫಿ ಗಿಲ್ಲಿ ಅವರ ಪಾಲಾಗಲಿದೆ ಎಂದು ಕಾಮೆಂಟ್ ಮಾಡಿದ್ದಾರೆ.





