ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ಗೆ ಕಾಲಿಟ್ಟಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸಾಂಪ್ರದಾಯಿಕ ನೃತ್ಯ, ಡ್ರಮ್ ಬೀಟ್ ಮತ್ತು ಆತ್ಮೀಯ ಸ್ವಾಗತದೊಂದಿಗೆ ಮೋದಿಯವರಿಗೆ ಭರ್ಜರಿ ವೆಲ್‌ಕಮ್ ಸಿಕ್ಕಿದೆ. ಮುಂದಿನ ಮೂರು ದಿನಗಳ ಕಾಲ ಇಲ್ಲಿಯೇ ಇರುವ ಮೋದಿ, ನಾಳೆ ಮತ್ತು ನಾಡೀದ್ದು (ನ.22 & 23) ನಡೆಯಲಿರುವ 20ನೇ ಜಿ20 ಶೃಂಗಸಭೆಯಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ.
ಆಫ್ರಿಕಾ ಖಂಡದಲ್ಲಿ ಮೊದು ಮೊದಲ ಜಿ20 ಸಮಿಟ್ ಇದೇ ಮೊದಲ ಬಾರಿಗೆ ಆಫ್ರಿಕಾ ಭೂಮಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿದೆ. ಈ ಬಾರಿಯ ಥೀಮ್ “ಐಕ್ಯತೆ, ಸಮಾನತೆ ಮತ್ತು ಸುಸ್ಥಿರತೆ”. ಭಾರತದ ಒತ್ತಾಯದ ಮೇಲೆ ಆಫ್ರಿಕನ್ ಯೂನಿಯನ್‌ಗೆ ಜಿ20 ರಲ್ಲಿ ಶಾಶ್ವತ ಸದಸ್ಯತ್ವ ಸಿಕ್ಕಿರುವುದು ಈ ಸಮಿಟ್‌ನ ದೊಡ್ಡ ಸಾಧನೆಯಾಗಿದೆ.
ಟ್ರಂಪ್ & ಜಿನ್‌ಪಿಂಗ್ ಗೈರು. ಈ ಬಾರಿಯ ಸಮಿಟ್‌ಗೆ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾದ ಅಧ್ಯಕ್ಷ ಶಿ ಜಿನ್‌ಪಿಂಗ್ ಗೈರಾಗಿದ್ದಾರೆ. ಆದರೂ ಮೋದಿಯವರ ಉಪಸ್ಥಿತಿ ಜಿ20 ಚರ್ಚೆಗಳಲ್ಲಿ ಭಾರತದ ಧ್ವನಿಯನ್ನು ಬಲಪಡಿಸಲಿದೆ.
#WATCH | Prime Minister Narendra Modi lands in Johannesburg, South Africa, to attend the 20th G20 Leaders’ Summit
(Source: ANI/DD) pic.twitter.com/qV6IKd51TU
— ANI (@ANI) November 21, 2025
ಮೋದಿಯವರ 3 ದಿನಗಳ ಅಜೆಂಡಾ ಹೀಗಿದೆ
- ಮೂರು ಪ್ರಮುಖ ಅಧಿವೇಶನಗಳಲ್ಲಿ ಭಾಗಿ
- ಸಮಗ್ರ ಆರ್ಥಿಕ ಬೆಳವಣಿಗೆ
- ಹವಾಮಾನ ಬದಲಾವಣೆ ಸವಾಲುಗಳು
- ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನ ಅಪಾವಕಾಶ ಮತ್ತು ಅಪಾಯಗಳು
- ಹಲವು ದ್ವಿಪಕ್ಷೀಯ ಭೇಟಿಗಳು
- ಭಾರತ-ಬ್ರೆಜಿಲ್-ದಕ್ಷಿಣ ಆಫ್ರಿಕಾ (IBSA) ನಾಯಕರ ಸಭೆ
ಈ ಭೇಟಿಯ ಮೂಲಕ ಗ್ಲೋಬಲ್ ಸೌತ್ ದೇಶಗಳ ಧ್ವನಿಯನ್ನು ಜಿ ಜಿ20 ವೇದಿಕೆಯಲ್ಲಿ ಇನ್ನಷ್ಟು ಬಲಪಡಿಸುವುದು ಮೋದಿಯವರ ಮುಖ್ಯ ಗುರಿಯಾಗಿದೆ.





