ನವದೆಹಲಿಯಲ್ಲಿ ಶಿಕ್ಷಕರ ಕಿರುಕುಳ ಮತ್ತು ನಿಂದನೆಗೆ ಬೇಸತ್ತು 10ನೇ ತರಗತಿಯ ವಿದ್ಯಾರ್ಥಿಯೊಬ್ಬ ಮೆಟ್ರೋ ಸ್ಟೇಷನ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ನಂತರ, ಸಾರ್ವಜನಿಕರ ಪ್ರತಿಭಟನೆ ಮತ್ತು ಒತ್ತಡದ ನಡುವೆ, ಪ್ರಕರಣದಲ್ಲಿ ಭಾಗಿಯಾಗಿದ್ದ ನಾಲ್ವರು ಶಿಕ್ಷಕರನ್ನು ಶಾಲಾ ಆಡಳಿತ ಮಂಡಳಿಯು ಅಮಾನತುಗೊಳಿಸಿದೆ.
ಏನಾಯಿತು ಘಟನೆ?
ದೆಹಲಿಯ ಒಂದು ಶಾಲೆಯ 10ನೇ ತರಗತಿಯ ವಿದ್ಯಾರ್ಥಿಯೊಬ್ಬರು ಮೆಟ್ರೋ ರೈಲು ನಿಲ್ದಾಣದಲ್ಲಿ ಆತ್ಮಹತ್ಯೆ ಮಾಡಿಕೊಂದ್ದಾನೆ. ಆತ್ಮಹತ್ಯೆಗೆ ಕಾರಣ ಏನೆಂದು ಪರಿಶೀಲಿಸಿದಾಗ, ಶಿಕ್ಷಕರು ವಿದ್ಯಾರ್ಥಿ ಮೇಲೆ ಸತತ ಕಿರುಕುಳ ನೀಡುತ್ತಿದ್ದರು. ವಿದ್ಯಾರ್ಥಿಯ ಕುಟುಂಬದವರು ಮತ್ತು ಸ್ನೇಹಿತರು ನೀಡಿದ ಮಾಹಿತಿಯ ಪ್ರಕಾರ, ಕಳೆದ ಒಂದು ವರ್ಷದಿಂದಲೂ ಶಾಲೆಯ ನಾಲ್ವರು ಶಿಕ್ಷಕರು ವಿದ್ಯಾರ್ಥಿಗೆ ಕಿರುಕುಳ ನೀಡುತ್ತಿದ್ದರು ಮತ್ತು ನಿರಂತರವಾಗಿ ನಿಂದಿಸುತ್ತಿದ್ದರು ಎಂದು ತಿಳಿದುಬಂದಿದೆ. ಸತತ ಅವಮಾನದಿಂದಾಗಿ ವಿದ್ಯಾರ್ಥಿ ಖಿನ್ನತೆಗೆ ಒಳಗಾಗಿದ್ದರು, ಅದು ಅಂತಿಮವಾಗಿ ಆತ್ಮಹತ್ಯೆಗೆ ದಾರಿ ಮಾಡಿಕೊಟ್ಟಿತು.
ಸಾರ್ವಜನಿಕರ ಕೋಪ ಮತ್ತು ಪ್ರತಿಭಟನೆ
ಈ ಮಾರಕ ಘಟನೆಯ ವಿವರಗಳು ಬಹಿರಂಗವಾದ ನಂತರ, ಸ್ಥಳೀಯರು ಮತ್ತು ವಿದ್ಯಾರ್ಥಿಯ ಕುಟುಂಬವು ಶಿಕ್ಷಕರ ವಿರುದ್ದ ಪ್ರತಿಭಟನೆ ನಡೆಸಿದರು. ಅಪರಾಧಿ ಶಿಕ್ಷಕರ ವಿರುದ್ಧ ತಕ್ಷಣ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಶಿಕ್ಷಕರ ಕಿರುಕುಳಕ್ಕೆ ಬಲಿಯಾದ ವಿದ್ಯಾರ್ಥಿಗೆ ನ್ಯಾಯ ಬೇಕು ಎಂಬ ಘಷನೆಯೊಂದಿದೆ ಪ್ರತಿಭಟನೆ ನಡೆದಿದೆ.
ಶಿಕ್ಷಕರು ಅಮಾನತು, ಎಫ್ಐಆರ್ ದಾಖಲೆ ಅನುಭವಿ
ಸಾರ್ವಜನಿಕರ ಪ್ರತಿಭಟನೆ ಮತ್ತು ಮಾಧ್ಯಮದ ಒತ್ತಡದ ನಂತರ, ಶಾಲಾ ಸಲಹಾ ಮಂಡಳಿಯು ತಕ್ಷಣದ ಕ್ರಮ ಕೈಗೊಂಡಿದೆ. ಘಟನೆಗೆ ಸಂಬಂಧಿಸಿದ ನಾಲ್ವರು ಶಿಕ್ಷಕರನ್ನು ತಕ್ಷಣ ಅಮಾನತುಗೊಳಿಸಲಾಗಿದೆ ಎಂದು ಆಡಳಿತವು ಘೋಷಿಸಿದೆ. ಅಧಿಕಾರಿಗಳು ಮಾಧ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ, ಈ ಗಂಭೀರ ಆರೋಪಗಳ ಕುರಿತು ವಿಚಾರಣೆ ನಡೆಸಲಾಗುವುದು. ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ, ಆರೋಪಿ ಶಿಕ್ಷಕರ ವಿರುದ್ದ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಅಲ್ಲದೇ, ಪೊಲೀಸರು ವಿದ್ಯಾರ್ಥಿಯ ಕುಟುಂಬದಿಂದ ಬಂದ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಲಾಗುವುದು ಎಂದು ಖಚಿತಪಡಿಸಿದ್ದಾರೆ. ಆರೋಪದ ಮೇಲೆ ಅದಲುಬದಲು ಮಾಡದೆ, ಪೂರ್ಣವಾಗಿ ತನಿಖೆ ನಡೆಸಲಾಗುವುದು ಎಂದು ವಚನ ನೀಡಲಾಗಿದೆ.
ಈ ಘಟನೆಯು ಶಾಲಾ ವಾತಾವರಣದಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆ ಕುರಿತು ಹಲವಾರು ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಶಿಕ್ಷಕರು ನೀಡುವ ಮಾನಸಿಕ ಕಿರುಕುಳದ ವಿರುದ್ಧ ವಿದ್ಯಾರ್ಥಿಗಳಿಗೆ ಸುರಕ್ಷಿತವಾದ ದೂರಿನ ವ್ಯವಸ್ಥೆ ಇದೆಯೇ ? ಶಾಲೆಗಳಲ್ಲಿ ಮಾನಸಿಕ ಆರೋಗ್ಯ ಸಲಹಾ ಕೇಂದ್ರಗಳ ಅಗತ್ಯತೆ ಏನು ? ಎಂದು ಈ ಮೂಲಕ ತಿಳಿಯಬೇಕಿದೆ. ಪ್ರಸ್ಥುತ ಶಿಕ್ಷಕರ ವಿರುದ್ದ ಯಾವ ರೀತಿಯ ಕಠಿಣ ಕ್ರಮಕೈಗೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.





