ತಮಿಳುನಾಡು: ಹೃದಯವಿದ್ರಾವಕ, ಆಘಾತಕಾರಿ ಘಟನೆ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಕೆಲಮಂಗಲಂ ತಾಲೂಕಿನ ಚಿನ್ನಟ್ಟಿ ಗ್ರಾಮದಲ್ಲಿ ನಡೆದಿದೆ. ಸ್ನೇಹಿತೆಯೊಂದಿಗೆ ಸಲಿಂಗ ಸಂಬಂಧದಲ್ಲಿ ತೊಡಗಿದ್ದ ತಾಯಿ ಭಾರತಿ (26), ತನ್ನ 5 ತಿಂಗಳ ಮಗುವೇ ತನ್ನ ರಹಸ್ಯ ಸಂಬಂಧಕ್ಕೆ ಅಡ್ಡಿಯಾಗುತ್ತಿದೆ ಎಂದು ಭಾವಿಸಿ, ಹೆತ್ತ ಮಗುವನ್ನೇ ಕ್ರೂರವಾಗಿ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾಳೆ.
ಭಾರತಿ ಮತ್ತು ಸುರೇಶ್ ದಂಪತಿಗಳಿಗೆ ಈಗಾಗಲೇ ಒಂದು 4 ವರ್ಷದ ಹೆಣ್ಣು ಮಗು ಇತ್ತು. ಎರಡನೇ ಮಗುವಾಗಿ 5 ತಿಂಗಳ ಹಿಂದೆ ಗಂಡು ಮಗು ಜನಿಸಿತ್ತು. ಸುರೇಶ್ ದಿನನಿತ್ಯ ಕೆಲಸಕ್ಕೆ ಹೋಗುತ್ತಿದ್ದ. ಮನೆಯಲ್ಲಿ ಏಕಾಂಗಿಯಾಗಿರುವ ಭಾರತಿ, ಅದೇ ಪ್ರದೇಶದ ಯುವತಿ ಸುಮಿತ್ರಾ (ಸು.24) ಜೊತೆ ಸುಮಾರು 4 ವರ್ಷಗಳಿಂದ ಸಲಿಂಗ ಸಂಬಂಧದಲ್ಲಿದ್ದಳು. ಇಬ್ಬರೂ ಮೊಬೈಲ್‌ನಲ್ಲಿ ದಿನವಿಡೀ ಚಾಟಿಂಗ್ ಮಾಡುತ್ತಿದ್ದರು. ಸ್ನಾನ ಮಾಡುವಾಗ ಬೆತ್ತಲೆಯಾಗಿ ವಿಡಿಯೋ ಕಾಲ್ ಮಾಡಿಕೊಳ್ಳುತ್ತಿದ್ದರು. ರಾತ್ರಿಯಲ್ಲಿ ಮನೆಯವರಿಗೆ ಗೊತ್ತಿಲ್ಲದಂತೆ ರಹಸ್ಯವಾಗಿ ಭೇಟಿಯಾಗುತ್ತಿದ್ದರು.
ಮಗು ಜನಿಸಿದ ಬಳಿಕ ಭಾರತಿಯ ಗಮನ ಸಂಪೂರ್ಣವಾಗಿ ಮಗುವಿನ ಮೇಲೆ ಹೋಯಿತು. ಇದರಿಂದ ಸುಮಿತ್ರಾ ಕೋಪಗೊಂಡಳು. ನೀನು ಮಗುವಿನ ಜೊತೆಯೇ ಇರುತ್ತೀಯಾ, ನನ್ನ ಬಗ್ಗೆ ಕಾಳಜಿ ಇಲ್ಲವೇ? ಎಂದು ಜಗಳ ಮಾಡತೊಡಗಿದಳು. ಭಾರತಿ ಮಗು ಇದ್ದರೆ ನಮ್ಮ ಸಂಬಂಧಕ್ಕೆ ತೊಂದರೆ ಎಂದು ದೂರುತ್ತಿದ್ದಳು. ಈ ಜಗಳದ ಉತ್ತುಂಗದಲ್ಲಿ ಮಗುವನ್ನೇ ಕೊಂದುಬಿಡು, ನಮಗೆ ಯಾರೂ ಅಡ್ಡಿಯಾಗಲ್ಲ ಎಂದು ಸುಮಿತ್ರಾ ಭಾರತಿಗೆ ಸಲಹೆ ನೀಡಿದ್ದಳು.
ಭಾರತಿ ಈ ಕ್ರೂರ ಸಲಹೆಯನ್ನು ಒಪ್ಪಿಕೊಂಡ, ಒಂದು ದಿನ ಸುರೇಶ್ ಕೆಲಸಕ್ಕೆ ಹೋಗಿದ್ದಾಗ, ಮಗುವನ್ನು ತನ್ನ ಎದೆಗೆ ಒತ್ತಿಕೊಂಡು ಉಸಿರುಗಟ್ಟಿಸಿದಳು. ಮಗು ಕಿರಿಚಿಕೊಂಡು ಸತ್ತುಹೋಯಿತು. ನಂತರ ಹಾಲು ಕುಡಿಸುವಾಗ ಉಸಿರುಗಟ್ಟಿ ಸತ್ತುಹೋಯಿತು ಎಂದು ಸುಳ್ಳು ಹೇಳಿ ಮನೆಯವರನ್ನು ಮೋಸಗೊಳಿಸಿದಳು. ಮಗುವಿನ ಅಂತ್ಯಕ್ರಿಯೆಯನ್ನೂ ಮನೆಯವರು ಮಾಡಿದರು. ಯಾರಿಗೂ ಅನುಮಾನ ಬರಲಿಲ್ಲ.
ಆದರೆ ಒಂದು ದಿನ ಸುರೇಶ್ ಭಾರತಿಯ ಮೊಬೈಲ್ ಪರಿಶೀಲಿಸಿದ. ಚಾಟ್‌ಗಳು, ಬೆತ್ತಲೆ ವಿಡಿಯೋಗಳು, ಸುಮಿತ್ರಾ ಜೊತೆಯ ರಹಸ್ಯ ಸಂಭಾಷಣೆಗಳು ಕಂಡುಬಂದವು. ನಂತರ ಭಾರತಿಯನ್ನು ಪ್ರಶ್ನಿಸಿದಾಗ ಆಕೆ ಎಲ್ಲ ಸತ್ಯ ಹೊರಹಾಕಿದ್ದಾಳೆ.
ಸುರೇಶ್ ತಕ್ಷಣ ಕೆಲಮಂಗಲಂ ಪೊಲೀಸ್ ಠಾಣೆಗೆ ದೂರು ನೀಡಿದ. ಪೊಲೀಸರು ಭಾರತಿ ಮತ್ತು ಸುಮಿತ್ರಾ ಇಬ್ಬರನ್ನೂ ಬಂಧಿಸಿದರು. ಆರಂಭಿಕ ತನಿಖೆಯಲ್ಲಿ ಭಾರತಿ ತನ್ನ ಅಪರಾಧವನ್ನು ಒಪ್ಪಿಕೊಂಡಳು. ಸುಮಿತ್ರಾ ನಾನು ಕೇವಲ ಸಲಹೆ ನೀಡಿದ್ದು, ಹತ್ಯೆ ಮಾಡಲಿಲ್ಲ ಎಂದು ಹೇಳಿ ಕೇಸ್‌ನಿಂದ ಬಚಾವ್ ಆಗಲು ಪ್ರಯತ್ನಿಸಿದ್ದಾಳೆ. ಆದರೆ ಪೊಲೀಸರು ಇಬ್ಬರ ವಿರುದ್ಧವೂ ಐಪಿಸಿ ಸೆಕ್ಷನ್ 302, 201, 120ಬಿ ಅಡಿ ಪ್ರಕರಣ ದಾಖಲಿಸಿದ್ದಾರೆ.
ಮಗುವಿನ ಶವಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿದೆ ಎಂಬುದು ದೃಢಪಟ್ಟಿದೆ. ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ. ತಾಯಿಯೇ ಮಗುವನ್ನು ಕೊಲ್ಲುತ್ತಾಳೇ ? ಎಂದು ಸ್ಥಳೀಯರು ಆಘಾತ ವ್ಯಕ್ತಪಡಿಸುತ್ತಿದ್ದಾರೆ.





