ನವದೆಹಲಿ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ದೇಶದ ಜನರಿಗೆ ಪ್ರಧಾನಿ ಮೋದಿ ಪತ್ರ ಬರೆದು ಶುಭಕೋರಿದ್ದಾರೆ. ಇದರ ಜೊತೆಗೆ ದೇಶದ ಭದ್ರತೆ ಮತ್ತು ಸಾಮಾಜಿಕ ಐಕ್ಯತೆಗೆ ಸಂಬಂಧಿಸಿದ ಮಹತ್ವದ ಸಾಧನೆಗಳನ್ನ ನೆನಪಿಸಿಕೊಂಡಿದ್ದಾರೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರ ನಿರ್ಮಾಣದ ನಂತರ ಇದು ಎರಡನೇ ದೀಪಾವಳಿ ಎಂದು ಉಲ್ಲೇಖಿಸಿದ ಮೋದಿ, ಭಗವಾನ್ ಶ್ರೀರಾಮನಿಂದ ನಾವು ಅನ್ಯಾಯದ ವಿರುದ್ಧ ನಿಲ್ಲುವ ಧೈರ್ಯ ಕಲಿಯಬೇಕು ಎಂದಿದ್ದಾರೆ.
ಕೆಲವು ತಿಂಗಳು ಹಿಂದೆ ಪಹಲ್ಲಾಮ್‌ನಲ್ಲಿ ನಡೆದ ಭೀಕರ ಉಗ್ರ ದಾಳಿಗೆ ಪ್ರತಿಯಾಗಿ ಭಾರತ ಈ ಕಾರ್ಯಾಚರಣೆಯನ್ನು ನಡೆಸಿತು. ಈ ಸಂದರ್ಭದಲ್ಲಿ ಮೋದಿ ಅವರು, “ಆಪರೇಷನ್ ಸಿಂಧೂರ ಸಮಯದಲ್ಲಿ ಭಾರತವು ಅನ್ಯಾಯದ ವಿರುದ್ದ ಸೇಡನ್ನೂ ತೀರಿಸಿಕೊಂಡಿದೆ ಎಂದು ಹೇಳಿದ್ದಾರೆ.
ಈ ಬಾರಿಯ ದೀಪಾವಳಿಯ ಮತ್ತೊಂದು ವಿಶೇಷವೆಂದರೆ ನಕ್ಸ್‌ಲಿಸಂ ಹೆಚ್ಚಿರುವ ಪ್ರದೇಶಗಳಲ್ಲಿ ದೀಪಾವಳಿ ಹಬ್ಬ ಆಚರಿಸುತ್ತಿರುವುದು ಕಂಡುಬಂದಿದೆ. ನಕ್ಸಲಿಸಂ ಮತ್ತು ಮಾವೋವಾದಿ ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಿದ ಈ ಜಿಲ್ಲೆಗಳಲ್ಲಿ ದೀಪಾವಳಿ ಆಚರಣೆಯು ದೇಶದ ಐಕ್ಯತೆ ಮತ್ತು ಶಾಂತಿಯ ಸಂಕೇತವಾಗಿದೆ. ಪ್ರ
ದೀಪಾವಳಿಯ ಪ್ರಸಂಗದಿಂದ ಸ್ಫೂರ್ತಿ ಪಡೆದ ಮೋದಿ ಅವರು, ದೇಶವಾಸಿಗಳಿಗೆ ಹಲವಾರು ಮಹತ್ವದ ಸಂದೇಶಗಳನ್ನು ನೀಡಿದ್ದಾರೆ. ಅವರು ನಾವೆಲ್ಲರೂ ಸ್ವದೇಶಿ ಉತ್ಪನ್ನಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಅದರ ಬಗ್ಗೆ ಹೆಮ್ಮೆ ಪಡಬೇಕು ಎಂದು ಕರೆ ನೀಡಿದ್ದಾರೆ. ‘ಏಕ ಭಾರತ, ಶ್ರೇಷ್ಠ ಭಾರತ’ (Ek Bharat, Shreshtha Bharat) ಮನೋಭಾವವನ್ನು ಉತ್ತೇಜಿಸಬೇಕು ಪ್ರತಿಯೊಂದು ಭಾಷೆಯನ್ನು ಗೌರವಿಸಬೇಕು ಎಂದರು. ಸ್ವಚ್ಛತೆ, ಆರೋಗ್ಯ ಮತ್ತು ಯೋಗವನ್ನು ದೈನಂದಿನ ಜೀವನದ ಅಳವಡಿಸಿಕೊಳ್ಳಬೇಕು.ನಮ್ಮ ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು 10% ಕಡಿಮೆ ಮಾಡುವಂತೆ ಸೂಚಿಸಿದ ಮೋದಿ, ಈ ಎಲ್ಲಾ ಪ್ರಯತ್ನಗಳು ಭಾರತವನ್ನು ವಿಕಸಿತ ರಾಷ್ಟ್ರದತ್ತ ವೇಗವಾಗಿ ಕೊಂಡೊಯ್ಯುತ್ತವೆ ಎಂದರು.