ಬೆಂಗಳೂರು: ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವ ರಷ್ಯಾದ ಮಹಿಳೆ ಒಬ್ಬರು ತಮ್ಮ ದಿನಬಳಕೆಯ ವೆಚ್ಚಗಳ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಯೂಲಿಯಾ ಅಸ್ಲಮೋವಾ ಎಂಬ ರಷ್ಯನ್ ಮಹಿಳೆ ಕಳೆದ 11 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.
ಅವರು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡ ವಿಡಿಯೋವೊಂದರಲ್ಲಿ ಬೆಂಗಳೂರಿನ ಜೀವನಶೈಲಿ, ಇಲ್ಲಿ ಜೀವನ ನಡೆಸಲು ಎಷ್ಟು ವೆಚ್ಚವಾಗುತ್ತದೆ ಎಂಬುದರ ಕುರಿತು ವಿವರವಾಗಿ ತಿಳಿಸಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ನಾನು 11 ವರ್ಷಗಳ ಹಿಂದೆ ಉದ್ಯೋಗದ ಸಲುವಾಗಿ ಬೆಂಗಳೂರಿಗೆ ಬಂದೆ. ಪ್ರಾರಂಭದಲ್ಲಿ ನನ್ನ ದೇಶದ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ಪರಿವರ್ತಿಸುತ್ತಿದ್ದೆ. ಆ ಸಮಯದಲ್ಲಿ ರಷ್ಯಾದ ರೂಬಲ್ ಭಾರತೀಯ ರೂಪಾಯಿಗಿಂತ ಬಲವಾಗಿತ್ತು. ಆದರೆ ಇಂದು ಸ್ಥಿತಿ ಸಂಪೂರ್ಣವಾಗಿ ಬದಲಾಗಿದೆ ಎಂದು ಯೂಲಿಯಾ ತಮ್ಮ ವಿಡಿಯೋದಲ್ಲಿ ವಿವರಿಸಿದ್ದಾರೆ.
ಯೂಲಿಯಾ ಬೆಂಗಳೂರು ನಗರವನ್ನು ಬಹಳ ಮೆಚ್ಚಿದ್ದಾರೆ. ವಿಶೇಷವಾಗಿ ಎಚ್ಎಸ್ಆರ್ ಲೇಔಟ್ ಪ್ರದೇಶದ ಸೌಲಭ್ಯಗಳು, ಪರಿಸರ ಮತ್ತು ಜೀವನಶೈಲಿ ಅವರನ್ನು ಆಕರ್ಷಿಸಿದೆ. ಅವರ ಮಾತಿನಿಂದ ಬೆಂಗಳೂರಿನ ಆಧುನಿಕ ಸೌಕರ್ಯಗಳು ಮತ್ತು ಜೀವನ ಪದ್ಧತಿಯ ಇಷ್ಟ ಪಟ್ಟಿದ್ದಾರೆ.
ರಷ್ಯಾದಿಂದ ಬೆಂಗಳೂರಿಗೆ ಬಂದು ನೆಲೆಸಿದ ಯೂಲಿಯಾ, ಈಗ ಭಾರತೀಯ ಜೀವನಶೈಲಿಯಲ್ಲಿ ಸಂಪೂರ್ಣವಾಗಿ ಒಗ್ಗಿಕೊಂಡಿದ್ದಾರೆ. ಅವರು ತಮ್ಮ ವಿಡಿಯೋದಲ್ಲಿ ಬೆಂಗಳೂರಿನ ವಾಸಯೋಗ್ಯತೆ ಮತ್ತು ಇಲ್ಲಿ ವಾಸಿಸುವ ಅನುಕೂಲಗಳ ಬಗ್ಗೆ ವಿಸ್ತಾರವಾಗಿ ವಿವರಿಸಿದ್ದಾರೆ.
ಯೂಲಿಯಾ ಅವರ ವಿಡಿಯೋವನ್ನು ಸೋಶಿಯಲ್ ಮೀಡಿಯಾ ಬಳಕೆದಾರರು ಬಹಳಷ್ಟು ಧನಾತ್ಮಕವಾಗಿ ಸ್ವೀಕರಿಸಿದ್ದಾರೆ. ಅನೇಕರು ಯೂಲಿಯಾ ಅವರ ಅನುಭವಗಳನ್ನು ಹಂಚಿಕೊಂಡಿದ್ದು, ಬೆಂಗಳೂರಿನ ಬಗ್ಗೆ ಅವರಿಗಿರುವ ಪ್ರೀತಿಯನ್ನು ಮೆಚ್ಚಿದ್ದಾರೆ.ಬೆಂಗಳೂರು ದಕ್ಷಿಣ ಭಾರತದ ಪ್ರಮುಖ IT ಹಬ್ ಆಗಿ ವಿದೇಶಿ ನಾಗರಿಕರನ್ನು ಸದಾ ಆಕರ್ಷಿಸಿದೆ. ಯೂಲಿಯಾ ಅವರಂತೆ ಅನೇಕ ವಿದೇಶಿಯರು ಬೆಂಗಳೂರಿನಲ್ಲಿ ನೆಲೆಸಿ, ಇಲ್ಲಿನ ಸಂಸ್ಕೃತಿ ಮತ್ತು ಜೀವನಶೈಲಿಯಲ್ಲಿ ಒಗ್ಗಿಹೋಗಿದ್ದಾರೆ.