ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಯು ಭೂ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಸಂರಕ್ಷಿಸಲು ಮತ್ತು ಸಾರ್ವಜನಿಕರಿಗೆ ಸುಲಭವಾಗಿ ಒದಗಿಸಲು ಭೂ ಸುರಕ್ಷಾ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿಯಲ್ಲಿ 45 ಕೋಟಿ ಪುಟಗಳ ದಾಖಲೆಗಳನ್ನು ಆನ್ಲೈನ್ ಅಪ್ಲೋಡ್ ಮಾಡಲಾಗಿದೆ. ಇದು ರಾಜ್ಯದ ಕಂದಾಯ ದಾಖಲೆ ನಿರ್ವಹಣೆಯಲ್ಲಿ ಒಂದು ಐತಿಹಾಸಿಕ ಮೈಲುಗಲ್ಲಾಗಿದೆ.
→ ಡಿಜಿಟಲೀಕರಣದ ಪ್ರಮುಖ ಅಂಕಿಅಂಶಗಳು
→ ಸಾರ್ವಜನಿಕರಿಗೆ ಅನುಕೂಲಗಳು
-
ದಾಖಲೆಗಳಿಗೆ ಸುಲಭ ಪ್ರವೇಶ: ಈಗ ಸಾರ್ವಜನಿಕರು ತಮ್ಮ ಭೂ ದಾಖಲೆಗಳನ್ನು ಸೇವಾ ಸಿಂಧು ಪೋರ್ಟಲ್ ಮೂಲಕ ಆನ್ಲೈನ್ ನಲ್ಲಿ ಪಡೆಯಬಹುದು. ಕೈಬರಹದ ದಾಖಲೆಗಳನ್ನು ನೀಡುವ ಪದ್ಧತಿಯನ್ನು ಸ್ಥಗಿತಗೊಳಿಸಿ, ಎಲ್ಲ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ಮಾತ್ರ ನೀಡಲಾಗುವುದು.
-
ಸಮಯ ಮಿತಿ: ದಾಖಲೆ ಈಗಾಗಲೇ ಸ್ಕ್ಯಾನ್ ಆಗಿದ್ದರೆ ಒಂದೇ ದಿನದಲ್ಲೂ, ಹೊಸದಾಗಿ ಸ್ಕ್ಯಾನ್ ಆಗದಿದ್ದರೆ ಏಳು ದಿನಗಳೊಳಗಾಗಿಯೂ ದಾಖಲೆಗಳು ಲಭ್ಯವಾಗುವ ನಿರೀಕ್ಷೆ ಇದೆ .
-
ಕಚೇರಿಗೆ ಭೇಟಿ ಕಡಿಮೆ: ಡಿಜಿಟಲ್ ಸೇವೆಗಳಿಂದಾಗಿ ರೈತರು ಮತ್ತು ಸಾಮಾನ್ಯ ನಾಗರಿಕರು ಕಚೇರಿಗಳಿಗೆ ಅಲೆಯುವುದು ತಪ್ಪಲಿದೆ .
→ ದಾಖಲೆಗಳ ಸುರಕ್ಷತೆ ಮತ್ತು ತಂತ್ರಜ್ಞಾನ
-
ದುರುಪಯೋಗ ತಡೆ: ದಾಖಲೆಗಳ ಡಿಜಿಟಲೀಕರಣದಿಂದ ಸುಳ್ಳು ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸುವುದನ್ನು ಗಮನಾರ್ಹವಾಗಿ ತಡೆಯಲು ಸಾಧ್ಯವಾಗಲಿದೆ. ಅನುಮಾನಾಸ್ಪದ ದಾಖಲೆಗಳನ್ನು ಫೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿ ತನಿಖೆ ಮಾಡಲಾಗುವುದು .
-
ಆಧುನಿಕ ರೆಕಾರ್ಡ್ ರೂಮ್‌ಗಳು: ಹೊಸ ಡಿಜಿಟಲ್ ರೆಕಾರ್ಡ್ ಕೊಠಡಿಗಳನ್ನು ಬಯೋಮೆಟ್ರಿಕ್ ಪ್ರವೇಶ ವ್ಯವಸ್ಥೆ, ಸ್ಕ್ಯಾನರ್ಗಳು ಮತ್ತು ಸಿಸಿ ಕ್ಯಾಮೆರಾಗಳೊಂದಿಗೆ ಸ್ಥಾಪಿಸಲಾಗಿದೆ. ಈ ಕೊಠಡಿಗಳು ಡಿಜಿಟಲ್ ಗ್ರಂಥಾಲಯಗಳಂತೆ ಕಾರ್ಯನಿರ್ವಹಿಸಿ, ಭೌತಿಕ ಕಡತಗಳ ಮೇಲಿನ ಅವಲಂಬನೆ ಕಡಿಮೆ ಮಾಡುತ್ತವೆ .
-
ಸುಲಭ ಹುಡುಕಾಟ: ಪ್ರತಿ ದಾಖಲೆಯನ್ನು ಕೀವರ್ಡ್ಗಳೊಂದಿಗೆ ಸೂಚ್ಯಂಕಗೊಳಿಸಲಾಗಿದೆ. ಇದರಿಂದ 50 ವರ್ಷಗಳಷ್ಟು ಹಳೆಯ ದಾಖಲೆಯನ್ನು ಸಹ ಇಂದಿನ ದಾಖಲೆಯಂತೆ ಸುಲಭವಾಗಿ ಹುಡುಕಿ ಪಡೆಯಬಹುದು .
ಯೋಜನೆಯನ್ನು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಪ್ರತಿ ಜಿಲ್ಲೆಯಲ್ಲಿ ಒಂದು ತಾಲೂಕನ್ನು ಪೈಲಟ್ ಪ್ರಾಜೆಕ್ಟ್ ಆಗಿ ಆಯ್ಕೆ ಮಾಡಿ ಕಾರ್ಯನಿರ್ವಹಿಸಲಾಗುತ್ತಿದೆ . ಈಗಾಗಲೇ 26 ತಾಲೂಕುಗಳಲ್ಲಿ ‘ಎ’ ಮತ್ತು ‘ಬಿ’ ವರ್ಗದ ದಾಖಲೆಗಳ ಸ್ಕ್ಯಾನಿಂಗ್ ಪೂರ್ಣಗೊಂಡಿದೆ . ಬೆಂಗಳೂರು ನಗರ ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಮಾತ್ರವೇ ಸುಮಾರು 1 ಕೋಟಿ ದಾಖಲೆಗಳನ್ನು ಸ್ಕ್ಯಾನ್ ಮಾಡುವ ಕಾರ್ಯ ಹಾಗೂ ರೆಕಾರ್ಡ್ ರೂಂಮ್ ಆಧುನೀಕರಣಕ್ಕಾಗಿ 5 ಕೋಟಿ ರೂಪಾಯಿ ಮಂಜೂರಾಗಿದೆ .