ಇನ್ಫೋಸಿಸ್ ಫೌಂಡೇಶನ್‌ನ ಅಧ್ಯಕ್ಷೆಯೂ ಆಗಿರುವ ಖ್ಯಾತ ಲೇಖಕಿ ಮತ್ತು ಸಮಾಜಸೇವಕಿ ಸುಧಾ ಮೂರ್ತಿಯವರು ಸೈಬರ್ ವಂಚಕರ ಗುರಿಯಾಗಿದ್ದಾರೆ. ಇಂದು (ಸೆ.5, 2025) ರಂದು ದೂರಸಂಪರ್ಕ ಸಚಿವಾಲಯದ ಉದ್ಯೋಗಿಯೆಂದು ತನ್ನನ್ನು ಗುರುತಿಸಿಕೊಂಡ ವಂಚಕನೊಬ್ಬ, ಸುಧಾ ಮೂರ್ತಿಯವರಿಗೆ ಕರೆ ಮಾಡಿ, ಅವರ ವೈಯಕ್ತಿಕ ಮಾಹಿತಿಯನ್ನು ಪಡೆಯಲು ಯತ್ನಿಸಿದ್ದಾನೆ. ಆದರೆ ಸುಧಾಮೂರ್ತಿಯವರು ಟ್ರೂಕಾಲರ್ ಬಳಸಿ ನೈಜ್ಯತೆಯನ್ನ ಅರಿತು ಪೊಲೀಸರಿಗೆ ದೂರು ನೀಡಿದ್ದಾರೆ
ಸೈಬರ್ ವಂಚನೆಯ ಯತ್ನ
ವಂಚಕನು ಸುಧಾ ಮೂರ್ತಿಯವರಿಗೆ ಕರೆ ಮಾಡಿ, ನಿಮ್ಮ ಪೋನ್ ನಂಬರ್ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಿಸಿಲ್ಲ ಎಂದು ಹೇಳಿ, ಈ ಸಂಖ್ಯೆಯಿಂದ ಅಶ್ಲೀಲ ವಿಡಿಯೋಗಳನ್ನು ಕಳುಹಿಸಲಾಗುತ್ತಿದೆ ಎಂದು ಬೆದರಿಕೆ ಹಾಕಿದ್ದಾನೆ. ಆದರೆ, ಸುಧಾ ಮೂರ್ತಿಯವರು ಈ ವಂಚನೆಯ ಜಾಲಕ್ಕೆ ಬೀಳದೆ, ತಕ್ಷಣವೇ ಈ ಕರೆಯ ಸತ್ಯಾಸತ್ಯತೆಯನ್ನು ಪರಿಶೀಲಿಸಿದರು.
ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು
ಸುಧಾ ಮೂರ್ತಿಯವರು ಈ ಘಟನೆಯ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ, ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.





