ಕಳೆದ ವರ್ಷ ಮ್ಯಾಕ್ಸ್ ಈ ವರ್ಷ ಮಾರ್ಕ್. ಅದೇ ಡೇಟ್ ಅದೇ ಸೀಸನ್.. ಅದೇ ಬಾಕ್ಸ್ ಆಫೀಸ್ ಎಕ್ಸ್‌ಪೆಕ್ಟೇಷನ್. ಬಾದ್‌ಷಾ ಕಿಚ್ಚ ಸುದೀಪ್ ನಟನೆಯ ಮಾರ್ಕ್ ದಿನದಿಂದ ದಿನಕ್ಕೆ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಒನ್ಸ್ ಅಗೈನ್ ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಫಸ್ಟ್ ಸಾಂಗ್ ಹಿಂಟ್ ಬಿಟ್ಟುಕೊಟ್ಟಿದ್ದಾರೆ ಅಭಿನಯ ಚಕ್ರವರ್ತಿ.
ದಿ ವೆಯ್ಟ್ ಈಸ್ ಓವರ್ ಮಾರ್ಕ್ ಆಲ್ಬಮ್ ಫಸ್ಟ್ ಸಾಂಗ್ ಬರೋ ಟೈಮ್ ಬಂದಿದೆ. ಈ ವಿಷಯವನ್ನು ಸ್ವತಃ ಬಾದ್‌ಷಾ ಕಿಚ್ಚ ಸುದೀಪ್ ಅವರೇ ಅಧಿಕೃತವಾಗಿ ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಖಚಿತ ಪಡಿಸಿದ್ದಾರೆ. ಬ್ರಿಲಿಯೆಂಟ್ ಸ್ಟ್ಯಾಂಡ್‌ಔಟ್ ಕಂಪೊಸಿಷನ್ ಮಾಡಿರೋ ಅಜನೀಶ್ ಲೋಕನಾಥ್ ಹಾಗೂ ತಮಿಳು ಚಿತ್ರರಂಗದ ಸ್ಟಾರ್ ಕೊರಿಯೋಗ್ರಾಫರ್ ಶೋಬಿ ಮಾಸ್ಟರ್ ನೃತ್ಯ ಸಂಯೋಜನೆ ಬಗ್ಗೆ ಹೇಳಿಕೊಂಡಿದ್ದಾರೆ. ಒಂದೊಂದು ಬಿಟ್ ಕೂಡ ಸಖತ್ ಮಜಬೂತಾಗಿದೆ. ಸದ್ಯದಲ್ಲೇ ಫಸ್ಟ್ ಲಿರಿಕಲ್ ಸಾಂಗ್ ಬರಲಿದೆ ಎಂದಿದ್ದಾರೆ ಕಿಚ್ಚ.
ಅಂದು ಮ್ಯಾಕ್ಸ್..ಇಂದು ಮಾರ್ಕ್..ಅದೇ ಲಕ್ಕಿ ಡೇಟ್ ಲಾಕ್
ಅಂದಹಾಗೆ ಮ್ಯಾಕ್ಸ್ ಸಿನಿಮಾಗೂ ಅಜನೀಶ್ ಲೋಕನಾಥ್ ಅವರೇ ಮ್ಯೂಸಿಕ್ ಕಂಪೋಸ್ ಮಾಡಿದ್ರು. ಸದ್ಯ ಮಾರ್ಕ್ ಗೂ ಅವರೇ ಮಾಡಿದ್ದು, ಟೀಸರ್ ಬ್ಯಾಗ್ರೌಂಡ್ ಮ್ಯೂಸಿಕ್‌ನಲ್ಲಿರೋ ಗಮ್ಮತ್ತು, ಚಿತ್ರದಲ್ಲಿರೋ ಸಂಗೀತದ ಗತ್ತಿಗೆ ಕೇರ್ ಆಫ್ ಅಡ್ರೆಸ್ ಆಗಿದೆ. ಕ್ಲಾಸ್‌ಗೂ ಸೈ, ಮಾಸ್‌ಗೂ ಜೈ ಅನ್ನೋ ಅಜನೀಶ್, ಈ ಬಾರಿ ಮ್ಯಾಕ್ಸ್‌ನ ಮೀರಿಸೋ ಅಂತಹ ಬೀಟ್ಸ್ ಕಂಪೋಸ್ ಮಾಡಿದ್ದಾರೆ ಅನ್ನೋ ಟಾಕ್ ಇದೆ.
100% ಡ್ಯಾನ್ಸಿಂಗ್ ಬೀಟ್ಸ್.. ಶೋಬಿ ಮಾಸ್ಟರ್ ಕೊರಿಯೋಗ್ರಫಿ
ಮ್ಯಾಕ್ಸ್‌ನಲ್ಲಿ ಆ್ಯಕ್ಷನ್ ವಿತ್ ಡ್ಯಾನ್ಸಿಂಗ್ ನಂಬರ್ ಮಾಡಿದ್ದ ಡೈರೆಕ್ಟರ್ ವಿಜಯ್ ಕಾರ್ತಿಕೇಯ, ಈ ಬಾರಿ ಏನೆಲ್ಲಾ ಪ್ರಯೋಗಗಳನ್ನ ಮಾಡಿರ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಿದೆ. ಮೂಲಗಳ ಪ್ರಕಾರ ಒಂದೊಳ್ಳೆ ಟಿಪಿಕಲ್ ಡ್ಯಾನ್ಸಿಂಗ್ ನಂಬರ್ ತಯಾರಾಗಿದ್ದು, ಅದರಲ್ಲಿ ಕಿಚ್ಚನ ಸ್ಟೆಪ್ಸ್, ಸೂರ್ಯ ಹಾಗೂ ಧನುಷ್‌ರ ಎವರ್‌ಗ್ರೀನ್ ಸ್ಟೆಪ್ಸ್‌ನ ನೆನಪಿಸುವಂತಿದೆ ಎನ್ನಲಾಗ್ತಿದೆ. ಒಬ್ಬ ಡ್ಯಾನ್ಸರ್‌ನ ಬೆನ್ನ ಮೇಲೆ ಹಾಕಿಕೊಂಡೆಲ್ಲಾ ಸ್ಟೆಪ್ ಹಾಕಿರೋ ಬಾದ್‌ಷಾ, ಮಸ್ತ್ ಮಜಾ ಕೊಡೋದ್ರಲ್ಲಿ ಡೌಟೇ ಇಲ್ಲ.
ಮಾರ್ಕ್ ಮ್ಯೂಸಿಕ್ ಮ್ಯಾಜಿಕ್.. ಬಾದ್‌ಷಾ ಬಿಗ್ ಅಪ್ಡೇಟ್
ಅಂದಹಾಗೆ ಶೋಬಿ ಮಾಸ್ಟರ್ ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರಂತೆ. ಆತ ತಮಿಳಿನ ಬಹುತೇಕ ಎಲ್ಲಾ ಸೂಪರ್ ಸ್ಟಾರ್‌ಗಳ ಹಾರ್ಟ್ ಫೇವರಿಟ್ ನೃತ್ಯ ಸಂಯೋಜಕ. ಹಾಗಾಗಿ ಅವರ ಕೊರಿಯೋಗ್ರಫಿಯಲ್ಲಿ ಮಾರ್ಕ್ ಸಾಂಗ್ ಬೆಂಚ್ ಮಾರ್ಕ್ ಸಾಂಗ್ ಆಗಿ ಉಳಿಯಲಿದೆ ಎನ್ನಲಾಗ್ತಿದೆ. 2016ರಲ್ಲಿ ಜಾಗ್ವಾರ್ ಚಿತ್ರದ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದ ಶೋಬಿ ಮಾಸ್ಟರ್, ಅದಾದ ಬಳಿಕ ಈಗ ಮತ್ತೆ ಮಾರ್ಕ್ ಮೂಲಕ ಕಂಬ್ಯಾಕ್ ಮಾಡಿದ್ದಾರೆ.
ಅಜನೀಶ್ ಕಂಪೋಸ್.. ಫಸ್ಟ್ ಸಾಂಗ್ ಬಗ್ಗೆ ಸುದೀಪ್ ಹಿಂಟ್
ಕಳೆದ ವರ್ಷ ಕ್ರಿಸ್‌ಮಸ್‌ಗೆ ಮ್ಯಾಕ್ಸ್ ಮ್ಯಾಕ್ಸಿಮಮ್ ಎಂಟರ್‌ಟೈನ್ಮೆಂಟ್ ನೀಡಿತ್ತು. ಇದೀಗ ಈ ವರ್ಷದ ಕ್ರಿಸ್‌ಮಸ್‌ಗೆ ಮಾರ್ಕ್ ಬರ್ತಿದೆ. ಅದೇ ಲಕ್ಕಿ ಡೇಟ್ ಮೇಲೆ ಕಣ್ಣು ಹಾಕಿರೋ ಕಿಚ್ಚ ಅಂಡ್ ಮಾರ್ಕ್ ಟೀಂ, ಈ ಬಾರಿ ಎಷ್ಟು ಕೋಟಿ ಲೂಟಿ ಮಾಡುತ್ತೆ ಅನ್ನೋದನ್ನ ನಿರೀಕ್ಷಿಸಬೇಕಿದೆ.