ಬೆಂಗಳೂರು: ಕರ್ನಾಟಕ ರಾಜ್ಯದಾದ್ಯಂತ ಮುಂಗಾರು ಮಳೆ ಜೋರಾಗಿ ಸುರಿಯುತ್ತಿದೆ. ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ ಮತ್ತು ನದಿಗಳ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆಯ ಪ್ರಕಾರ, ನಾಳೆಯಿಂದ ಅಂದರೆ ಆಗಸ್ಟ್ 13ರಿಂದ ಮಳೆಯ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ಜನರು ಸುರಕ್ಷಿತರಾಗಿರಲು ಸಲಹೆ ನೀಡಲಾಗಿದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಕೊಡಗು, ಕೋಲಾರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆಯಿದೆ.
ನಿನ್ನೆ ಮಳೆಯಾಗಿರುವ ಸ್ಥಳಗಳು: ಸಿಂದಗಿ, ಹುಣಸಗಿ, ಗುರುಮಿಟ್ಕಲ್, ಅಫ್ಜಲ್ಪುರ, ಯಡ್ರಾಮಿ, ಮಂಕಿ, ಕುರ್ಡಿ, ಯಾದಗಿರಿ, ಶಾಹಪುರ, ಸೇಡಂ, ರಾಯಲ್ಪಾಡು, ಮಾನ್ವಿ, ಕುಂದಾಪುರ, ಕೋಟಾ, ಕೆಂಭಾವಿ, ಕಕ್ಕೇರಿ, ದೇವರಹಿಪ್ಪರಗಿ, ಚಿತ್ತಾಪುರ್, ಬೆಂಗಳೂರು ಕೆಐಎಎಲ್, ತಾವರಗೇರಾ, ಶಿರಾಲಿ, ಪರಶುರಾಂಪುರ, ನರಗುಂದ, ಮೈಸೂರು, ಜೇವರ್ಗಿ, ಹುಮ್ನಾಬಾದ್, ಹೊಸಕೋಟೆ, ಗೋಕರ್ಣ, ಗೇರುಸೊಪ್ಪ, ಬರಗೂರು, ಆಗುಂಬೆ, ವೈಎನ್ ಹೊಸಕೋಟೆ, ತಿಪಟೂರು, ಸಿದ್ದಾಪುರ, ರಾಯಚೂರು, ಮಿಡಿಗೇಶಿ, ಮದ್ದೂರು, ಕನಕಪುರ, ಕಮ್ಮರಡಿ, ಹಿರಿಯೂರು, ಗುಬ್ಬಿ, ಗೋಪಾಲ್ನಗರ, ಜಿಕೆವಿಕೆ, ಧರ್ಮಸ್ಥಳ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೀದರ್, ಬಾದಾಮಿ ಮತ್ತು ಅಂಕೋಲಾ ಮಳೆಯಾಗಿದೆ.
ಬೆಂಗಳೂರಿನಲ್ಲಿ ಸೋಮವಾರ ಮಳೆ ಸುರಿದಿದ್ದು, ತಾಪಮಾನದ ವಿವರಗಳು:
- ಎಚ್ಎಎಲ್: ಗರಿಷ್ಠ 27.0°C, ಕನಿಷ್ಠ 19.5°C
- ನಗರ: ಗರಿಷ್ಠ 27.0°C, ಕನಿಷ್ಠ 19.7°C
- ಕೆಐಎಎಲ್: ಗರಿಷ್ಠ 26.8°C, ಕನಿಷ್ಠ 19.4°C
- ಜಿಕೆವಿಕೆ: ಗರಿಷ್ಠ 27.2°C, ಕನಿಷ್ಠ 19.2°C
ಇತರ ಪ್ರಮುಖ ಸ್ಥಳಗಳ ತಾಪಮಾನ:
- ಹೊನ್ನಾವರ: ಗರಿಷ್ಠ 29.3°C, ಕನಿಷ್ಠ 23.1°C
- ಕಾರವಾರ: ಗರಿಷ್ಠ 29.6°C, ಕನಿಷ್ಠ 24.8°C
- ಮಂಗಳೂರು ಏರ್ಪೋರ್ಟ್: ಗರಿಷ್ಠ 27.9°C, ಕನಿಷ್ಠ 23.6°C
- ಶಕ್ತಿನಗರ: ಗರಿಷ್ಠ 29.3°C, ಕನಿಷ್ಠ 23.0°C
- ಬೆಳಗಾವಿ ಏರ್ಪೋರ್ಟ್: ಗರಿಷ್ಠ 26.6°C, ಕನಿಷ್ಠ 20.4°C
- ಬೀದರ್: ಗರಿಷ್ಠ 30.2°C, ಕನಿಷ್ಠ 21.4°C
- ವಿಜಯಪುರ: ಗರಿಷ್ಠ 29.5°C, ಕನಿಷ್ಠ 21.5°C
- ಧಾರವಾಡ: ಗರಿಷ್ಠ 27.6°C, ಕನಿಷ್ಠ 19.5°C
- ಗದಗ: ಗರಿಷ್ಠ 28.0°C, ಕನಿಷ್ಠ 20.8°C
- ಕಲಬುರಗಿ: ಗರಿಷ್ಠ 31.2°C, ಕನಿಷ್ಠ 21.8°C
- ಹಾವೇರಿ: ಗರಿಷ್ಠ 28.8°C, ಕನಿಷ್ಠ 21.2°C
- ಕೊಪ್ಪಳ: ಗರಿಷ್ಠ 28.5°C, ಕನಿಷ್ಠ 23.4°C
- ರಾಯಚೂರು: ಗರಿಷ್ಠ 28.8°C, ಕನಿಷ್ಠ 23.0°C
ಮಳೆಯಿಂದಾಗಿ ಸಂಚಾರದಲ್ಲಿ ಅಡಚಣೆಗಳು ಮತ್ತು ಜಲಪ್ರವಾಹದ ಸಾಧ್ಯತೆಯಿದ್ದು, ಸಾರ್ವಜನಿಕರು ಸುರಕ್ಷತಾ ಕ್ರಮಗಳನ್ನು ಪಾಲಿಸಿಬೇಕು ಎಂದು IMD ಸೂಚಿಸಿದೆ.