ಶೆಟ್ರ ಸು ಫ್ರಮ್ ಸೋ ವಿಜಯ ಪರ್ವ ಸಖತ್ ಜೋರಿದೆ. ಮಲಯಾಳಂಗೆ ಡಬ್ ಆಗಿ ಕೇರಳಿಗರ ದಿಲ್ ದೋಚಿದ ಈ ಹಾಸ್ಯ ಪ್ರಧಾನ ಸಿನಿಮಾ, ಇದೀಗ ಆಂಧ್ರಕ್ಕೂ ಲಗ್ಗೆ ಇಡ್ತಿದೆ. ವಿಶ್ವದ ಮೂಲೆ ಮೂಲೆಯಲ್ಲಿ ಮ್ಯಾಜಿಕ್ ಮಾಡ್ತಿರೋ ಸೋಮೇಶ್ವರ ಸುಲೋಚನಾಳ ಪವಾಡ ಎಂಥದ್ದು ಅನ್ನೋದ್ರ ಸ್ಟೋರಿ ಇಲ್ಲಿದೆ.
- ಮಲಯಾಳಂ ಆಯ್ತು.. ತೆಲುಗಿನಲ್ಲಿ ಸು ಫ್ರಮ್ ಸೋ ಪರ್ವ
- ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯಿಂದ ಆಂಧ್ರದಲ್ಲಿ ರಿಲೀಸ್
- ಅಮೆರಿಕಾದಲ್ಲಿ ಒಂದೇ ದಿನದಲ್ಲಿ 1 ಕೋಟಿ ರೂ ಕಲೆಕ್ಷನ್..!!
- ಕರುಣಾಕರ ಗುರೂಜಿ ಮೇಲಾಣೆ ಇದು ಸುಲೋಚನಾ ಪವಾಡ
ನಮ್ಮಲ್ಲಿ ಮಲಯಾಳ ಚಿತ್ರರಂಗದಂತಹ ಸಣ್ಣ ಹಾಗೂ ಗಟ್ಟಿ ಕಥೆಗಳು ಸಿನಿಮಾಗಳು ಆಗಲ್ಲ. ಅವ್ರು ನೋಡಿ ಎಷ್ಟು ಚೆನ್ನಾಗಿ ಕಥೆ ಮಾಡಿ, ಅದ್ಭುತ ಅಭಿನಯದ ಮೂಲಕ ಒಳ್ಳೆಯ ದುಡ್ಡು ಮಾಡ್ತಾರೆ ಅಂತೆಲ್ಲಾ ನಾವು ಮಾತಾಡಿಕೊಳ್ತಿದ್ದೆವು. ಆದ್ರೀಗ ಖುದ್ದು ಮಲಯಾಳಿಗರೇ.. ಸು ಫ್ರಮ್ ಸೋ ಚಿತ್ರವನ್ನು ಮಲಯಾಳಂಗೆ ಡಬ್ ಮಾಡಿ ಕೇರಳದಲ್ಲಿ ರಿಲೀಸ್ ಮಾಡಿ ಅಂತ ನಮ್ಮ ಬಳಿ ಮನವಿ ಮಾಡಿದ್ರು. ಅಂಥದ್ದೊಂದು ಅದ್ಭುತ ಮನರಂಜನಾತ್ಮಕ ಸಿನಿಮಾನ ಕಟ್ಟಿಕೊಟ್ಟಿದ್ದಾರೆ ರಾಜ್ ಬಿ ಶೆಟ್ಟಿ ಅಂಡ್ ಟೀಂ.
ಯೆಸ್… ಆಗಸ್ಟ್ 1ರಿಂದ ಕೇರಳದಲ್ಲಿ ತೆರೆಕಂಡ ಸು ಫ್ರಮ್ ಸೋ ಮಲಯಾಳಂ ವರ್ಷನ್‌ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಕರ್ನಾಟಕದಲ್ಲಿ ಈ ಸಿನಿಮಾದ ಮಹಿಮೆ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ಯಾವುದೇ ಸ್ಟಾರ್ ಫೇಸ್, ಅಬ್ಬರ, ಆಡಂಬರ ಇಲ್ಲದ ಈ ಸು ಫ್ರಮ್ ಸೋ ನಗು ಅನ್ನೋ ಒಂದೇ ಒಂದು ಸಿದ್ದ ಸೂತ್ರದೊಂದಿಗೆ ಪ್ರೇಕ್ಷಕರ ಮನಸ್ಸುಗಳಿಗೆ ಇಳಿದಿದೆ. ಹಾಗಾಗಿಯೇ ಮಲಯಾಳಂ ವಿಜಯೋತ್ಸವ ಬಳಿಕ ಇದೀಗ ಆನ್ ಡಿಮ್ಯಾಂಡ್ ಆಂಧ್ರದಲ್ಲಿ ತೆಲುಗು ವರ್ಷನ್ ರಿಲೀಸ್ ಆಗ್ತಿದೆ.
ಇದೇ ಆಗಸ್ಟ್ 8ರಿಂದ ಆಂಧ್ರ ಹಾಗೂ ತೆಲಂಗಾಣ ಸ್ಟೇಟ್‌ಗಳಲ್ಲಿ ಸು ಫ್ರಮ್ ಸೋ ಗ್ರ್ಯಾಂಡ್ ರಿಲೀಸ್ ಆಗ್ತಿದ್ದು, ಪ್ರತಿಷ್ಠಿತ ಮೈತ್ರಿ ಮೂವಿ ಮೇಕರ್ಸ್ ಬ್ಯಾನರ್ ರಿಲೀಸ್ ಮಾಡ್ತಿದೆ. ಡಿಸ್ಟ್ರಿಬ್ಯೂಷನ್ ರೈಟ್ಸ್‌ನ ದಾಖಲೆ ಮೊತ್ತಕ್ಕೆ ಖರೀದಿಸಿರೋ ಬಿಗ್ ಬ್ಯಾನರ್, ತನ್ನ ಲೆಗಸಿಯಿಂದ ಒಂದೊಳ್ಳೆ ಸಿನಿಮಾನ ಪ್ರೇಕ್ಷಕರಿಗೆ ನೀಡ್ತಿರೋ ಸಾರ್ಥಕತೆಯಲ್ಲಿದೆ. ಅಂದಹಾಗೆ ಅಮೆರಿಕಾದಲ್ಲಿ ಸು ಫ್ರಮ್ ಸೋ ಕನ್ನಡದಲ್ಲೇ ರಿಲೀಸ್ ಆಗಿದ್ದು, ತೆರೆಕಂಡ ಒಂದೇ ದಿನದಲ್ಲಿ ಒಂದು ಕೋಟಿ ರೂಪಾಯಿ ಬೃಹತ್ ಮೊತ್ತ ಕಲೆ ಹಾಕಿರೋದು ಹೊಸ ಚರಿತ್ರೆ.
ಅಮೆರಿಕಾದ ಜೊತೆ ಜೊತೆಗೆ ದುಬೈ, ಕತಾರ್, ಓಮನ್, ಬಹ್ರೇನ್, ಜರ್ಮನಿ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಸೋಮೇಶ್ವರ ಸುಲೋಚನಾ ಆರ್ಭಟ ಜೋರಿದೆ. ಎಲ್ಲೆಡೆ ಸಿನಿಮಾಗೆ ಅಭೂತಪೂರ್ವ ಯಶಸ್ಸು ಸಿಗ್ತಿದೆ. ಗೂಗಲ್ ಹಾಗೂ ಬುಕ್ ಮೈ ಶೋನಲ್ಲಿ 10ಕ್ಕೆ 9.8 ರೇಟಿಂಗ್ ಇದ್ದು, ಎಲ್ಲೆಡೆ ಹೌಸ್‌ಫುಲ್ ಪ್ರದರ್ಶನ ಕಾಣ್ತಿರೋದು ಇಂಟರೆಸ್ಟಿಂಗ್. ಕರುಣಾಕರ ಗುರೂಜಿ ಮೇಲಾಣೆ ಇದು ಸುಲೋಚನಾಳ ಪವಾಡವೇ ಆಗಿದ್ದು, ಜೆ ಪಿ ತುಮಿನಾಡ್ ಅಂಡ್ ಟೀಂ ಎಫರ್ಟ್ಸ್ ಫಲಿಸಿದೆ. ಇದು ಕನ್ನಡ ಚಿತ್ರರಂಗದ ಮಟ್ಟಿಗೆ ಹೊಸ ಇತಿಹಾಸ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್