• About Us
  • Privacy Policy
  • Terms & Conditions
  • Disclaimer
  • Advertise With Us
  • Contact Us
Tuesday, July 8, 2025
  • Login
  • Register
Guarantee News
Advertisement
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್
No Result
View All Result
Guarantee News
ADVERTISEMENT
Home ಸಿನಿಮಾ ಕಿರುತೆರೆ

‘ನಂದಗೋಕುಲ’ ಧಾರಾವಾಹಿಯಲ್ಲಿ ಹೈ ಡ್ರಾಮಾ..!

ಕಲರ್ಸ್ ಕನ್ನಡ ವಾಹಿನಿಯ 'ನಂದಗೋಕುಲ' ಧಾರಾವಾಹಿಯಲ್ಲಿ ಹೈ ಡ್ರಾಮಾ

ಶಾಲಿನಿ ಕೆ. ಡಿ by ಶಾಲಿನಿ ಕೆ. ಡಿ
July 8, 2025 - 12:23 pm
in ಕಿರುತೆರೆ, ಸಿನಿಮಾ
0 0
0
Untitled design 2025 07 08t120609.127

ಕಲರ್ಸ್ ಕನ್ನಡ ವಾಹಿನಿಯು ಸದಾ ಪ್ರೇಕ್ಷಕರ ಹೃದಯವನ್ನು ಮುಟ್ಟುವ ಮನಮಿಡಿಯುವ ಕಥೆಗಳ ಮೂಲಕ ಜನಪ್ರಿಯವಾಗಿದೆ. ‘ನಂದಗೋಕುಲ’ ಧಾರಾವಾಹಿಯೂ ಕೂಡ ಜನ ಮೆಚ್ಚಿದ ಧಾರಾವಾಹಿಯಾಗಿದೆ. ‘ಮಕ್ಕಳನ್ನು ಹೀರೋ ಮಾಡೋಕೆ ಹೋರಾಡೋ ಪ್ರತಿಯೊಬ್ಬ ಅಪ್ಪನ ಕಥೆಯನ್ನು ಹೇಳುವ, ‘ನಂದಗೋಕುಲ’ ಧಾರಾವಾಹಿ ರಾತ್ರಿ 9ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದು, ಹೊಸ ತಿರುವುಗಳೊಂದಿಗೆ ಪ್ರೇಕ್ಷಕರ ಮನವನ್ನು ಗೆಲ್ಲುತ್ತಿದೆ.

ನಂದಕುಮಾರ್ ಒಬ್ಬ ಕಟ್ಟುನಿಟ್ಟಾದ ನಡವಳಿಕೆಯ ಆತ್ಮವಿಶ್ವಾಸದಿಂದ ಕೂಡಿದ ವ್ಯಕ್ತಿ, ‘ಗಿರಿಜಾ ಸ್ಟೋರ್ಸ್’ ಎಂಬ ದಿನಸಿ ಅಂಗಡಿ ನಡೆಸುವ ನಂದನಿಗೆ ತನ್ನ ಕುಟುಂಬವೆಂದರೆ ಪ್ರಾಣ. ಆದರೆ ಎದುರುಮನೆಯಲ್ಲೇ ಇರುವ ಸೂರ್ಯಕಾಂತ್ ಮತ್ತು ಚಂದ್ರಕಾಂತ್ ಕುಟುಂಬವೆಂದರೆ ನಂದಕುಮಾರ್ ಗೆ ಕೆಂಡದಂಥ ಕೋಪ, ವೈಷಮ್ಯ. ತನ್ನ ಹೆಂಡತಿ ಗಿರಿಜಾಳ ಸಹೋದರರೇ ಇವರಿಬ್ಬರೂ. ಈ ದ್ವೇಷಕ್ಕೆ ಕಾರಣ ನಂದಕುಮಾರ್ ಹಾಗೂ ಗಿರಿಜಾ 25 ವರ್ಷಗಳ ಹಿಂದೆ ಓಡಿಹೋಗಿ ಮದುವೆಯಾಗಿದ್ದು, ಈ ಎರಡೂ ಕುಟುಂಬಗಳ ನಡುವೆ ಅಂದಿನಿಂದಲೂ ಆಕ್ರೋಶ, ದ್ವೇಷ ಇದೆ.

RelatedPosts

ಈ ಬಾರಿ ಬಿಗ್ ಬಾಸ್‌‌‌‌‌‌‌ ನಿರೂಪಣೆ ಮಾಡೋದು ಮೂವರು ಸೆಲೆಬ್ರಿಟಿಗಳು

ಹಣಕಾಸು ವಂಚನೆ ಆರೋಪ: ನಟ ಮಹೇಶ್ ಬಾಬುಗೆ ಇಡಿ ಸಮನ್ಸ್!

ಕಾಮಿಡಿ ಕಿಲಾಡಿ ಮನು ಅತ್ಯಾಚಾರ ಕೇಸ್‌: ಪೊಲೀಸರ ನಿರ್ಲಕ್ಷ್ಯ, ಸಂತ್ರಸ್ಥೆ ಗರಂ!

“ನಿದ್ರಾದೇವಿ Next Door” ಚಿತ್ರದ ರೊಮ್ಯಾಂಟಿಕ್ ಸಾಂಗ್ ಲಾಂಚ್‌ ಮಾಡಿದ ನಟ ಗಣೇಶ್

ADVERTISEMENT
ADVERTISEMENT

ನಂದಕುಮಾರ್ ಮತ್ತು ಗಿರಿಜಾರ ಮಕ್ಕಳಾದ ಧನ್ಯಾ, ಮಾಧವ, ಕೇಶವ, ವಲ್ಲಭ ಮತ್ತು ಅನನ್ಯಾ ತಂದೆಯ ಕಟ್ಟುನಿಟ್ಟಾದ ನಿರೀಕ್ಷೆಗಳ ನಡುವೆ ಬೆಳೆದವರು. ತನ್ನ ಮಕ್ಕಳು ತನ್ನಂತೆ ಪ್ರೀತಿಸಿ ಮದುವೆಯಾದರೆ ನೋವನುಭವಿಸಬೇಕಾಗುತ್ತದೆ, ನೆಮ್ಮದಿಯೂ ಇರುವುದಿಲ್ಲ ಎಂದು ನಿರ್ಧರಿಸಿ ಮಕ್ಕಳಿಂದ ‘ನೀವ್ಯಾರೂ ಪ್ರೀತಿಸಿ ಮದ್ವೆ ಆಗೊಲ್ಲ ಅಂತ ನನಗೆ ಮಾತು ಕೊಡಿ!’ ಎಂದು ಭಾಷೆ ತೆಗೆದುಕೊಂಡಿರುತ್ತಾನೆ ನಂದಕುಮಾರ್. ಆದರೆ ಎರಡನೇ ಮಗ ಕೇಶವ್ ಮೀನಾಳನ್ನು ಪ್ರೀತಿಸುತ್ತಾನೆ. ಇವರಿಬ್ಬರ ಪ್ರೀತಿಯ ವಿಷಯ ತಿಳಿದ ಮೀನಾಳ ತಂದೆ ಬೇರೊಬ್ಬ ಹುಡುಗನ ಜೊತೆ ಮದುವೆ ಫಿಕ್ಸ್ ಮಾಡುತ್ತಾನೆ.

ಇತ್ತ ನಂದಕುಮಾರ್‌ಗೆ ಮಗ ಕೇಶವನ ಪ್ರೀತಿಯ ವಿಷಯ ಗೊತ್ತಾಗುತ್ತದೆ. ದೊಡ್ಡ ಮಗ ಮಾಧವನಿಗೆ ಹೆಣ್ಣು ನೋಡುತ್ತಿದ್ದಾಗ ಕೇಶವನಿಗೂ ಮದುವೆ ಮಾಡಿಸುವ ಯೋಚನೆಯಲ್ಲಿ ಒಂದೇ ಮನೆಯ ಅಕ್ಕ ತಂಗಿಯರನ್ನು ನೋಡಿ ಮದುವೆ ಕೂಡಾ ಫಿಕ್ಸ್ ಮಾಡುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮೀನಾಳ ಮದುವೆ ಇನ್ನೊಬ್ಬ ಹುಡುಗನ ಜೊತೆ ನೆರವೇರುತ್ತಿರುತ್ತದೆ. ಆಗ ನಂದಕುಮಾರ್ ನ ಮೂರನೇ ಮಗ ವಲ್ಲಭ ತನ್ನ ಅಣ್ಣನ ಪ್ರೀತಿಯನ್ನು ಒಂದು ಮಾಡಲು ನಿರ್ಧರಿಸುತ್ತಾನೆ. ಬೇಸರದಲ್ಲಿಯೇ ಮದುವೆ ಮಂಟಪಕ್ಕೆ ಹೋಗಲು ಸಜ್ಜಾಗಿರೋ ಮೀನಾಳನ್ನು ಯಾರ ಕಣ್ಣಿಗೂ ಬೀಳದಂತೆ ಅಲ್ಲಿಂದ ಕರೆದೊಯ್ಯುತ್ತಾನೆ. ವಲ್ಲಭನಿಗೆ ಕೇಶವನ ಮದುವೆ ಮೀನಾಳ ಜೊತೆ ಮಾಡಿಸಬೇಕೆಂದುಕೊಳ್ಳುತ್ತಾನೆ.

ಆದರೆ ವಲ್ಲಭ ಅಣ್ಣನ ಮದುವೆಯನ್ನು ಮಾಡಿಸಲು ಯಶಸ್ವಿಯಾಗುತ್ತಾನಾ? ತನ್ನ ಮಕ್ಕಳು ತಾನು ಹಾಕಿದ ಗೆರೆ ದಾಟಲ್ಲ ಎಂದು ಭಾವಿಸಿರುವ ನಂದಕುಮಾರ್ ಗೆ ತನ್ನ ಮಗ ಕೇಶವ ಪ್ರೀತಿಸಿ ಮದುವೆಯಾದರೆ ಆಗುವ ಆಘಾತವೇನು? ಅಪ್ಪಿತಪ್ಪಿ ಮದುವೆಯಾದಲ್ಲಿ ಆ ಮದುವೆಯನ್ನು ಒಪ್ಪಲು ಸಾಧ್ಯವೇ? ವರ್ಷಾನುಗಟ್ಟಲೆಯಿಂದ ಬೆಳೆಸಿಕೊಂಡು ಬಂದ ಪರಂಪರೆಯನ್ನು ಉಳಿಸಿಕೊಳ್ಳುವ ಸವಾಲನ್ನು ನಂದಕುಮಾರ್ ಹೇಗೆ ಎದುರಿಸುತ್ತಾನೆ? ‘ನಂದ ಗೋಕುಲ’ದಂಥ ಕುಟುಂಬದಲ್ಲಿ ಎಲ್ಲರೂ ಜೊತೆಯಾಗಿ ಸಂತೋಷದಿಂದ ಬಾಳಿ ಬದುಕಬೇಕು ಎಂಬ ಕನಸು ಕಾಣುತ್ತಿರುವ ನಂದಕುಮಾರ್ ಕನಸು ತನ್ನ ಮಕ್ಕಳ ಆಯ್ಕೆಯಿಂದ ಏರುಪೇರಾಗುತ್ತದೆಯೇ? ಚೆಂದದ ಮನಸ್ಸುಗಳು ಸೇರಿದ ತುಂಬಿದ ಮನೆ ಜೇನಿನ ಗೂಡಾಗಿ ಇರುತ್ತದೆಯೇ? ಭೂಮಿಗೆ ಒಟ್ಟಿಗೆ ಬಂದವರು ಒಗ್ಗಟ್ಟಾಗಿರುವರೇ? ಭಿನ್ನ ಅಭಿರುಚಿ ಇದ್ದವರು ಒಂದೇ ಸೂರಿನಡಿ ಇರಬಲ್ಲರೇ? ಒಂದೇ ಮನಸಿನ ಮಂದಿ ಮನಸು ಮುರಿದು ಹೋಗುವಂತ ಸ್ಥಿತಿಗೆ ಬಂದರೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಈ  8ನೇ ತಾರೀಕು ರಾತ್ರಿ 9 ಕ್ಕೆ ಪ್ರಸಾರವಾಗುವ ‘ನಂದಗೋಕುಲ’ ಧಾರಾವಾಹಿಯಲ್ಲಿ ಉತ್ತರ ಸಿಗಲಿದೆ.

‘ಬಣ್ಣ ಟಾಕೀಸ್’ ನಿರ್ಮಿಸುತ್ತಿರುವ ‘ನಂದ ಗೋಕುಲ’ ಧಾರಾವಾಹಿಯ ತಾರಾಗಣದಲ್ಲಿ ಅರವಿಂದ್ ರಾವ್, ಅಮೃತಾ ನಾಯ್ಡು, ರವಿ ಚೇತನ್, ರಘು ಮಂಡ್ಯ, ಅಭಿಷೇಕ್ ದಾಸ್, ಯಶವಂತ್, ವಿಜಯ್ ಚಂದ್ರ, ಊರ್ಜಿತ ವಲ್ತಾಜೆ, ಅರ್ಚನಾ ಗಾಯಕ್ವಾಡ್, ನವ್ಯಾ, ಮೇಘಾ, ಕೃಷ್ಣಪ್ರಿಯ, ಶೈಲಜಾ ಮುಂತಾದವರು ಇದ್ದಾರೆ.

ShareSendShareTweetShare
ಶಾಲಿನಿ ಕೆ. ಡಿ

ಶಾಲಿನಿ ಕೆ. ಡಿ

ಗ್ಯಾರಂಟಿ ನ್ಯೂಸ್ ಡಿಜಿಟಲ್ ಪತ್ರಕರ್ತರಾಗಿ 2024ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ಕನ್ನಡದ ವಿವಿಧ ಟಿವಿ ಸುದ್ದಿ ವಾಹಿನಿಗಳಲ್ಲಿ 3 ವರ್ಷ ಕಾರ್ಯ ನಿರ್ವಹಣೆ ಮಾಡಿದ ಅನುಭವ ಇದೆ. ರಾಜಕೀಯ, ಸಿನಿಮಾ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳ ವಿಶ್ಲೇಷಣಾತ್ಮಕ ಬರಹಗಳನ್ನು ಬರೆಯುತ್ತಾರೆ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರಿಗೆ ಕನ್ನಡ ಸಾಹಿತ್ಯದ ಬಗ್ಗೆ ಅಪಾರ ಒಲವಿದೆ.

Please login to join discussion

ತಾಜಾ ಸುದ್ದಿ

Bigg boss 16

ಈ ಬಾರಿ ಬಿಗ್ ಬಾಸ್‌‌‌‌‌‌‌ ನಿರೂಪಣೆ ಮಾಡೋದು ಮೂವರು ಸೆಲೆಬ್ರಿಟಿಗಳು

by ಶ್ರೀದೇವಿ ಬಿ. ವೈ
July 8, 2025 - 10:52 pm
0

Modi in brasilia

ಬ್ರೆಸಿಲಿಯಾದಲ್ಲಿ ಮೋದಿಗೆ 114 ಕುದುರೆಗಳ ಭವ್ಯ ಸ್ವಾಗತ!

by ಶ್ರೀದೇವಿ ಬಿ. ವೈ
July 8, 2025 - 10:42 pm
0

Web 2025 07 08t222250.708

INDW vs ENGW: ಭಾರತದ ವಿರುದ್ಧ ಏಕದಿನ ಸರಣಿಗೆ 15 ಆಟಗಾರರ ತಂಡ ಪ್ರಕಟ!

by ಶ್ರೀದೇವಿ ಬಿ. ವೈ
July 8, 2025 - 10:26 pm
0

Web 2025 07 08t212551.550

ಹಿಮಾಚಲದ ಭೂಕುಸಿತದಿಂದ 67 ಜನರ ಪ್ರಾಣ ಉಳಿಸಿದ ಜಾಣ ಸಾಕು ನಾಯಿ!

by ಶ್ರೀದೇವಿ ಬಿ. ವೈ
July 8, 2025 - 9:29 pm
0

ಸಂಬಂಧಿಸಿದ ಪೋಸ್ಟ್‌ಗಳು

  • Bigg boss 16
    ಈ ಬಾರಿ ಬಿಗ್ ಬಾಸ್‌‌‌‌‌‌‌ ನಿರೂಪಣೆ ಮಾಡೋದು ಮೂವರು ಸೆಲೆಬ್ರಿಟಿಗಳು
    July 8, 2025 | 0
  • Untitled design 2025 07 08t142556.521
    ಮಗು ಬೇಡ ಅಂದ್ರೆ ಡಿವೋರ್ಸ್ ಕೊಡ್ತೀನಿ: ಡ್ರೋನ್ ಪ್ರತಾಪ್ ಹೇಳಿಕೆಗೆ ಗಗನಾ ಶಾಕ್
    July 8, 2025 | 0
  • Web 2025 07 03t121508.676
    ಕಿರಣ್ ರಾಜ್‌ನ ಕರ್ಣ ಲಾಂಚ್: ಇಂದು ರಾತ್ರಿ 8 ಗಂಟೆಗೆ ಮನರಂಜನೆಯ ಧಮಾಕಾ!
    July 3, 2025 | 0
  • Untitled design 2025 07 02t185742.653
    ‘ವಿಧಿ’ಯಾಟದ ವಿರುದ್ಧ ‘ಪ್ರೀತಿ’ಯ ಹೋರಾಟ; ಬರ್ತಿದೆ ಹೊಚ್ಚ ಹೊಸ ಧಾರಾವಾಹಿ ‘ಕರ್ಣ’ 
    July 2, 2025 | 0
  • Web 2025 06 29t181523.391
    BIGG BOSS ಕನ್ನಡ: ನಾಳೆ ಸಿಗಲಿದೆ ನಿಮ್ಮ ಎಲ್ಲ ಪ್ರಶ್ನೆಗಳಿಗೂ ಉತ್ತರ
    June 29, 2025 | 0
ADVERTISEMENT
Guarantee News

© 2024 - 2025 Guarantee News. All Rights Reserved.

Navigate Site

  • About Us
  • Privacy Policy
  • Terms & Conditions
  • Disclaimer
  • Advertise With Us
  • Contact Us

Follow Us

Welcome Back!

Login to your account below

Forgotten Password? Sign Up

Create New Account!

Fill the forms below to register

All fields are required. Log In

Retrieve your password

Please enter your username or email address to reset your password.

Log In

Add New Playlist

No Result
View All Result
  • ಕರ್ನಾಟಕ
  • ದೇಶ
  • ವಿದೇಶ
  • ಜಿಲ್ಲಾ ಸುದ್ದಿಗಳು
    • ಬಾಗಲಕೋಟೆ
    • ಬಳ್ಳಾರಿ
    • ಬೆಳಗಾವಿ
    • ಬೆಂ. ಗ್ರಾಮಾಂತರ
    • ಬೆಂ. ನಗರ
    • ಬೀದರ್
    • ಚಾಮರಾಜನಗರ
    • ಚಿಕ್ಕಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ದಕ್ಷಿಣ ಕನ್ನಡ
    • ದಾವಣಗೆರೆ
    • ಧಾರವಾಡ
    • ಗದಗ
    • ಹಾಸನ
    • ಹಾವೇರಿ
    • ಕಲಬುರಗಿ
    • ಕೊಡಗು
    • ಕೋಲಾರ
    • ಮೈಸೂರು
    • ರಾಯಚೂರು
    • ರಾಮನಗರ
    • ಶಿವಮೊಗ್ಗ
    • ತುಮಕೂರು
    • ಉಡುಪಿ
    • ಉತ್ತರ ಕನ್ನಡ
    • ವಿಜಯಪುರ
    • ಯಾದಗಿರಿ
    • ಮಂಡ್ಯ
    • ಕೊಪ್ಪಳ
    • ವಿಜಯನಗರ
  • ಸಿನಿಮಾ
    • ಸ್ಯಾಂಡಲ್ ವುಡ್
    • ಕಿರುತೆರೆ
    • ಬಾಲಿವುಡ್
    • ಸೌತ್ ಸಿನಿಮಾಸ್
    • ಸಂದರ್ಶನ
    • ಸಿನಿಮಾ ವಿಮರ್ಶೆ
    • ಗಾಸಿಪ್
  • ಕ್ರೀಡೆ
  • ವಾಣಿಜ್ಯ
  • ಶಿಕ್ಷಣ
  • ಉದ್ಯೋಗ
  • ಎಲೆಕ್ಷನ್
  • ಆರೋಗ್ಯ-ಸೌಂದರ್ಯ
  • ತಂತ್ರಜ್ಞಾನ
  • ಆಧ್ಯಾತ್ಮ- ಜ್ಯೋತಿಷ್ಯ
  • ವೈರಲ್
  • ಆಟೋಮೊಬೈಲ್
  • ವೆಬ್ ಸ್ಟೋರೀಸ್

© 2024 - 2025 Guarantee News. All Rights Reserved.

Go to mobile version