ಬೆಂಗಳೂರು: ಸಿಲಿಕಾನ್ ಸಿಟಿಯ ಜನತೆಯೇ, ವೀಕೆಂಡ್ ಆನಂದಿಸಲು ಮನೆಯಿಂದ ಹೊರಗೆ ಬರುವ ಮುನ್ನ ಎಚ್ಚರಿಕೆ ವಹಿಸಿ! ಇಂದು ಮೊಹರಂ ಆಚರಣೆಯ (Moharam Celebration) ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ರಸ್ತೆಗಳು ಬಂದ್ ಆಗಲಿವೆ. ಬೆಳಗ್ಗೆ 11 ಗಂಟೆಯಿಂದ ಸಂಜೆ 5:30 ಗಂಟೆಯವರೆಗೆ ಕೆಲವು ಪ್ರಮುಖ ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ಪರ್ಯಾಯ ಮಾರ್ಗಗಳ ವಿವರ ಇಲ್ಲಿದೆ.
ರಸ್ತೆ ಬಂದ್ ವಿವರ:
ಮೊಹರಂ ಆಚರಣೆಯಿಂದಾಗಿ ಬ್ರಿಗೇಡ್ ರಸ್ತೆ, ರಿಚ್ಮಂಡ್ ರಸ್ತೆ, ಮತ್ತು ಹೊಸೂರು ರಸ್ತೆಯ ಶೂಲೆ ಜಂಕ್ಷನ್ ವರೆಗಿನ ಮಾರ್ಗಗಳಲ್ಲಿ ಇಂದು (ಜುಲೈ 6) ಬೆಳಗ್ಗೆ 11:00 ರಿಂದ ಸಂಜೆ 5:30 ರವರೆಗೆ ಸಂಚಾರ ಬದಲಾವಣೆ ಇರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪರ್ಯಾಯ ಮಾರ್ಗಗಳು:
ಮೂಲ |
ಗಮ್ಯಸ್ಥಾನ |
ಪರ್ಯಾಯ ಮಾರ್ಗ |
---|---|---|
ಬ್ರಿಗೇಡ್ ರಸ್ತೆ/ರಿಚ್ಮಂಡ್ ರಸ್ತೆ |
ಹೊಸೂರು ರಸ್ತೆ |
ಹಳೇ ಮದ್ರಾಸ್ ರಸ್ತೆ, ವುಡ್ ಸ್ಟ್ರೀಟ್, ಟೇಟ್ ಲೇನ್, ರಿಚ್ಮಂಡ್ ಜಂಕ್ಷನ್, ಶಾಂತಿನಗರ ಜಂಕ್ಷನ್, ನಂಜಪ್ಪ ಸರ್ಕಲ್ ಮೂಲಕ |
ಹೊಸೂರು ರಸ್ತೆಯ ಆಡುಗೋಡಿ |
ರಿಚ್ಮಂಡ್ ರಸ್ತೆ |
ಆನೇಪಾಳ್ಯ ಜಂಕ್ಷನ್, ಸಿಮೆಟ್ರಿ ಕ್ರಾಸ್, ಬರ್ಲಿ ಸ್ಟ್ರೀಟ್, ಲಾಂಗ್‌ಫೋರ್ಡ್ ರಸ್ತೆ, ನಂಜಪ್ಪ ಸರ್ಕಲ್ ಮೂಲಕ |
ಭಾರೀ ವಾಹನಗಳು (ಹೊಸೂರು ರಸ್ತೆಯಿಂದ) |
ವಿವಿಧ ಗಮ್ಯಸ್ಥಾನಗಳು |
ಆಡುಗೋಡಿ ಜಂಕ್ಷನ್, ಮೈಕೊ ಜಂಕ್ಷನ್, ವಿಲ್ಸನ್ ಗಾರ್ಡನ್, ಸಿದ್ದಯ್ಯ ರಸ್ತೆ ಮೂಲಕ |
ಸಂಚಾರ ಪೊಲೀಸರ ಮನವಿ:
ನಗರ ಸಂಚಾರ ಪೊಲೀಸರು ಜನರಿಗೆ ಪರ್ಯಾಯ ಮಾರ್ಗಗಳನ್ನು ಬಳಸಲು ಮನವಿ ಮಾಡಿದ್ದಾರೆ. ಇದರಿಂದ ಸಂಚಾರ ದಟ್ಟಣೆ ತಪ್ಪಿಸಲು ಸಹಾಯವಾಗಲಿದೆ.
ಇತರ ಸಂಚಾರ ಸಲಹೆಗಳು:
ಹೆಣ್ಣೂರು ಜಂಕ್ಷನ್: ಬಿಎಂಆರ್‌ಸಿಎಲ್ ಕಾಮಗಾರಿಯಿಂದಾಗಿ, ಹೊರಮಾವು ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರ.
ಕಾಲಾಮಂದಿರ: ಬಿಎಂಆರ್‌ಸಿಎಲ್ ಕಾಮಗಾರಿಯಿಂದ ಕಾಡುಬಿಸನಹಳ್ಳಿ ಹೊರ ವರ್ತುಲ ರಸ್ತೆ ಕಡೆಗೆ ಸಂಚಾರ ನಿಧಾನ.
ಮೇಡಹಳ್ಳಿ ಜಂಕ್ಷನ್: ಮೊಹರಂ ಆಚರಣೆಯಿಂದ ಹೊಸಕೋಟೆ ಕಡೆಗೆ ನಿಧಾನಗತಿಯ ಸಂಚಾರ.