ಕೆನಡಾದ ಒಟ್ಟಾವಾದಲ್ಲಿ ಜನಿಸಿದ ಭಾರತೀಯ ಮೂಲದ ರ್ಯಾಪರ್ ಜೆನೆಸಿಸ್ ಯಾಸ್ಮಿನ್ ಮೋಹನರಾಜ್, ಎಂದೇ ಜನಪ್ರಿಯವಾಗಿ ಕರೆಯಲ್ಪಡುವ ಟಾಮಿ ಜೆನೆಸಿಸ್, ತಮ್ಮ ಇತ್ತೀಚಿನ ಮ್ಯೂಸಿಕ್ ವಿಡಿಯೋದಿಂದಾಗಿ ಭಾರೀ ವಿವಾದಕ್ಕೆ ಸಿಲುಕಿದ್ದಾರೆ. ಈ ವಿಡಿಯೋದಲ್ಲಿ ಟಾಮಿ ಜೆನೆಸಿಸ್ ಹಿಂದೂ ದೇವತೆಯಂತೆ ನೀಲಿ ಬಣ್ಣದ ದೇಹ, ಕೆಂಪು ಬಿಂದಿ, ಮತ್ತು ಚಿನ್ನದ ಆಭರಣಗಳನ್ನು ಧರಿಸಿದ್ದಾರೆ. ಇದರ ಜೊತೆಗೆ, ಕ್ರಿಶ್ಚಿಯನ್ ಶಿಲುಬೆಯನ್ನು ಅವರು ವಿವಾದಾತ್ಮಕ ರೀತಿಯಲ್ಲಿ ಬಳಸಿಕೊಂಡಿದ್ದಾರೆ.
ವಿಡಿಯೋದ ಒಂದು ದೃಶ್ಯದಲ್ಲಿ, ಶಿಲುಬೆಯನ್ನು ನೆಕ್ಕುವುದು ಮತ್ತು ಅದನ್ನು ತಮ್ಮ ಹಿಂಬದಿಯ ಬಳಿ ಹಿಡಿದುಕೊಂಡು ಪೋಸ್ ನೀಡುವ ದೃಶ್ಯವು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ. ಈ ದೃಶ್ಯಗಳು ಹಿಂದೂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತಂದಿವೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಟ್ರೂ ಬ್ಲೂ’ ಎಂಬ ಈ ಮ್ಯೂಸಿಕ್ ವಿಡಿಯೋದ ದೃಶ್ಯಗಳು ಧಾರ್ಮಿಕ ಸಂಕೇತಗಳನ್ನು ಅಗೌರವದಿಂದ ಬಳಸಿರುವುದಕ್ಕೆ ಸಾಮಾಜಿಕ ಮಾಧ್ಯಮ ವೇದಿಕೆಯಾದ ಎಕ್ಸ್ನಲ್ಲಿ ತೀವ್ರ ಆಕ್ಷೇಪಗಳು ಕೇಳಿಬಂದಿವೆ. ಹಲವು ಬಳಕೆದಾರರು ಈ ಕೃತ್ಯವನ್ನು ದೇವದೂಷಣೆ ಎಂದು ಕರೆದಿದ್ದಾರೆ. “ಹಿಂದೂ ದೇವತೆಯಂತೆ ಮೇಕ್ಅಪ್ ಮಾಡಿಕೊಂಡು, ಶಿಲುಬೆಯನ್ನು ಈ ರೀತಿಯಲ್ಲಿ ಬಳಸಿರುವುದು ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಪ್ರಯತ್ನವೇ?” ಎಂದು ಕೆಲವರು ಪ್ರಶ್ನಿಸಿದ್ದಾರೆ. “ಇದು ಸೃಜನಶೀಲತೆಯಲ್ಲ, ಇದು ಶುದ್ಧ ಅಗೌರವ!” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. ಕೆಲವರು ಈ ಕೃತ್ಯವನ್ನು ಗಮನ ಸೆಳೆಯಲು ಮಾಡಿರುವ ಉದ್ದೇಶಿತ ತಂತ್ರ ಎಂದು ಆರೋಪಿಸಿದ್ದಾರೆ.
ಟಾಮಿ ಜೆನೆಸಿಸ್ರ ಹಿನ್ನೆಲೆ
ಕೆನಡಾದ ವ್ಯಾಂಕೋವರ್ನಲ್ಲಿ ಜನಿಸಿದ ಟಾಮಿ ಜೆನೆಸಿಸ್, ಭಾರತೀಯ ಮೂಲದ ಕಲಾವಿದೆಯಾಗಿದ್ದಾರೆ.. ಅವರ ಹಾಡುಗಳು ತಮ್ಮ ದಿಟ್ಟತನಕ್ಕೆ ಮತ್ತು ಸಾಮಾಜಿಕ ವಿಷಯಗಳ ಬಗ್ಗೆ ಚರ್ಚೆಗೆ ಕಾರಣವಾಗುವುದಕ್ಕೆ ಹೆಸರುವಾಸಿಯಾಗಿವೆ. ಆದರೆ, ಈ ಬಾರಿಯ ವಿಡಿಯೋ ಧಾರ್ಮಿಕ ಸಂಕೇತಗಳನ್ನು ಗೌರವರಹಿತವಾಗಿ ಬಳಸಿರುವುದು ಅವರನ್ನು ವಿವಾದದ ಕಾರನವಾಗಿದೆ. ಇದುವರೆಗೆ ಟಾಮಿ ಜೆನೆಸಿಸ್ ಈ ಟೀಕೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಸಾಮಾಜಿಕ ಮಾಧ್ಯಮದ ಆಕ್ರೋಶ
ಎಕ್ಸ್ನಲ್ಲಿ ಈ ವಿಷಯವು ತೀವ್ರ ಚರ್ಚೆಗೆ ಕಾರಣವಾಗಿದೆ. “ಹಿಂದೂ ದೇವತೆಯಂತೆ ವೇಷ ಧರಿಸಿ, ಕ್ರಿಶ್ಚಿಯನ್ ಶಿಲುಬೆಯನ್ನು ಅಗೌರವದಿಂದ ಬಳಸಿರುವುದು ಎಲ್ಲರ ಭಾವನೆಗಳಿಗೆ ಧಕ್ಕೆ ತಂದಿದೆ,” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ. “ಇದು ಕಲೆಯ ಹೆಸರಿನಲ್ಲಿ ಧಾರ್ಮಿಕ ಸಂಕೇತಗಳನ್ನು ಅವಮಾನಿಸುವ ಕೃತ್ಯವಾಗಿದೆ,” ಎಂದು ಮತ್ತೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕೆಲವರು ಈ ವಿಡಿಯೋವನ್ನು ವೈರಲ್ ಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಈ ರೀತಿಯ ದೃಶ್ಯಗಳನ್ನು ಸೇರಿಸಲಾಗಿದೆ ಎಂದು ದೂಷಿಸಿದ್ದಾರೆ.