ಯುದ್ಧಕಾಂಡ ಮಾಡಿ ದೊಡ್ಡ ಸಕ್ಸಸ್ ಕಂಡ ಕೃಷ್ಣ ಅಜಯ್‌ರಾವ್, ಇದೀಗ ಸದ್ದಿಲ್ಲದೆ ಮತ್ತೊಂದು ಎಕ್ಸ್‌ಪೆರಿಮೆಂಟ್‌ಗೆ ಕೈ ಹಾಕಿದ್ದಾರೆ. ಸರಳ ಸುಬ್ಬರಾವ್ ಆಗಿ ರೆಟ್ರೋ ಸ್ಟೈಲ್‌ನಲ್ಲಿ ಪ್ರೇಕ್ಷಕರ ಮುಂದೆ ಬರೋ ಸೂಚನೆ ಕೊಟ್ಟಿದ್ದಾರೆ. ಆ ಹೊಸ ವರಸೆ ಹೇಗಿದೆ ಅನ್ನೋದನ್ನ ನೋವೊಮ್ಮೆ ಕಣ್ತುಂಬಿಕೊಳ್ಳಿ.
- ರೆಟ್ರೋ ಫ್ಯಾಮಿಲಿಮ್ಯಾನ್ ಆಗಿ ಅಜಯ್ ಎಂಟ್ರಿ
- 70ರ ದಶಕದ ಸರಳ ಸುಬ್ಬರಾವ್ ಆದ ಅಜಯ್
- ಶ್ರಾವಣಿ ಸುಬ್ರಮಣ್ಯ ಚಿತ್ರದ ಡೈರೆಕ್ಟರ್ ಈಸ್ ಬ್ಯಾಕ್
- ಪಂಜಾಬ್ ಬ್ಯೂಟಿ ಜೊತೆ ಕಲರ್‌ಫುಲ್ ರಂಗೋಲಿ
ಇದು ಸರಳ ಸುಬ್ಬರಾವ್ ಚಿತ್ರದ ರೆಟ್ರೋ ಸಾಂಗ್ ಝಲಕ್. ಈ ಟೈಟಲ್ ಕೇಳ್ತಿದ್ದಂತೆ ಇದ್ಯಾವುದೋ ಓಬಿರಾಯನ ಕಾಲದ ಸಿನಿಮಾ ಇದ್ದಂಗಿದೆ ಅಂತ ಅನಿಸದೆ ಇರೋದಿಲ್ಲ. ಹೌದು.. ನಿಮ್ಮ ಗೆಸ್ ನಿಜಾನೇ. ಯಾಕಂದ್ರೆ ಇದು 1971ರ ಕಾಲಘಟ್ಟದಲ್ಲಿ ನಡೆಯೋ ಅಂತಹ ಟಿಪಿಕಲ್ ರೆಟ್ರೋ ಫ್ಯಾಮಿಲಿ ಎಂಟರ್‌ಟೈನರ್. ಈ ಕಲರ್‌ಫುಲ್ ರಂಗೋಲಿ ಹಾಡಿನೊಂದಿಗೆ ಚಿತ್ರದ ಪ್ರಮೋಷನ್ಸ್ ಕಿಕ್‌ಸ್ಟಾರ್ಟ್ ಮಾಡಿದೆ ಚಿತ್ರತಂಡ.
ಹೌದು.. ಇತ್ತೀಚೆಗಷ್ಟೇ ತನ್ನದೇ ನಿರ್ಮಾಣ ಸಂಸ್ಥೆಯಲ್ಲಿ ತಯಾರಾದ ಯುದ್ಧಕಾಂಡ ಚಾಪ್ಟರ್-2 ಸಿನಿಮಾದ ಮೂಲಕ ಕನ್ನಡಿಗರ ದಿಲ್ ದೋಚಿದ್ರು ಅಜಯ್ ರಾವ್. ಅದರ ಬೆನ್ನಲ್ಲೀಗ ಈ ತರಹದ ಡಿಫರೆಂಟ್ ಹಾಗೂ ಕ್ಯಾಚಿ ಟೈಟಲ್‌ನೊಂದಿಗೆ ಹೊಸ ಕಥೆ ಹೊತ್ತು ಬರ್ತಿರೋದು ವಿಶೇಷ. ಸಮಾನ ಮನಸ್ಕರರ ಸಮಾಗಮದಲ್ಲಿ ತಯಾರಾಗಿರೋ ಈ ಕೌಟುಂಬಿಕ ಸಿನಿಮಾದ ಸಾರಥಿ ಮಂಜು ಸ್ವರಾಜ್.
ಶ್ರಾವಣಿ ಸುಬ್ರಮಣ್ಯದಂತಹ ಆಲ್ ಟೈಂ ಫ್ಯಾಮಿಲಿ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾದ ಡೈರೆಕ್ಟರ್ ಮಂಜು ಸ್ವರಾಜ್, ಹಾಸ್ಯ ಲೇಪಿತ ಕೌಟುಂಬಿಕ ಸಿನಿಮಾಗಳನ್ನ ಕಟ್ಟೋದ್ರಲ್ಲಿ ಪಂಟರ್. ಹಾಗಾಗಿ ಅಜಯ್ ರಾವ್‌ರಲ್ಲಿ ಸರಳ ಸುಬ್ಬರಾವ್‌ನ ಹುಡುಕಿಕೊಂಡಿದ್ದಾರೆ ಡೈರೆಕ್ಟರ್ ಮಂಜು ಸ್ವರಾಜ್. ಇನ್ನು ಇದಕ್ಕಾಗಿ ಪಂಜಾಬ್‌ನಿಂದ ಮಿಶಾ ನಾರಂಗ್ ಅನ್ನೋ ಚೆಲುವೆಯನ್ನ ಕನ್ನಡಕ್ಕೆ ಕರೆತಂದಿರೋದು ಮತ್ತೊಂದು ವಿಶೇಷ.
ಕವಿರಾಜ್ ಬರೆದಿರೋ ಹಾಡನ್ನ ಸಂಜೀತ್ ಹೆಗ್ಡೆ ಹಾಡಿದ್ದು, ಇದಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಿದ್ದಾರೆ. ರಂಗಾಯಣ ರಘು, ವೀಣಾ ಸುಂದರ್, ರಘು ರಾಮನಕೊಪ್ಪ, ವಿಜಯ್ ಚೆಂಡೂರು ಚಿತ್ರದ ತಾರಾಬಳಗದಲ್ಲಿದ್ದು, ರಿಯಾನ್ ಕ್ರಿಯೇಷನ್ಸ್ ಬ್ಯಾನರ್‌ನಡಿ ಲೋಹಿತ್ ನಂಜುಂಡಯ್ಯ ನಿರ್ಮಾಣ ಮಾಡಿದ್ದಾರೆ.