ಇಲ್ಲಿಯವರೆಗೂ ಸ್ಯಾಂಡಲ್‌ವುಡ್‌ನಲ್ಲಿ ಯಾವ ಸ್ಟಾರ್ ನಟ, ನಟಿಗೂ ಸಿಗದ ಗೌರವ, ಪ್ರಾಶಸ್ತ್ಯ ಹಾಗೂ ಮನ್ನಣೆ ಈ ಚೆಂದುಳ್ಳಿ ಚೆಲುವೆಗೆ ಸಿಕ್ಕಿದೆ. ವರ್ಲ್ಡ್ ಫೇಮಸ್ ಕಾನ್ಸ್ ಫಿಲ್ಮ್ ಫೆಸ್ಟ್‌ನ ರೆಡ್ ಕಾರ್ಪೆಟ್‌ನಲ್ಲಿ ಇದೇ ಮೊದಲ ಬಾರಿಗೆ ಕನ್ನಡತಿ ಮಿಂಚು ಹರಿಸಿದ್ದಾಳೆ. ಯಾರು ಆ ಚೆಲುವೆ..? ಆಕೆಯ ಹಿನ್ನೆಲೆಯೇನು ಅನ್ನೋದಕ್ಕೆ ಉತ್ತರ ಇಲ್ಲಿದೆ. ನೋಡ್ಕೊಂಡ್ ಬನ್ನಿ.
- ಕಾನ್ಸ್ ಫಿಲ್ಮ್ ಫೆಸ್ಟ್‌ನಲ್ಲಿ ಕನ್ನಡತಿ.. ಯಾರೀ ದಿಶಾ ಮದನ್?
- ಎರಡು ಮಕ್ಕಳ ತಾಯಿ.. ಕಿರುತೆರೆ, ಬೆಳ್ಳಿತೆರೆಯೇ c/o ಅಡ್ರೆಸ್
- ಯಶ್, ಶಿವಣ್ಣ, ಸುದೀಪ್, ರಿಷಬ್‌ನ ಮೀರಿಸಿದ ರೆಕಾರ್ಡ್
- ಒಂದೇ ಸಿನಿಮಾ, ಒಂದೇ ಸೀರಿಯಲ್.. ಕಾನ್ಸ್‌ನಲ್ಲಿ ಪ್ರತ್ಯಕ್ಷ..!
ಕಾನ್ಸ್ ಫಿಲ್ಮ್ ಫೆಸ್ಟಿವಲ್.. ವಿಶ್ವ ಸಿನಿದುನಿಯಾದ ಅತ್ಯಂತ ಜನಪ್ರಿಯ ಸಿನಿಮೋತ್ಸವನಗಳಲ್ಲಿ ಒಂದು. ಫ್ರಾನ್ಸ್‌ನ ಕಾನ್ಸ್ ಸಿಟಿಯಲ್ಲಿ ನಡೆಯೋ ಈ ಫಿಲ್ಮ್ ಫೆಸ್ಟ್‌ನಲ್ಲಿ ವಿಶ್ವದ ಬಹುತೇಕ ಎಲ್ಲಾ ರಾಷ್ಟ್ರಗಳ ಚಿತ್ರಗಳು ಭಾಗಿಯಾಗುತ್ತವೆ. ಪ್ರತೀ ವರ್ಷದಂತೆ ಈ ವರ್ಷವೂ ವೈಭವೋಪೇತವಾಗಿ ಇದೇ ಮೇ ತಿಂಗಳಲ್ಲಿ ಕಾನ್ಸ್ ಫೆಸ್ಟ್ ನಡೀತಿದೆ. ಪ್ರತೀ ಬಾರಿ ಅಲ್ಲಿ ನಮ್ಮ ಭಾರತೀಯ ಚಿತ್ರರಂಗದ, ಅದರಲ್ಲೂ ಬಾಲಿವುಡ್‌ನ ಪ್ರತಿನಿಧಿಸಿ ಸ್ಟಾರ್ ನಟ, ನಟಿಯರು ರೆಡ್ ಕಾರ್ಪೆಟ್ ಹಂಚಿಕೊಳ್ತಾರೆ.
ಇಲ್ಲಿಯವರೆಗೂ ನಮ್ಮ ಕನ್ನಡ ಚಿತ್ರರಂಗದಿಂದ ಯಶ್, ಸುದೀಪ್, ರಿಷಬ್ ಶೆಟ್ಟಿ, ಶಿವರಾಜ್‌ಕುಮಾರ್ ಸೇರಿದಂತೆ ಯಾವುದೇ ಸ್ಟಾರ್ ನಟ, ನಟಿಯರು ಕಾನ್ಸ್‌ನಲ್ಲಿ ಭಾಗಿಯಾಗಿಲ್ಲ. ಕಳೆದ ವರ್ಷ ಮೈಸೂರು ಮೂಲದ ಶಾರ್ಟ್ ಫಿಲ್ಮ್ ಡೈರೆಕ್ಟರ್ ಹಾಗೂ ಸಿನಿಮಾ ಹಿರಿಯ ವರದಿಗಾರ ಸುಬ್ಬರಾವ್ ಅವರು ಕಾನ್ಸ್‌ನಲ್ಲಿ ಭಾಗಿಯಾಗಿದ್ದರು. ಇದರ ಹೊರತಾಗಿ ಯಾವುದೇ ಕಲಾವಿದರು ಅಲ್ಲಿ ಪಾಲ್ಗೊಂಡ ನಿದರ್ಶನ ಇರಲಿಲ್ಲ. ಆದ್ರೀಗ ಕನ್ನಡತಿ ದಿಶಾ ಮದನ್ ಆ ರೆಕಾರ್ಡ್‌ನ ಬ್ರೇಕ್ ಮಾಡಿದ್ದಾರೆ.
ಹೌದು.. ಅಪ್ಪಟ ಕನ್ನಡತಿ, ಸೀರಿಯಲ್ ಹಾಗೂ ಸಿನಿಮಾ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿರೋ ದಿಶಾ ಮದನ್, ಕಾನ್ಸ್ ಫಿಲ್ಮ್ ಫೆಸ್ಟಿವಲ್‌ನ ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕಿ ಎಲ್ಲರ ಹುಬ್ಬೇರಿಸಿದ್ದಾರೆ. ಅಂದಹಾಗೆ ಈಕೆಯ ಬ್ಯಾಗ್ರೌಂಡ್ ಕೇಳಿದ್ರೆ ನೀವು ಶಾಕ್ ಆಗ್ತೀರಾ. ಈಕೆ ಪ್ಯಾನ್ ಇಂಡಿಯಾ ಸಿನಿಮಾಗಳ ಮೂಲಕ ಖ್ಯಾತ ಪಡೆದವರಲ್ಲ. ಒಂದೇ ಒಂದು ಸಿನಿಮಾ, ಒಂದೇ ಒಂದು ಸೀರಿಯಲ್‌ನಿಂದಲೇ ಕಾನ್ಸ್‌ಗೆ ಎಂಟ್ರಿ ಪಡೆದ ಸ್ಯಾಂಡಲ್‌ವುಡ್‌ನ ಚೊಚ್ಚಲ ಆರ್ಟಿಸ್ಟ್. ಎಲ್ಲಕ್ಕಿಂತ ಮಿಗಿಲಾಗಿ ಎರಡು ಮಕ್ಕಳ ತಾಯಿ ಅಂದ್ರೆ ನೀವು ನಂಬಲೇಬೇಕು.
ಹಂಬಲ್ ಪೊಲಿಟಿಷಿಯನ್ ನೋಗರಾಜ್ ಹಾಗೂ ಫ್ರೆಂಚ್ ಬಿರಿಯಾನಿ ಸಿನಿಮಾಗಳಲ್ಲಿ ನಟಿಸಿದ್ದ ದಿಶಾ ಮದನ್, ಕುಲವಧು ಸೀರಿಯಲ್‌ನಲ್ಲೂ ನಟಿಸಿದ್ದಾರೆ. ಈ ಹಿಂದೆ ಈಟಿವಿಯ ಡ್ಯಾನ್ಸಿಂಗ್ ಸ್ಟಾರ್ ವಿನ್ನರ್ ಕೂಡ ಆಗಿರೋ ದಿಶಾ, ಸದ್ಯ ಲಕ್ಷ್ಮೀ ನಿವಾಸ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ. ಇನ್ಸ್‌ಟಾದಲ್ಲಿ ಒಂದು ಮಿಲಿಯನ್ ಫಾಲೋವರ್ಸ್ ಈಕೆಗಿದ್ದು, ಕರ್ನಾಟಕ ಟಾಪ್ ಇನ್‌ಫ್ಲುಯೆನ್ಸರ್ ಆಗಿರೋದ್ರಿಂದ ಈಕೆಗೆ ಕಾನ್ಸ್ ರೆಡ್ ಕಾರ್ಪೆಟ್‌ಗೆ ಆಹ್ವಾನ ನೀಡಿದೆ. ಇದು ಪ್ರತಿಯೊಬ್ಬ ಕನ್ನಡಿಗ ಹೆಮ್ಮೆ ಪಡುವ ವಿಷಯ.
ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಗ್ಯಾರಂಟಿ ನ್ಯೂಸ್