ಜಾಗತಿಕ ರಾಜಕಾರಣದಲ್ಲಿ ಅಮೆರಿಕ ಹಾಗೂ ರಷ್ಯಾ ಪರಸ್ಪರ ಬದ್ಧ ವೈರಿಗಳು ಎಂದೇ ಬಿಂಬಿತವಾಗಿವೆ. ಆದರೆ ಇದೀಗ ಇವೆರಡೂ ದೇಶಗಳ ನಡುವಿನ ಇಂಧನ ವ್ಯವಹಾರದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುಾಗಿದ್ದು, ಕುತೂಹಲಕ್ಕೆ ಕಾರಣವಾಗಿದೆ.
ರಷ್ಯಾದಿಂದ ತೈಲ ಖರೀದಿಸುತ್ತದಾ ಅಮೆರಿಕ?:
ಉಕ್ರೇನ್ ಯುದ್ಧ ಆರಂಭವಾದಾಗಿನಿಂದಲೂ ಪಶ್ಚಿಮ ದೇಶಗಳ ನಿರ್ಬಂಧಗಳನ್ನು ಎದುರಿಸುತ್ತಿರುವ ರಷ್ಯಾ, ತನ್ನ ತೈಲ ಮಾರಾಟಕ್ಕೆ ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಂಡಿದೆ. ಈ ನಡುವೆ ಅಮೆರಿಕ ಮತ್ತು ರಷ್ಯಾ ನಡುವಿನ ವ್ಯಾಪಾರ ಸಂಬಂಧಗಳ ಬಗ್ಗೆಯೂ ಹೊಸ ಊಹಾಪೋಹಗಳು ಎದ್ದಿವೆ.
ಭಾರತದ ಸ್ಟ್ರಾಟೆಜಿಗೆ ಸಿಕ್ಕ ಜಯವೇ?:
ರಷ್ಯಾ ಮೇಲೆ ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳು ಕಠಿಣ ಆರ್ಥಿಕ ದಿಗ್ಬಂಧನ ಹೇರಿದ್ದರೂ, ಭಾರತ ಮಾತ್ರ ತನ್ನ ಸ್ವಂತ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ರಷ್ಯಾದಿಂದ ರಿಯಾಯಿತಿ ದರದಲ್ಲಿ ಕಚ್ಚಾ ತೈಲ ಖರೀದಿಸುವುದನ್ನು ಮುಂದುವರೆಸಿತ್ತು. ಆರಂಭದಲ್ಲಿ ಭಾರತದ ಈ ನಿರ್ಧಾರವನ್ನು ಟೀಕಿಸಿದ್ದ ಜಾಗತಿಕ ರಾಷ್ಟ್ರಗಳು, ಇಂದು ಪರೋಕ್ಷವಾಗಿ ರಷ್ಯಾದ ಇಂಧನವನ್ನು ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಭಾರತದ ಈ ರಾಜತಂತ್ರದ ಒಳಾರ್ಥ ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಮುಂದಿನ ಸವಾಲುಗಳೇನು?:
ಸದ್ಯ ರಷ್ಯಾದ ತೈಲ ಉತ್ಪಾದನಾ ಘಟಕಗಳಲ್ಲಿ ನಿರ್ವಹಣಾ ಕಾರ್ಯಗಳು ಮುಗಿದು, ಮುಂದಿನ ದಿನಗಳಲ್ಲಿ ಉತ್ಪಾದನೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಒಂದು ವೇಳೆ ರಷ್ಯಾ ದೊಡ್ಡ ಪ್ರಮಾಣದಲ್ಲಿ ಮಾರುಕಟ್ಟೆಗೆ ತೈಲ ಪೂರೈಸಿದರೆ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆಯಾಗಬಹುದು. ಇದು ಭಾರತದ ಇಂಧನ ರಫ್ತು ಮಾರುಕಟ್ಟೆಯ ಮೇಲೆ ಯಾವ ರೀತಿಯ ಪ್ರಭಾವ ಬೀಳಲಿದೆ ಎಂಬುದು ಈಗ ಎಲ್ಲರ ಗಮನಸೆಳೆದಿದೆ.





