2025ರ ಮಾರ್ಚ್ 29ರಂದು ವರ್ಷದ ಮೊದಲ ಸೂರ್ಯ ಗ್ರಹಣ ಸಂಭವಿಸಲಿದೆ. ಈ ಗ್ರಹಣವು ಮಧ್ಯಾಹ್ನ 2:20ರಿಂದ ಸಂಜೆ 6:16ರ ವರೆಗೆ ಇರುವ ಈ ಗ್ರಹಣವು ಮೀನ ರಾಶಿಯಲ್ಲಿ ಸಂಭವಿಸುತ್ತದೆ. ಜ್ಯೋತಿಷ್ಯದ ಪ್ರಕಾರ, ಶನಿಗ್ರಹವು ಅದೇ ದಿನ ಮೀನ ರಾಶಿಗೆ ಪ್ರವೇಶಿಸುವುದರಿಂದ ಎಲ್ಲಾ 12 ರಾಶಿಗಳ ಮೇಲೂ ಗಮನಾರ್ಹ ಪರಿಣಾಮ ಬೀರಲಿದೆ.
ಮಾರ್ಚ್ 29ರಂದು ಮೀನ ರಾಶಿ ಮತ್ತು ಶನಿ ಪ್ರವೇಶದ ಪರಿಣಾಮದಿಂದ 12 ರಾಶಿಗಳಿಗೆ ಲಾಭ-ನಷ್ಟ, ಆರೋಗ್ಯ ಮತ್ತು ಸಂಬಂಧಗಳ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೇಷ ರಾಶಿ
ಮೇಷ ರಾಶಿಗೆ ಸೇರಿದ ಜನರು ಈ ಸಮಯದಲ್ಲಿ ಯಾವುದೇ ರೀತಿ ಹಣದ ವಹಿವಾಟು ನಡೆಸದೇ ಇರುವುದು ಉತ್ತಮ. ಈ ಅವಧಿಯಲ್ಲಿ ನೀವು ಯಾವುದೇ ರೀತಿಯ ಹೊಸ ಕೆಲಸವನ್ನು ಶುರು ಮಾಡುವ ಮೊದಲು ಸರಿಯಾಗಿ ಯೋಚಿಸುವುದು ಒಳ್ಳೆಯದು.
ವೃಷಭ ರಾಶಿ
ಈ ಸಮಯದಲ್ಲಿ ವೃಷಭ ರಾಶಿಗೆ ಸೇರಿದ ಜನರು ಸಂಬಂಧಗಳಲ್ಲಿ ಸ್ವಲ್ಪ ಮಟ್ಟಿಗೆ ಸಮಸ್ಯೆಗಳನ್ನು ಎದುರಿಸುವರು. ಈ ಅವಧಿಯಲ್ಲಿ ನೀವು ಹಳೆಯ ಸಾಲಗಳನ್ನು ವಾಪಸ್ಸು ಮಾಡುವ ಸಂಭವವಿದೆ.
ಮಿಥುನ ರಾಶಿ
ಈ ಅವಧಿಯಲ್ಲಿ ನೀವು ಎಲ್ಲಾ ಕೆಲಸಗಳಲ್ಲಿಯೂ ಕಠಿಣ ಪರಿಶ್ರಮವನ್ನು ಪಡಬೇಕಾಗುತ್ತದೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಚಾರಗಳಲ್ಲಿ ಸಾಕಷ್ಟು ಎಚ್ಚರಿಕೆಯಿಂದ ಇರುವುದು ಉತ್ತಮ.
ಕಟಕ ರಾಶಿ
ಈ ಅವಧಿಯಲ್ಲಿ ನೀವು ಪರಿಸ್ಥಿತಿಯನ್ನು ಸಮತೋಲನದಲ್ಲಿರಿಸಲು ಅನುಭವಿ ವ್ಯಕ್ತಿಗಳೊಂದಿಗೆ ಮಾತುಕತೆಯನ್ನಾಡುವುದು ಉತ್ತಮ. ಈ ಸಮಯದಲ್ಲಿ ನೀವು ಆರೋಗ್ಯಕ್ಕೆ ಸಂಬಂಧಿಸಿದಂತೆ ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು.
ಸಿಂಹ ರಾಶಿ
ಈ ರಾಶಿಗೆ ಸೇರಿದ ಜನರು ಸಾಕಷ್ಟು ಲಾಭವನ್ನು ಪಡೆಯುವುದರೊಂದಿಗೆ ಸಂಬಳದಲ್ಲಿ ಹೆಚ್ಚಳವಾಗುವ ಯೋಗವಿದೆ. ಸಂಬಂಧಗಳಲ್ಲಿ ಬಹಳಷ್ಟು ಸುಧಾರಣೆಯನ್ನು ಈ ಅವಧಿಯಲ್ಲಿ ನೀವು ಹೊಂದುವಿರಿ.
ಕನ್ಯಾ ರಾಶಿ
ಈ ಸಮಯದಲ್ಲಿ ನಿಮಗೆ ಪ್ರಗತಿಗೆ ಉತ್ತಮ ಅವಕಾಶಗಳು ದೊರಕುವುದು. ಹಾಗೆ ಸಮಾಜದಲ್ಲಿ ಕನ್ಯಾ ರಾಶಿಗೆ ಸೇರಿದ ಜನರ ಪದವಿ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ.
ತುಲಾ ರಾಶಿ
ನೀವು ನಿಮ್ಮ ಕೆಲಸಗಳಲ್ಲಿ ಯಾವುದಾದರೂ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಅವೆಲ್ಲವೂ ಈ ಅವಧಿಯಲ್ಲಿ ದೂರವಾಗುವುದು. ಹಾಗೆ ಈ ಸಮಯದಲ್ಲಿ ನಿಮಗೆ ವಿವಾಹಕ್ಕಾಗಿ ಉತ್ತಮ ಪ್ರಸ್ತಾಪಗಳು ಬರಬಹುದು.
ವೃಶ್ಚಿಕ ರಾಶಿ
ಈ ಸಮಯದಲ್ಲಿ ವೃಶ್ಚಿಕ ರಾಶಿಗೆ ಸೇರಿದ ಜನರಿಗೆ ಹೊಸ ಕೆಲಸ ಅಥವಾ ಪ್ರಯಾಣಿಸಲು ಉತ್ತಮ ಅವಕಾಶ ದೊರಕುವುದು. ಇದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಿಮ್ಮ ಕೈಯಲ್ಲಿದೆ.
ಧನು ರಾಶಿ
ಈ ಸಮಯದಲ್ಲಿ ಧನು ರಾಶಿಗೆ ಸೇರಿದ ಜನರ ಅಪೂರ್ಣ ಕೆಲಸಗಳೆಲ್ಲವೂ ಪೂರ್ಣಗೊಳ್ಳುವ ಯೋಗವಿದೆ.
ಮಕರ ರಾಶಿ
ಈ ಸಮಯದಲ್ಲಿ ನಿಮ್ಮ ಎಲ್ಲಾ ಕ್ಷೇತ್ರಗಳಲ್ಲಿಯೂ ನೀವೊಂದು ಕೊಂಡಂತಹ ಯಶಸ್ಸನ್ನು ಪಡೆಯುವ ಸಂಭವ ಸಾಕಷ್ಟು ಹೆಚ್ಚಾಗಿರುವುದು.
ಕುಂಭ ರಾಶಿ
ಈ ಸೂರ್ಯ ಗ್ರಹಣದ ಪ್ರಭಾವದಿಂದಾಗಿ ಆತ್ಮವಿಶ್ವಾಸದಲ್ಲಿ ವೃದ್ಧಿಯನ್ನು ಹೊಂದಲಿದ್ದಾರೆ. ಹಾಗೆ ಕೆಲಸವನ್ನು ಮಾಡುವ ಜನರಿಗೆ ಹೊಸ ಕೆಲಸಕ್ಕಾಗಿ ಉತ್ತಮ ಪ್ರಸ್ತಾಪಗಳು ದೊರಕಬಹುದು.
ಮೀನ ರಾಶಿ
ಈ ಸಮಯದಲ್ಲಿ ನೀವು ಯಾರ ಮೇಲೆ ಹೆಚ್ಚಿನ ವಿಶ್ವಾಸವನ್ನು ಹೊಂದದೆ ಇರುವುದು ಒಳ್ಳೆಯದು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಂಭವ ಹೆಚ್ಚಾಗಿರಲಿದೆ.
ವಿಶೇಷ ಸೂಚನೆಗಳು:
- ಗ್ರಹಣದ ಸಮಯದಲ್ಲಿ ಮಂತ್ರ ಜಪ ಅಥವಾ ದಾನಧರ್ಮದಂತಹ ಶುಭಕಾರ್ಯಗಳನ್ನು ಮಾಡಲು ಜ್ಯೋತಿಷಿಗಳ ಸಲಹೆ ನೀಡಿದ್ದಾರೆ.
- ಆರೋಗ್ಯ ಮತ್ತು ಹಣಕಾಸು ವಿಷಯಗಳಲ್ಲಿ ವಿವೇಕದ ನಿರ್ಧಾರಗಳನ್ನು ತೆಗೆದುಕೊಳ್ಳಿ.
ಸೂರ್ಯ ಗ್ರಹಣವು ಜ್ಯೋತಿಷ್ಯದ ಪ್ರಕಾರ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳ ಮಿಶ್ರಣವನ್ನು ತರುತ್ತದೆ. ನಿಮ್ಮ ರಾಶಿಯ ಪ್ರಕಾರ ಸೂಚನೆಗಳನ್ನು ಪಾಲಿಸಿ, ಸಮಸ್ಯೆಗಳನ್ನು ಎದುರಿಸಲು ಸಿದ್ಧರಾಗಿರಿ.