ಹುಬ್ಬಳ್ಳಿ : ಲಿಯೋ ಕ್ಲಬ್ ಆಫ್ ಹುಬ್ಬಳ್ಳಿ ಸದಾ ಜನ ಸಾಮಾನ್ಯರಿಗೆ ಸಹಾಯ ವಾಗುವಂಥ ಒಂದಿಲ್ಲೊಂದು ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವು ಶ್ಲಾಘನೀಯವಾದುದು ಎಂದು ಸ್ವರ್ಣ ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ಎಸ್. ವಿ. ಪ್ರಸಾದ ಬಣ್ಣಿಸಿದರು.
ಲಿಯೋ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಸ್ವರ್ಣ ಸಮೂಹ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ನಗರದ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಎಸ್‍ಡಿಎಂ ಆಸ್ಪತ್ರೆಯ ಸ್ವಿಚ್ ಹೀಯರಿಂಗ್ ವಿಭಾಗದಿಂದ ಹಿಯರ್ ದಿ ಚೇಂಜ್ ಶ್ರವಣ ಸಾಧನ ವಿತರಣಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶ್ರವಣದೋಷವೆನ್ನುವುದು ಬದುಕಿನ ಸ್ವಾರಸ್ಯವನ್ನೇ ಕಳೆದು ಬಿಡುತ್ತದೆ. ಇಂಥ ತೊಂದರೆ ಅನುಭವಿಸುತ್ತಿರುವ ಬಡವರಿಗೆ ಸ್ವರ್ಣ ಸಮೂಹ ಸಂಸ್ಥೆಯ ಜೊತೆಗೂಡಿ ಅತ್ಯುಪಯುಕ್ತವಾದ ಶ್ರವಣ ಸಾಧನಗಳನ್ನು ವಿತರಿಸುವ ಮೂಲಕ ಅವರ ಬದುಕಿನಲ್ಲಿ ಸಂಭ್ರಮ ಉತ್ಸಾಹ ತುಂಬುವಂಥ ಕಾರ್ಯ ಮಾಡುತ್ತಿರುವುದು ಈ ಸಂಸ್ಥೆಯ ಅತ್ಯುತ್ತಮ ಕಾರ್ಯಕ್ರಮವಾಗಿದೆ ಎಂದು ಕೊಂಡಾಡಿದರು.
ಸ್ವರ್ಣ ಸಮೂಹ ಸಂಸ್ಥೆ ಹಾಗೂ ಲಿಯೋ ಕ್ಲಬ್‍ಗಳು ಜಂಟಿಯಾಗಿ ತಲಾ 20,999 ಮೌಲ್ಯದ 20 ಅತ್ಯಾಧುನಿಕ ಡಿಜಿಟಲ್ ಶ್ರವಣ ಸಾಧನಗಳನ್ನು, ಒಟ್ಟು 4,19,980ಮೌಲ್ಯದ ನೆರವಿನ ರೂಪದಲ್ಲಿ, ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆಗೊಂಡ ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ಕೊಡಮಾಡಿರುವುದು ಒಂದು ಸಾರ್ಥಕವಾದ ಜನಸೇವೆಯಾಗಿದೆ. ಇವರು ಮುಂದೆಯೂ ಕೂಡ ಇಂಥ ಅನೇಕಾನೇಕ ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಬಡವರು, ಅಸಹಾಯಕರ ಬಾಳಿಗೆ ಬೆಳಕಾಗಲಿ, ಇವರ ಇಂಥ ಕಾರ್ಯಗಳಿಗೆ ನಾವು ನಮ್ಮಕೈಲಾದ ನೆರವು ನೀಡುವುದಾಗಿ ತಿಳಿಸಿದರು.
ಧಾರವಾಡದ ಸಹಾಯಕ ಆಯುಕ್ತರು ಹಾಗೂ ಉಪವಿಭಾಗಾಧಿಕಾರಿ ಪ್ರಭಾವತಿ ಫಕೀರಪುರ ಮುಖ್ಯಅತಿಥಿಗಳಾಗಿ ಬಾಗವಹಿಸಿದ್ದರು. ಈ ಸಂದರ್ಭದಲ್ಲಿ ಎಸ್‍ಡಿಎಂನ ಸ್ಪೀಚ್ ಹಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವಸೀಮ್, ಲಯನ್ಸ್ ರೀಜನ್ ಚೇರ್‍ಪರ್ಸನ್ ಲಯನ್ ವೇಮನ್ ಮಂಕಾಣಿ, ಲಯನ್ಸ ಕಬ್ ಆಪ್ ಹುಬ್ಬಳ್ಳಿ ಸಿಟಿಯ ಅಧ್ಯಕ್ಷ ಲಯನ್ ಎಸ್. ಆರ್. ಓಂಕಾರಿ, ಲಿಯೋ ಕ್ಲಬ್ ಆಫ್ ಹುಬ್ಬಳ್ಳಿಯ ಅಧ್ಯಕ್ಷ ಲಿಯೋ ಮುರಳೀಧರ ದಿವಟೆ, ತಕ್ಷಣದ ಮಾಜಿ ಅಧ್ಯಕ್ಷ ಲಿಯೋ ಟೆರನ್ಸ್ ಇರ್ಕಲ್, ಕಾರ್ಯಕ್ರಮ ಸಂಯೋಜಕ ಲಿಯೋ ಆರ್ಯನ್ ಹಿರೇಗೌಡರ್, ಲಿಯೋ ಪ್ರಜ್ವಲ್ ಹರವಿ, ಲಿಯೋ ಓಂಕಾರ್ ಹರ್ಲಾಪುರ ಹಾಗೂ ಮಾಜಿ ಅಧ್ಯಕ್ಷ ಮತ್ತು ಲಿಯೋ ಟ್ರೋಫಿ ಸಂಯೋಜಕ ಲಿಯೋ ಚಿರಾಗ್ ಕಲಾಲ್ ಉಪಸ್ಥಿತರಿದ್ದರು.
ಲಿಯೋ ಕ್ಲಬ್ ಆಫ್ ಹುಬ್ಬಳ್ಳಿ ಹಾಗೂ ಎಸ್‍ಡಿಎಂನ ಸ್ಪೀಚ್ ಹಿಯರಿಂಗ್ ವಿಭಾಗದ ಸಹಯೋಗದಲ್ಲಿ ಭಾನುವಾರ ಹುಬ್ಬಳ್ಳಿಯ ಲಯನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಿಯರ್ ದಿ ಚೇಂಜ್ ಶ್ರವಣ ಸಾಧನ ವಿತರಣಾ ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಸ್ವರ್ಣ ಸ್ವರ್ಣ ಸಮೂಹ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಡಾ. ವಿ. ಎಸ್. ವಿ. ಪ್ರಸಾದ ಪಾಲ್ಗೊಂಡು, ಕಾರ್ಯಕ್ರಮ ಉದ್ಘಾಟಿಸಿದರು. ಎಸ್‍ಡಿಎಂನ ಸ್ಪೀಚ್ ಹಿಯರಿಂಗ್ ವಿಭಾಗದ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಡಾ. ವಸೀಮ್, ಲಯನ್ಸ್ ರೀಜನ್ ಚೇರ್‍ಪರ್ಸನ್ ಲಯನ್ ವೇಮನ್ ಮಂಕಾಣಿ, ಲಯನ್ಸ ಕಬ್ ಆಪ್ ಹುಬ್ಬಳ್ಳಿ ಸಿಟಿಯ ಅಧ್ಯಕ್ಷ ಲಯನ್ ಎಸ್. ಆರ್. ಓಂಕಾರಿ, ಲಿಯೋ ಕ್ಲಬ್ ಆಫ್ ಹುಬ್ಬಳ್ಳಿಯ ಅಧ್ಯಕ್ಷ ಲಿಯೋ ಮುರಳೀಧರ ದಿವಟೆ, ತಕ್ಷಣದ ಮಾಜಿ ಅಧ್ಯಕ್ಷ ಲಿಯೋ ಟೆರನ್ಸ್ ಇರ್ಕಲ್, ಕಾರ್ಯಕ್ರಮ ಸಂಯೋಜಕ ಲಿಯೋ ಆರ್ಯನ್ ಹಿರೇಗೌಡರ್, ಲಿಯೋ ಪ್ರಜ್ವಲ್ ಹರವಿ, ಲಿಯೋ ಓಂಕಾರ್ ಹರ್ಲಾಪುರ ಹಾಗೂ ಮಾಜಿ ಅಧ್ಯಕ್ಷ ಮತ್ತು ಲಿಯೋ ಟ್ರೋಫಿ ಸಂಯೋಜಕ ಲಿಯೋ ಚಿರಾಗ್ ಕಲಾಲ್ ಉಪಸ್ಥಿತರಿದ್ದರು.





