ಏಕಾಂಗಿ ಪೆಂಗ್ವಿನ್‌‌ನ 70 ಕಿ.ಮೀ ಪಯಣದ ರೋಚಕ ಕಥೆ

BeFunky collage (57)

2007ರಲ್ಲಿ ವರ್ನರ್ ಹೆರ್ಜಾಗ್ ಅವರು ನಿರ್ದೇಶಿಸಿದ “ಎನ್‌ಕೌಂಟರ್ಸ್ ಅಟ್ ದಿ ಎಂಡ್ ಆಫ್ ದಿ ವರ್ಲ್ಡ್” ಎಂಬ ಸಾಕ್ಷ್ಯಚಿತ್ರದ ಒಂದು ದೃಶ್ಯ ಇಂದು ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ವೈರಲ್ ಆಗಿದೆ. ಆ ದೃಶ್ಯದಲ್ಲಿ ಒಂದು ಅಡೆಲೀ ಪೆಂಗ್ವಿನ್ ತನ್ನ ಗುಂಪನ್ನು ಬಿಟ್ಟು, ವಿರುದ್ಧ ದಿಕ್ಕಿನಲ್ಲಿ ಹಿಮಾಲಯದಂತಹ ಹಿಮಪರ್ವತಗಳ ಕಡೆಗೆ ಸುಮಾರು 70 ಕಿ.ಮೀ. ದೂರ ಸಂಚರಿಸುವುದನ್ನು ತೋರಿಸಲಾಗಿದೆ. ಈ ಒಂಟಿ ಪ್ರಯಾಣವನ್ನು ಜನರು ‘ನಿಹಿಲಿಸ್ಟ್ ಪೆಂಗ್ವಿನ್’ ಅಥವಾ ‘ಮರಣಯಾತ್ರೆ’ ಎಂದು ಕರೆಯುತ್ತಿದ್ದಾರೆ. ಇದು ಜೀವನದ ಏಕಾಂತತೆ, ಬರ್ನ್‌ಔಟ್, ಸ್ವಾತಂತ್ರ್ಯ ಮತ್ತು ಅಸ್ತಿತ್ವದ ಸಂಕಷ್ಟಕ್ಕೆ ಸಾಂಕೇತಿಕವಾಗಿ ಹೋಲಿಕೆಯಾಗುತ್ತಿದೆ.

ಪೆಂಗ್ವಿನ್‌ನ ಒಂಟಿ ಪ್ರಯಾಣದ ಕಥೆ ಏನು?

ಸಾಮಾನ್ಯವಾಗಿ ಅಡೆಲೀ ಪೆಂಗ್ವಿನ್‌ಗಳು ಗುಂಪಾಗಿ ವಾಸಿಸುತ್ತವೆ. ಅವು ಸಮುದ್ರದತ್ತ ಆಹಾರಕ್ಕಾಗಿ ಒಟ್ಟಾಗಿ ಸಾಗುತ್ತವೆ. ಆದರೆ ಈ ಚಿತ್ರದಲ್ಲಿ ಒಂದು ಪೆಂಗ್ವಿನ್ ಗುಂಪಿನ ಜೊತೆಗೆ ಹೋಗುತ್ತಿದ್ದಾಗ ದಿಢೀರನೆ ನಿಲ್ಲುತ್ತದೆ. ನಂತರ ತನ್ನ ಗುಂಪನ್ನು ಬಿಟ್ಟು, ಸಮುದ್ರದಿಂದ ದೂರವಿರುವ ಹಿಮಪರ್ವತಗಳ ಕಡೆಗೆ ನಡೆಯಲು ಶುರು ಮಾಡುತ್ತದೆ. ಈ ದೃಶ್ಯವನ್ನು ನೋಡಿ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾವನಾತ್ಮಕವಾಗಿ ಸ್ಪಂದಿಸಿದ್ದಾರೆ. ಕೆಲವರು ಇದನ್ನು ಸ್ವಾತಂತ್ರ್ಯದ ಹೋರಾಟ, ಹೊಸ ಜೀವನದ ಆರಂಭ ಅಥವಾ ನೊಂದ ಮನಸ್ಸಿನ ಪ್ರತಿರೂಪ ಎಂದು ವರ್ಣಿಸುತ್ತಿದ್ದಾರೆ. ಇನ್ನು ಕೆಲವರು ಇದನ್ನು ಸಾವಿನ ದಾರಿ ಅಥವಾ ನಿರಾಶೆಯ ಸಂಕೇತ ಎಂದು ಕಾಣುತ್ತಿದ್ದಾರೆ.

ವರ್ನರ್ ಹೆರ್ಜಾಗ್ ಸ್ವತಃ ಈ ವರ್ತನೆಯನ್ನು “death march” ಎಂದು ಕರೆದಿದ್ದಾರೆ. ಪೆಂಗ್ವಿನ್‌ಗೆ ಆಹಾರವಿಲ್ಲದ, ಶೀತಲತೆಯ ಹಿಮಪ್ರದೇಶದಲ್ಲಿ ಇದು ಬದುಕುವ ಸಾಧ್ಯತೆ ಕಡಿಮೆ ಎಂದು ಅವರು ಹೇಳಿದ್ದಾರೆ.


ವೈರಲ್ ಆಗಲು ಕಾರಣ ಏನು?

ಈ ದೃಶ್ಯವು ಕೇವಲ ಪೆಂಗ್ವಿನ್ ನಡೆಯುವುದನ್ನು ಮಾತ್ರ ತೋರಿಸುವುದಿಲ್ಲ. ಅದರ ಹಿಂದಿನ ಅರ್ಥವನ್ನು ಜನರು ಹುಡುಕುತ್ತಿದ್ದಾರೆ. ಆಧುನಿಕ ಜೀವನದಲ್ಲಿ ಗುಂಪಿನ ಒತ್ತಡ, ಕೆಲಸದ ಭಾರ, ಸಾಮಾಜಿಕ ನಿರೀಕ್ಷೆಗಳಿಂದ ದೂರ ಸರಿಯುವ ಭಾವನೆಗೆ ಇದು ಹೊಂದಿಕೊಳ್ಳುತ್ತದೆ. 2026ರಲ್ಲಿ ಇದು ಮತ್ತೆ ವೈರಲ್ ಆಗಿ ” ನಿಹಿಲಿಸಂ ( Nihilist Penguin) ಮೀಮ್‌ನ ರೂಪ ತಳೆದಿದೆ. ಇದು ಜನರ ಏಕಾಂತತೆ, ಮಾನಸಿಕ ಆರೋಗ್ಯ ಮತ್ತು ಜೀವನದ ಅರ್ಥಹೀನತೆಯನ್ನು ಪ್ರತಿಬಿಂಬಿಸುತ್ತದೆ.

ವಿಜ್ಞಾನಿಗಳ ವಿವರಣೆ ಏನು?

ವಿಜ್ಞಾನಿಗಳ ಪ್ರಕಾರ ಇಂತಹ ವರ್ತನೆ ಅಪರೂಪದ್ದು ಆದರೆ ಸಂಪೂರ್ಣ ಅಸಾಧ್ಯವಲ್ಲ. ಸಾಮಾನ್ಯ ಕಾರಣಗಳು:

ಆದರೆ ಇದು ಉದ್ದೇಶಪೂರ್ವಕ ‘ಸಾವಿನ ದಾರಿ’ ಅಥವಾ ‘ದಂಗೆ’ ಎಂದು ಹೇಳಲು ಯಾವುದೇ ದೃಢ ಸಾಕ್ಷ್ಯವಿಲ್ಲ. ಪೆಂಗ್ವಿನ್‌ಗಳು ಸಾಮಾನ್ಯವಾಗಿ ಸಮುದ್ರದತ್ತಲೇ ಸಾಗುತ್ತವೆ.

Exit mobile version