ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸೆನ್ಸೇಷನ್ ಕ್ರಿಯೇಟ್ ಮಾಡಿರುವ ಹಾಡು ಇದು. ಈ ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ, ನೆಟ್ಟಿಗರು ಟ್ಯೂನ್‌ಗೆ ತಲೆದೂಗುತ್ತಾ, ಹಾಡನ್ನು ಎಂಜಾಯ್ ಮಾಡುತ್ತಿದ್ದಾರೆ. ಅಷ್ಟೇ ಏಕೆ, ಈ ಹಾಡಿಗೆ ಭರ್ಜರಿ ಡ್ಯಾನ್ಸ್ ಮಾಡಿ ಖುಷಿಪಡುತ್ತಿದ್ದಾರೆ. ಸಖತ್ ವೈರಲ್ ಆಗಿರುವ ಈ ಹಾಡಿನ ಅರ್ಥವೇನು ಎಂದು ಕೆಲವರು ಹುಡುಕುತ್ತಿದ್ದಾರೆ.
“ಅನ್ನನ ಪಾಥಿಯ ಅಪಾ ತಿ ತೇ ತೇನಾ.. ಥಾಯ್” ಎಂಬ ಈ ಹಾಡಿನ ಸಾಲುಗಳು ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿವೆ. ಇದರ ಅರ್ಥವನ್ನೇನು ಎಂದು ಕೇಳುವವರು ಹೆಚ್ಚಾಗಿದ್ದಾರೆ. ಈ ಹಾಡಿನ ಅರ್ಥ ಏನು ಎಂಬುದನ್ನು ತಿಳಿಯಿರಿ.
ಈ ಹಾಡಿನ ಅರ್ಥ
ಅನ್ನನ ಪಾಥಿಯ ಅಪಾ ತಿ ತೇ ತೇನಾ: ನಾನು ನಿದ್ದೆ ಮಾಡಲು ಹೋಗುತ್ತಿದ್ದೇನೆ.
ಅಪದ್ ತಿ ತೇ ತೆನಾ: ನಾನು ನಿನ್ನ ಜೊತೆ ಹೋಗುತ್ತೇನೆ.
ಅಪದ್ ತಿ ಯಾ: ನಾನು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ.
ಅಪದ್ ತಿ ತೇ ತೇಕು: ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ.
ಅಪದ್ ತಿ ತೋ: ನಾನು ಹೋಗುತ್ತೇನೆ
ಅಪದ್ ತಿ ಕೂದ್ ಕೂದ್ ಕೂದ್: ನನಗೆ ತುಂಬಾ ಹಸಿವಾಗಿದೆ. ಕ್ಷಮಿಸಿ!
ಹಾಡಿನ ಅರ್ಥ ಗೊತ್ತಿಲ್ಲದಿದ್ದರೂ, ಇದರ ರಿದಮ್ ಮತ್ತು ಹಾಡಿನ ಸ್ಟೆಪ್‌ಗಳಿಗೆ ಜನ ಕನೆಕ್ಟ್ ಆಗುತ್ತಾರೆ. ಕೆಲವರು ಲಿರಿಕ್ಸ್‌ನ್ನು ತಮಗೆ ತಾನು ಬೇಕಾದಂತೆ ಬದಲಾಯಿಸಿಕೊಂಡು ಹಾಡುತ್ತಾರೆ. ಈ ಹಾಡು 13 ವರ್ಷ ಹಿಂದಿನಂತಿದೆ, ಆದರೆ ಇತ್ತೀಚೆಗೆ ಮತ್ತೆ ವೈರಲ್ ಆಗಿದೆ.
ಈ ಹಾಡು ಥೈಲ್ಯಾಂಡ್ ನಲ್ಲಿನ ಪ್ರೇಮ ಮಂತ್ರಗಳನ್ನೋ ಅಥವಾ ಮೋಡಿ ಮಂತ್ರಗಳನ್ನೋ ಹೋಲುತ್ತದೆ. 2010ರಲ್ಲಿ ‘ದಿ ಹೋಲಿ ಮ್ಯಾನ್ 3’ ಎಂಬ ಥಾಯ್ ಚಿತ್ರದಲ್ಲಿ ಬಳಕೆಯಾದ ಈ ಹಾಡು, ನಂತರ 2014ರಲ್ಲಿ ‘ಲುಕ್ ಥಂಗ್ ಕಾಮಿಡಿ’ ಆಲ್ಬಮ್‌ನಲ್ಲಿ ಬಳಕೆ ಮಾಡಲಾಗಿತ್ತು. ಕಾಮಿಡಿ, ಪ್ರೇಮ ಮತ್ತು ಮೋಡಿ ಮಂತ್ರಗಳ ಸಂಧರ್ಭದಲ್ಲಿ ಬಳಸಿದ ಈ ಹಾಡು, ಈಗಲೂ ಜನಪ್ರಿಯವಾಗಿದೆ.
ಈ ಹಾಡಿನ ಗಾಯಕಿ ಯಾರು?
ಈ ಹಾಡನ್ನು ಇದೀಗ ಸಖತ್ ಟ್ರೆಂಡ್ ಮಾಡಿರುವುದು ನಿಕೇನ್ ಸಲಿಂದ್ರಿ ಎಂಬ ಸುಂದರಿ. 2008ರಲ್ಲಿ ಜನಿಸಿದ ನಿಕೇನ್, ಬಡ ಕುಟುಂಬದಿಂದ ಬಂದ ಹುಡುಗಿ. ಆಕೆಯ ತಂದೆಯು ಇಂಡೋನೇಷ್ಯಾದ ಡ್ಯಾಂಗ್‌ಡಟ್ ಗಾಯಕ. ಬಾಲ್ಯದಲ್ಲೇ ಗಾನಕ್ಕೆ ಒಲವು ಬೆಳೆದ ಈಕೆ, ನಾಲ್ಕನೇ ವರ್ಷಕ್ಕೆ ತಂದೆಯ ಜೊತೆ ಸ್ಟೇಜ್ ಮೇಲೆ ಹಾಡಲು ಆರಂಭಿಸಿದರು. ನಂತರ ಆರ್ಕೆಸ್ಟ್ರಾಗಳೊಂದಿಗೆ ಹಾಡುತ್ತಾ, ವಿವಿಧ ದೇಶಗಳಲ್ಲಿ ಹೆಸರು ಮಾಡಿಕೊಳ್ಳುವ ಮಟ್ಟಿಗೆ ತಲುಪಿದರು.
2023ರ ವೇಳೆಗೆ, ನಿಕೇನ್ ಡೆನ್ನಿ ಕಾಕ್ನಾನ್, ಸೂಪರ್ಡಿ ಆಯೆ, “ಕಲಿಹ್ ವೆಲಾಸ್ಕು” ಹೀಗೆ ಹಲವಾರು ಹಿಟ್ ಸಾಂಗ್‌ಗಳನ್ನು ಹಾಡಿ ಪ್ರಸಿದ್ಧಿ ಪಡೆದುಕೊಂಡಿದ್ದಾರೆ. ಅಂಬಾಯರ್ ಪ್ರಶಸ್ತಿಯೊಂದಿಗೆ ಅತ್ಯಂತ ಜನಪ್ರಿಯ ಗೀತೆಗಳ ಅತ್ಯುತ್ತಮ ಕವರ್ ಸಿಂಗರ್ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಗ ನಿಕೇನ್, ಮಿಲಿಯನ್ ಗಟ್ಟಲೆ ವೀಕ್ಷಣೆಗಳನ್ನು ಹೊಂದಿರುವ ಕೆಂಬಾರ್ ಮ್ಯೂಸಿಕ್ ಡಿಜಿಟಲ್ ಚಾನೆಲ್‌ನ ಸ್ಟಾರ್ ಆಗಿದ್ದಾರೆ.
ಒಮ್ಮೆ ಪ್ಯಾಂಟ್ ಜೇಬಿನಲ್ಲಿ ನೋಟುಗಳನ್ನು ಇಟ್ಟುಕೊಂಡು ಸ್ಟೇಜ್ ಹತ್ತುತ್ತಿದ್ದ ನಿಕೇನ್, ಈಗ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಗಾಯಕಿ. ಹಾಡಿನ ಜೊತೆಗೆ ವಿಭಿನ್ನ ಡ್ಯಾನ್ಸ್ ಸ್ಟೆಪ್‌ಗಳು, ವಿಶೇಷವಾಗಿ ಹಾವಿನಂತೆ ತೂಗಿಸುವ ಹುಕ್ ಸ್ಟೆಪ್‌ಗಳ ಮೂಲಕ ಈಕೆ ಹೆಚ್ಚು ಪ್ರಸಿದ್ಧಿ ಗಳಿಸಿದ್ದಾರೆ.