ಪಾಸ್ ಮಾಡದಿದ್ದರೆ ದೆವ್ವವಾಗಿ ಕಾಡುವೆ: ವಿದ್ಯಾರ್ಥಿ ಬೆದರಿಕೆ

Siddu stalin kcr (39)

ಕೆಲವೊಬ್ಬರು ಮೌಲ್ಯಮಾಪನ ಪ್ರತಿಯಲ್ಲಿ ವ್ಯಂಗ್ಯ ಚಿತ್ರ ಹಾಗೂ ಚಲನಚಿತ್ರ ಹಾಡು ಬರೆಯೋದನ್ನೂ ನೀವೆಲ್ಲಾ ನೋಡಿರ್ತೀರಿ. ಹೌದು ಇಲ್ಲೊಬ್ಬ ವಿದ್ಯಾರ್ಥಿ ವಿಚಿತ್ರವಾಗಿ ಬೇಡಿಕೆ ಇಟ್ಟು, ಉತ್ತರ ಪತ್ರಿಕೆಯನ್ನು ತಿದ್ದುವವರಿಗೆನೇ ಬ್ಲಾಕ್‌ಮೇಲ್ ಮಾಡಿರುವ ಘಟನೆ ಈ ವರ್ಷವೂ ಸಹ ವರದಿಯಾಗಿದೆ.

ಪರೀಕ್ಷೆಗಳಲ್ಲಿ ಪಾಸ್ ಆಗಲು ಡೌಟ್ ಇರುವಂತಹ ವಿದ್ಯಾರ್ಥಿಗಳು ತಮ್ಮ ಉತ್ತರ ಪತ್ರಿಕೆಯಲ್ಲಿ ನಾನಾ ತರಹದ ಬರಹ ಬರೆದು ಪತ್ರಿಕೆ ಮೇಲ್ವಿಚಾರಕರನ್ನು ಮನವೋಲೈಸೋದನ್ನು ನೋಡಿದ್ದೀವಿ. ‘ಸರ್ ನನ್ನನ್ನು ದಯವಿಟ್ಟು ಪಾಸ್ ಮಾಡಿ. ನಿಮಗೆ ದೇವರು ಒಳ್ಳೆಯದು ಮಾಡಲಿ, ನಿಮ್ಮ ಹೆಸರು ಹೇಳಿ ಬದುಕುತ್ತೀನಿ’ ಅಂತೆಲ್ಲ ಬರೆದದ್ದು ಕಳೆದ ಬಾರಿ ವರದಿಯಾಗಿತ್ತು. ಕೆಲವರು ಮುಂದುವರಿದು 100, 500 ರೂಪಾಯಿಯ ನೋಟು ಇಟ್ಟು ಪಾಸ್ ಮಾಡುವಂತೆ ವಿನಮ್ರವಾಗಿ ಬೇಡಿಕೆ ಇಟ್ಟಿದ್ದೂ ನೋಡಿದ್ದೀವಿ. ಕೆಲವೊಬ್ಬರು ಮೌಲ್ಯಮಾಪನ ಪ್ರತಿಯಲ್ಲಿ ಚಲನಚಿತ್ರ ಹಾಡುಗಳನ್ನು ಬರೆಯೋದನ್ನೂ ನೋಡಿರ್ತೀರಿ.

ಆದರೆ ಇಲ್ಲೊಬ್ಬ ವಿದ್ಯಾರ್ಥಿ ವಿಚಿತ್ರವಾಗಿ ಬೇಡಿಕೆ ಇಟ್ಟು, ಉತ್ತರ ಪತ್ರಿಕೆಯನ್ನು ತಿದ್ದುವವರಿಗೆನೇ ಬ್ಲಾಕ್‌ಮೇಲ್ ಮಾಡಿರುವ ಅಪರೂಪದ ಘಟನೆ ವರದಿಯಾಗಿದೆ. ಆ ವಿದ್ಯಾರ್ಥಿ ಉತ್ತರ ಪತ್ರಿಕೆಯಲ್ಲಿ ಬರೆದ ಸಾಲುಗಳು ನಿಮ್ಮನ್ನು ಆಶ್ಚರ್ಯಗೊಳಿಸಬಹುದು. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಮೌಲ್ಯಮಾಪನ ಮಾಡಿದ ಪ್ರತಿಯಲ್ಲಿ, ಒಬ್ಬರ ವಿದ್ಯಾರ್ಥಿ, ‘ಸರ್/ಮೇಡಂ, ನಾನು ನನಗೆ ತಿಳಿದಷ್ಟು ಮಾಡಿದ್ದೇನೆ, ಈಗ ನನಗೆ ಏನು ಮಾಡಬೇಕೆಂದು ತಿಳಿದಿಲ್ಲ. ದಯವಿಟ್ಟು ನನ್ನನ್ನು ಪಾಸ್ ಮಾಡಿ, ನಾನು ಪಾಸ್ ಆಗದಿದ್ದರೆ ನಮ್ಮ ಇಡೀ ಕುಟುಂಬ ಸಾಯುತ್ತದೆ, ನಂತರ ನಾವು ದೆವ್ವಗಳಾಗಿ ನಿಮ್ಮೆಲ್ಲರನ್ನು ಹೆದರಿಸಿ ಬೆದರಿಸುತ್ತೇವೆ. ನನ್ನನ್ನು ಪಾಸ್ ಮಾಡದೇ ಇದ್ದರೆ ನಿಮಗೆ ಡೆಂಗ್ಯೂ ಬರುತ್ತದೆ’ ಎಂದು ಶಾಪ ಹಾಕಿದ್ದಾನೆ.

ಈ ಉತ್ತರ ಪತ್ರಿಕೆಯನ್ನು ಮೌಲ್ಯಮಾಪನ ಮಾಡುವ ಜವಾಬ್ದಾರಿಯನ್ನು ಹೊಂದಿದ್ದ ಶಿಕ್ಷಕರು ಅದರ ಮೇಲೆ ಕೆಂಪು ರೇಖೆಯನ್ನು ಎಳೆದಿದ್ದಾರೆ. ಈ ಉತ್ತರ ಪ್ರತಿ ವೈರಲ್ ಆಗುತ್ತಿದ್ದಂತೆ  ಮಕ್ಕಳ ಶೈಕ್ಷಣಿಕ ಮಟ್ಟವು ತುಂಬಾ ದುರ್ಬಲವಾಗಿರುವುದರ ಬಗ್ಗೆ ಚರ್ಚೆ ನಡೆಯುತ್ತಿದ್ದು, ಉತ್ತರಗಳ ಬದಲು ಅವರು ನೆಪ ಮತ್ತು ಶಾಪಗಳನ್ನು ಬರೆಯುತ್ತಿದ್ದಾರೆಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ಪ್ರತಿಯ ಬಗ್ಗೆ ಶಿಕ್ಷಕರ ವಾಟ್ಸಾಪ್ ಗುಂಪಿನಲ್ಲಿ ಕಳುಹಿಸಿದರೂ ವೈರಲ್ ಪ್ರತಿಯ ನಿಜವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗಲಿಲ್ಲ. ಶಿಕ್ಷಕರಿಗೆ ಕೂಡ ಇದು ನಕಲಿ ಪ್ರತಿಯೋ ಅಲ್ಲವೋ ಎಂದು ತಿಳಿಯಲು ಸಾಧ್ಯವಾಗಿಲ್ಲ.

ಇದಕ್ಕೆ ಪ್ರತಿಕ್ರಿಯೆಯಾಗಿ, ಶಿಕ್ಷಕರು ಅದರ ಮೇಲಿನ ಬಿಎಸ್‌ಇಬಿ ಲೇಬಲ್ ಅದರ ಸತ್ಯಾಸತ್ಯತೆಯನ್ನು ಸಾಬೀತುಪಡಿಸುತ್ತದೆ ಎಂದು ಹೇಳಿದ್ದಾರೆ. ಮಾಹಿತಿ ಪ್ರಕಾರ, ಅದು ನಕಲಿ ಅಲ್ಲ ಎಂದು ತಿಳಿದು ಬಂದಿದ್ದು, ಆದರೆ ಅದು ಯಾವಾಗ ಮತ್ತು ಎಲ್ಲಿಂದ ಬಂದಿದೆ ಎಂಬ ಮಾಹಿತಿ ಮಾತ್ರ ತಿಳಿದು ಬಂದಿಲ್ಲ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version