ಜಲಪಾತದಲ್ಲಿ ಕಾಲುಜಾರಿದ ಯುವಕ..ಬದುಕಿದ್ದೇ ಪವಾಡ..!

Untitled design 2025 07 13t174044.337

ಪುಣೆ: ಮಹಾರಾಷ್ಟ್ರದ ಪ್ರಸಿದ್ಧ ಕಲು ಜಲಪಾತದಲ್ಲಿ ನಡೆದ ಒಂದು ಅಪಾಯಕರ ಘಟನೆ ನಡೆದಿದೆ. ಹೈದರಾಬಾದ್‌ನ ಯುವಕನೊಬ್ಬ ಜಲಪಾತದ ನೋಡಲು ಹೋದಾಗ ಆಕಸ್ಮಿಕವಾಗಿ ನೀರಿನ ರಭಸಕ್ಕೆ ಬಂಡೆಯಲ್ಲಿ ಸಿಲುಕಿಕೊಂಡಿದ್ದು, ಸ್ಥಳೀಯ ಯುವಕರು ತಕ್ಷಣ ನೆರವು ನೀಡಿ ಅವನನ್ನು ರಕ್ಷಿಸಿದ್ದಾರೆ.

ಕಲು ಜಲಪಾತವು ಮಹಾರಾಷ್ಟ್ರದ ಅತ್ಯಂತ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇದರ ಐದು ಧಾರೆಗಳಿಂದ ಧುಮ್ಮಿಕ್ಕಿ ಹರಿಯುವ ನೀರಿನ ಸೌಂದರ್ಯವು ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಪ್ರತಿ ವರ್ಷ ನೂರಾರು ಮಂದಿ ಈ ಜಲಪಾತದ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಆಗಮಿಸುತ್ತಾರೆ.

ಘಟನೆಯ ವಿವರ

ಹೈದರಾಬಾದ್ ಮೂಲದ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಕಲು ಜಲಪಾತಕ್ಕೆ ಭೇಟಿ ನೀಡಿದ್ದ. ಜಲಪಾತದ ಸೌಂದರ್ಯವನ್ನು ಆನಂದಿಸುವ ಸಲುವಾಗಿ ಕಲು ನದಿಯನ್ನು ದಾಟುವಾಗ ಆಕಸ್ಮಿಕವಾಗಿ ಜಾರಿ ಬಿದ್ದಿದ್ದಾನೆ. ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕ, ಜಲಪಾತದ ಬಳಿಯ ಬಂಡೆಯ ಅಂಚಿನಲ್ಲಿ ಸಿಲುಕಿಕೊಂಡಿದ್ದು, ತಕ್ಷಣ ಸ್ಥಳೀಯ ಯುವಕರು ನೆರವು ನೀಡಿ ಅವನನ್ನು ರಕ್ಷಿಸಿದ್ದಾರೆ.

ಅಹಲ್ಯಾನಗರ ಜಿಲ್ಲೆಯ ಸಂತೋಷ್ ಜಾಧವ್, ಉಮೇಶ್ ರಸ್ಕರ್, ಶ್ರೀಕಾಂತ್ ಅಬಾಲೆ, ಸಂದೀಪ್ ಗೋರ್, ತುಷಾರ್ ಮೆಮಾನೆ, ಸಂದೀಪ್ ಸಭೆ ಮತ್ತು ನೀಲೇಶ್ ಪಚ್ಚಿಂಡೆ ಸೇರಿದಂತೆ ಸ್ಥಳೀಯರು ಒಗ್ಗೂಡಿ ರಕ್ಷಣಾ ಕಾರ್ಯಕ್ಕೆ ಮುಂದಾದರು. ಅವರು ತಮ್ಮ ಬಳಿಯಿದ್ದ ಬಟ್ಟೆ ಮತ್ತು ದುಪ್ಪಟ್ಟಾಗಳನ್ನು ಬಳಸಿ ತಾತ್ಕಾಲಿಕ ಹಗ್ಗವನ್ನು ತಯಾರಿಸಿದರು. ಈ ಹಗ್ಗದ ಸಹಾಯದಿಂದ ಯುವಕನನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.

Exit mobile version