ಸೌಂದರ್ಯವು ಎಲ್ಲರನ್ನೂ ಆಕರ್ಷಿಸುವ ಒಂದು ಗುಣ. ಒಬ್ಬರು ಚೆನ್ನಾಗಿ ಕಾಣಿಸಿದರೆ, ಅವರನ್ನು ಹೊಗಳುವುದು ಸಾಮಾನ್ಯ. ಆದರೆ, ಅಮೆರಿಕಾದ ಕನಸಾ ರಾಜ್ಯದ ಕೆಫೆಯೊಂದರಲ್ಲಿ ನಡೆದ ಘಟನೆ ಒಂದು ಸರಳ ಕಾಂಪ್ಲಿಮೆಂಟ್‌ನಿಂದ ದೊಡ್ಡ ಗಲಾಟೆಗೆ ಕಾರಣವಾಗಿದೆ. ಕೆಫೆ ಸಿಬ್ಬಂದಿಯೊಬ್ಬರು ಮಹಿಳೆಯೊಬ್ಬರಿಗೆ “ನೀವು ಬ್ಯೂಟಿಫುಲ್ ಆಗಿದ್ದೀರಿ” ಎಂದು ಹೇಳಿದ್ದಾನೆ. ಇದಕ್ಕೆ ಆಕೆಯ ಪತಿ ಕೋಪಗೊಂಡು ರೊಚ್ಚಿಗೆದ್ದ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಲೋಕಲ್ ಟಾಕ್ ಎಂಬ ಇನ್ಸ್ಟಾಗ್ರಾಮ್ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದ್ದು, ಕೆಫೆಯಲ್ಲಿ ನಡೆದ ಈ ಘಟನೆ ಎಲ್ಲರ ಗಮನ ಸೆಳೆದಿದೆ. ವೀಡಿಯೋದಲ್ಲಿ, ಕೆಫೆ ಸಿಬ್ಬಂದಿಯೊಬ್ಬರು ಮಹಿಳೆಗೆ ಸೌಜನ್ಯದಿಂದ ಕಾಂಪ್ಲಿಮೆಂಟ್ ನೀಡಿದ್ದಾರೆ. ಆದರೆ, ಆಕೆಯ ಪತಿ ಸಿಬ್ಬಂದಿಯ ಮೇಲೆ ಜೋರಾಗಿ ಕಿರುಚಾಡಿದ್ದಾರೆ. “ನೀವು ಏಕೆ ನನ್ನ ಹೆಂಡತಿಗೆ ಬ್ಯೂಟಿಫುಲ್ ಎಂದಿದ್ದೀರಿ?” ಎಂದು ಪ್ರಶ್ನಿಸಿದ್ದಾನೆ. ಆದರೆ ಸಿಬ್ಬಂದಿಯು ಕ್ಷಮಾಯಾಚಿಸಿದ್ದು, ಅದನ್ನು ಒಪ್ಪಿಕೊಳ್ಳದೆ ಕೋಪವನ್ನು ಮುಂದುವರೆಸಿದ್ದಾರೆ. ಈ ಘಟನೆಯು ಕೆಫೆಯಲ್ಲಿದ್ದ ಇತರ ಗ್ರಾಹಕರ ಗಮನವನ್ನೂ ಸೆಳೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಕೆಲವರು ಈ ಗಂಡನ ವರ್ತನೆಯನ್ನು “ಅಸೂಯೆ” ಮತ್ತು “ಅಭದ್ರತೆ”ಯಿಂದ ಕೂಡಿದ್ದು ಎಂದು ಕಾಮೆಂಟ್ ಮಾಡಿದ್ದಾರೆ. “ಈ ಗಂಡನಿಗೆ ತನ್ನ ಪತ್ನಿಯನ್ನು ಕಳೆದುಕೊಳ್ಳುವ ಭಯವಿದೆ” ಎಂದು ಒಬ್ಬರು ಬರೆದಿದ್ದಾರೆ. ಇನ್ನೊಬ್ಬರು, “ಈ ವೀಡಿಯೋ ವೈರಲ್ ಆದ ನಂತರ ಆ ಮಹಿಳೆ ತನ್ನ ಪತಿಗೆ ವಿಚ್ಛೇದನ ನೀಡಬಹುದು” ಎಂದು ಕಾಮೆಂಟ್ ಮಾಡಿದ್ದಾರೆ. ಕೆಲವರು “ಈ ವ್ಯಕ್ತಿಗೆ ಮಾನಸಿಕ ತಜ್ಞರ ಕೌನ್ಸೆಲಿಂಗ್ ಅಗತ್ಯ” ಎಂದು ಸಲಹೆ ನೀಡಿದ್ದಾರೆ.
ಕೆಲವರು ಈ ಘಟನೆಯ ಬಗ್ಗೆ ಫನ್ನಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. “ಈ ಸಂದರ್ಭದಲ್ಲಿ ಆ ಮಹಿಳೆ ಯಾವ ಬಟ್ಟೆ ಧರಿಸಿದ್ದಳು? ಆಕೆಯ ಪ್ರತಿಕ್ರಿಯೆ ಹೇಗಿತ್ತು?” ಎಂದು ಒಬ್ಬರು ಕುತೂಹಲದಿಂದ ಕೇಳಿದ್ದಾರೆ. ಇನ್ನೊಬ್ಬರು, “ಇಂತಹ ಕಾಂಪ್ಲಿಮೆಂಟ್‌ಗೆ ಈ ರೀತಿ ಕೋಪಗೊಂಡರೆ, ಪುರುಷರಿಗೆ ‘ನೀವು ಚೆನ್ನಾಗಿ ಕಾಣುತ್ತಿದ್ದೀರಿ’ ಎಂದರೂ ಆತಂಕಗೊಳ್ಳುತ್ತಾರೆಯೇ?” ಎಂದು ದ ಬರೆದಿದ್ದಾರೆ.