ಬೆಂಕಿ ಹಚ್ಚಿಕೊಂಡು ರೀಲ್ಸ್ ಮಾಡಿ ಪ್ಯಾಂಟ್ ಬಿಚ್ಕೊಂಡು ಓಡಾಡಿದ ಯುವಕ: ವಿಡಿಯೋ ವೈರಲ್

Web (45)

ಇಂದಿನ ಯುವ ಸಮುದಾಯದಲ್ಲಿ ಫೇಮಸ್ ಆಗುವ ಮಹತಾಸೆಯಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುವುದು ಸಾಮಾನ್ಯವಾಗಿದೆ. ಆದರೆ, ಭಿನ್ನತೆಯನ್ನು ತೋರಿಸುವ ಚೇಷ್ಟೆಯಲ್ಲಿ ಕೆಲವೊಮ್ಮೆ ಪ್ರಾಣಕ್ಕೆ ಅಪಾಯ ತರಿಸಿಕೊಳ್ಳುತ್ತಾರೆ. ಇದೀಗ ಇಂತಹವುದೇ ಒಂದು ಅಪಾಯಕಾರಿ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬೆಂಕಿ ರೀಲ್ಸ್ ಮಾಡಲು ಹೋಗಿ ಪ್ಯಾಂಟ್ ಬಿಚ್ಕೊಂಡು ರಸ್ತೆಯಲ್ಲಿ ಓಡಾಡಿದ ಯುವಕನ ವಿಡಿಯೋ ಜನರನ್ನು ಆಘಾತಕ್ಕೀಡು ಮಾಡಿದೆ.

ಯುವಕನೊಬ್ಬನು ಹಾಡು ಹೇಳುತ್ತಾ ಬೆಂಕಿ ರೀಲ್ಸ್ ಮಾಡುತ್ತಿದ್ದ. ಪ್ಯಾಂಟ್‌ಗೆ ಬೆಂಕಿ ಹಚ್ಚಿಕೊಂಡು, ಮುಂಜಾಗ್ರತವಾಗಿ ಕೆಲವು ಕೆಮಿಕಲ್ ಬಳಸಿದಂತೆ ಕಾಣುತ್ತದೆ. ಆದರೆ, ಬೆಂಕಿಯ ತೀವ್ರತೆ ಹೆಚ್ಚಾದಂತೆ ಯುವಕನ ದೇಹಕ್ಕೆ ತಾಗಿದ್ದು, ಎಚ್ಚೆತ್ತು ಪ್ಯಾಂಟ್ ಕಳಚಿ ಪ್ರಾಣಾಪಾಯದಿಂದ ಪಾರಾದ ಯುವಕ ರಸ್ತೆಯಲ್ಲಿ ಓಡಾಡುತ್ತ ಕಾಣುತ್ತಾನೆ. ಈ ವಿಡಿಯೋ @kirawontmiss X ಖಾತೆಯಲ್ಲಿ ಪೋಸ್ಟ್ ಆಗಿದ್ದು, 2.7 ಮಿಲಿಯನ್‌ಗೂ ಹೆಚ್ಚು ವ್ಯೂಗಳನ್ನು ಪಡೆದುಕೊಂಡಿದೆ. ನೆಟ್ಟಿಗರು ಹಲವು ಇದೇ ರೀತಿಯ ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ.


ಸೀರೆಗೆ ಬೆಂಕಿ ಹಚ್ಚಿಕೊಂಡ ಯುವತಿಯ ಡ್ಯಾನ್ಸ್

ಇದೇ ರೀತಿ, ಯುವತಿಯೊಬ್ಬಳು ಸೀರೆಗೆ ಬೆಂಕಿ ಹಚ್ಚಿಕೊಂಡು ಡ್ಯಾನ್ಸ್ ಮಾಡಿದ ವಿಡಿಯೋ ಭಾರತದಲ್ಲಿ ವೈರಲ್ ಆಗಿದೆ. ಸೋನು ಯಾದವ್ X ಖಾತೆಯಲ್ಲಿ ಪೋಸ್ಟ್ ಆಗಿರುವ ಈ ವಿಡಿಯೋ, ‘ದಿವಾನಿ ಮೇ ದಿವಾನಿ ಸಾಜನ್ ಕೀ ದಿವಾನಿ’ ಹಾಡಿಗೆ ಯುವತಿ ರೀಲ್ಸ್ ಮಾಡಿದ್ದಾಳೆ. 70 ಸಾವಿರಕ್ಕೂ ಹೆಚ್ಚು ವ್ಯೂಗಳನ್ನು ಪಡೆದಿರುವ ಈ ವಿಡಿಯೋಗೆ, “ರಾಮಾಯಣ ಕಾಲದಲ್ಲಿ ಇದ್ದಿದ್ದರೆ ಶ್ರೀರಾಮನು ಲಂಕಾ ದಹನಕ್ಕೆ ಆಂಜನೇಯನ ಬದಲು ಈಕೆಯನ್ನು ಕಳುಹಿಸುತ್ತಿದ್ದನು” ಎಂದು ಕ್ಯಾಪ್ಷನ್ ನೀಡಲಾಗಿದೆ.


ಇಂದಿನ ಯುವ ಸಮುದಾಯದಲ್ಲಿ ಫೇಮಸ್ ಆಗುವ ಮಹತಾಸೆಯಿಂದ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋಗಳನ್ನು ಮಾಡುವುದು ಸಾಮಾನ್ಯ. ಭಿನ್ನತೆಯನ್ನು ತೋರಿಸುವ ಚೇಷ್ಟೆಯಲ್ಲಿ ಕೆಲವೊಮ್ಮೆ ಪ್ರಾಣಕ್ಕೆ ಅಪಾಯ ತರಿಸಿಕೊಳ್ಳುತ್ತಾರೆ. ಇಂತಹ ಅಪಾಯಕಾರಿ ವಿಡಿಯೋಗಳಿಂದ ಪ್ರಾಣ ಕಳೆದುಕೊಂಡ ಉದಾಹರಣೆಗಳು ಇದ್ದು, ಈ ವೈರಲ್ ವಿಡಿಯೋಗಳು ಎಚ್ಚರಿಕೆಯ ಸಂದೇಶವಾಗಿವೆ.

Exit mobile version