ಪ್ರಕೃತಿಯ ಅದ್ಭುತ ಕ್ಷಣಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುವುದು ಸಾಮಾನ್ಯ. ಆದರೆ ಹಳೆಯ ಒಂದು ಒಂದು ವೀಡಿಯೊ ಎಲ್ಲರ ಗಮನವನ್ನು ಸೆಳೆದಿದೆ. ಒಂದು ರಣಹದ್ದು ಶರವೇಗದಲ್ಲಿ ಧುಮುಕಿ ಜಿಂಕೆಯನ್ನು ಎತ್ತಿಕೊಂಡು ಆಕಾಶಕ್ಕೆ ಹಾರುವ ದೃಶ್ಯವು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.
ವೀಡಿಯೊದಲ್ಲಿ, ಪರ್ವತದ ಇಳಿಜಾರಿನಲ್ಲಿ ಹುಲ್ಲು ತಿನ್ನುತ್ತಿರುವ ಜಿಂಕೆಯ ಮೇಲೆ ರಣಹದ್ದು ಏಕಾಏಕಿ ಧುಮುಕುತ್ತದೆ. ಕಣ್ಣು ಮಿಟುಕಿಸುವ ಮೊದಲೇ, ಜಿಂಕೆಯನ್ನು ತನ್ನ ಚಾಣಾಕ್ಷ ಉಗುರುಗಳಿಂದ ಗಟ್ಟಿಯಾಗಿ ಹಿಡಿದು ಆಕಾಶಕ್ಕೆ ಹಾರುತ್ತದೆ. ಈ ದೃಶ್ಯವು ನೋಡುಗರಿಗೆ ರೋಮಾಂಚಕವಾಗಿದೆ. ಒಂದು ರಣಹದ್ದು ಇಷ್ಟು ದೊಡ್ಡ ಜಿಂಕೆಯನ್ನು ಎತ್ತಿಕೊಂಡು ಹಾರಬಹುದೇ ಎಂಬ ಪ್ರಶ್ನೆ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ಚರ್ಚೆಯಾಗುತ್ತಿದೆ.
A huge eagle carrying a “Big deer pic.twitter.com/9hllThFoEI
— news for you (@newsforyou36351) July 9, 2025
ರಣಹದ್ದುಗಳು ತಮ್ಮ ಶಕ್ತಿಶಾಲಿ ರೆಕ್ಕೆಗಳು ಮತ್ತು ಚೂಪಾದ ಉಗುರುಗಳಿಗೆ ಹೆಸರುವಾಸಿಯಾಗಿವೆ. ಆದರೆ, ಜಿಂಕೆಯಂತಹ ತೂಕದ ಪ್ರಾಣಿಯನ್ನು ಬೇಟೆಯಾಡಿ, ಎತ್ತಿಕೊಂಡು ಹಾರುವುದು ಸಾಮಾನ್ಯವಲ್ಲ. ಈ ವೀಡಿಯೊದಲ್ಲಿ ರಣಹದ್ದು ಜಿಂಕೆಯನ್ನು ಸುಲಭವಾಗಿ ಎತ್ತಿಕೊಂಡು ಹಾರುವ ದೃಶ್ಯವು ಅದ್ಭುತವಾಗಿದೆ.
ಈ ವೀಡಿಯೊ ವೈರಲ್ ಆಗಿದ್ದು, ಕೆಲವರು ಇದು ನಿಜವಾದ ಘಟನೆ ಎಂದು ನಂಬಿದರೆ, ಇನ್ನೂ ಕೆಲವರು ಇದನ್ನು ಎಡಿಟ್ ಮಾಡಿದ ವೀಡಿಯೊ ಎಂದು ಶಂಕಿಸುತ್ತಿದ್ದಾರೆ. ಆಧುನಿಕ ತಂತ್ರಜ್ಞಾನದ ಯುಗದಲ್ಲಿ, ವೀಡಿಯೊಗಳನ್ನು ಎಡಿಟ್ ಮಾಡಿ ನಿಜವೆಂಬಂತೆ ತೋರಿಸುವುದು ಸಾಮಾನ್ಯವಾಗಿದೆ.
