ಚಂಡೀಗಢ-ಮನಾಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಕಾರೊಂದರ ಸನ್‌ರೂಫ್ ತೆರೆದು ಯುವ ಜೋಡಿಗಳು ಸಾರ್ವಜನಿಕವಾಗಿ ರೊಮ್ಯಾನ್ಸ್ ಮಾಡಿರುವ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕೃತ್ಯವನ್ನು ‘ಅಸಭ್ಯ’ ಎಂದು ಗುರುತಿಸಲಾಗಿದ್ದು, ದಂಪತಿಗಳಿಗೆ ₹4,000 ದಂಡ ವಿಧಿಸಲಾಗಿದೆ.
ಘಟನೆಯ ವಿವರ
ಚಂಡೀಗಢ-ಮನಾಲಿ ನಾಲ್ಕು ಪಥದ ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಕಾರೊಂದರಲ್ಲಿ ಯುವ ಜೋಡಿಗಳು ಸನ್‌ರೂಫ್ ತೆರೆದು ಲಿಪ್‌ಲಾಕ್ ಮಾಡಿದ್ದಾರೆ. ಈ ದೃಶ್ಯವನ್ನು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ಇನ್ನೊಬ್ಬ ವಾಹನ ಚಾಲಕ ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ್ದಾರೆ. ವಿಡಿಯೋದಲ್ಲಿ ಕಾರಿನ ಸನ್‌ರೂಫ್‌ನಿಂದ ದಂಪತಿಗಳು ತಲೆಯನ್ನು ಹೊರಗಿಟ್ಟು ಪರಸ್ಪರ ಮುತ್ತಿಟ್ಟು, ಅಪ್ಪಿಕೊಳ್ಳುವ ದೃಶ್ಯ ಸ್ಪಷ್ಟವಾಗಿ ಕಾಣಿಸುತ್ತದೆ.
ಈ ಕಾರು ಹರಿಯಾಣದ ಗುಹ್ಯಾ ಗ್ರಾಮದಲ್ಲಿ ನೋಂದಾಯಿತವಾಗಿದೆ ಎಂದು ವರದಿಗಳು ತಿಳಿಸಿವೆ. ಈ ಘಟನೆಯು ಸಾರ್ವಜನಿಕ ಸ್ಥಳದಲ್ಲಿ ಅನುಚಿತ ವರ್ತನೆಯಲ್ಲಿ ತೊಡಗಿದ ದಂಪತಿಗಳಿಗೆ ₹4,000 ದಂಡ ವಿಧಿಸಲಾಗಿದೆ ಎಂದು ಹೇಳಲಾಗಿದೆ.
ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ನೆಟಿಜನ್‌ಗಳಿಂದ ವಿವಿಧ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಈ ಕೃತ್ಯವನ್ನು ‘ಅಸಭ್ಯ’ ಮತ್ತು ‘ಸಾರ್ವಜನಿಕ ಸ್ಥಳಕ್ಕೆ ತಕ್ಕದಂತಿಂದೆ’ ಎಂದು ಟೀಕಿಸಿದ್ದಾರೆ. “ರಸ್ತೆಯಲ್ಲಿ ಚಲಿಸುವ ಕಾರಿನಲ್ಲಿ ಇಂತಹ ಕೃತ್ಯವು ಚಾಲಕನ ಗಮನವನ್ನು ಬೇರೆಡೆಗೆ ಸೆಳೆಯಬಹುದು, ಇದರಿಂದ ಅಪಘಾತದ ಸಂಭವ ಹೆಚ್ಚಾಗುತ್ತದೆ,” ಎಂದು ಒಬ್ಬ ಬಳಕೆದಾರ ಕಾಮೆಂಟ್ ಮಾಡಿದ್ದಾರೆ.
एक और धाकड़ जी सनरूफ खोलकर शक्ति प्रदर्शन कर रहे हैं। Video चंडीगढ़–मनाली फोरलेन हाईवे की है। pic.twitter.com/VjqgKYHsjn
— Sachin Gupta (@SachinGuptaUP) June 25, 2025