Viral: ಲಾಕ್ ಡೌನ್​​​, ರಾಮಮಂದಿರ, ಕುಂಭಮೇಳ, ಯುದ್ಧ, ಕೊನೆಗೆ ಆರ್‌ಸಿಬಿ ಕಪ್‌, ನಮ್ಮ ಜನರೇಷನ್ ಲಕ್ಕಿ!

ಇವೆಲ್ಲಾ ನೋಡಿದ ನಮ್ಮ ಜನ್ಮವೇ ಸಾರ್ಥಕ

Untitled design 2025 06 05t070951.179

ಕೋವಿಡ್ ಲಾಕ್‌ಡೌನ್, ರಾಮಮಂದಿರ, ಕುಂಭಮೇಳ, ಭಾರತ-ಪಾಕಿಸ್ತಾನ ಯುದ್ಧ ಮತ್ತು ಕೊನೆಗೆ ಆರ್‌ಸಿಬಿ ಕಪ್‌ನ ಗೆಲುವು ಈ ಎಲ್ಲ ಐತಿಹಾಸಿಕ ಘಟನೆಗಳನ್ನು ನಾವು ನಮ್ಮ ಜನರೇಷನ್‌ನಲ್ಲಿ ಕಂಡಿದ್ದೇವೆ. ಈ ಕುರಿತಾದ ಸೋಶಿಯಲ್ ಮೀಡಿಯಾ ಪೋಸ್ಟ್‌ವೊಂದು ಸದ್ಯ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಜನರು ಇದನ್ನು ಒಪ್ಪಿಕೊಂಡು “ನಿಜಕ್ಕೂ ನಾವು ಲಕ್ಕಿ ಜನರೇಷನ್” ಎಂದು ಕಾಮೆಂಟ್ ಮಾಡಿದ್ದಾರೆ.

ವೈರಲ್ ಪೋಸ್ಟ್‌ನಲ್ಲಿ ಏನಿದೆ?

naveengowda ಎಂಬ ಖಾತೆಯಿಂದ ಶೇರ್ ಆಗಿರುವ ಈ ಪೋಸ್ಟ್‌ನಲ್ಲಿ, “ಕೋವಿಡ್, ಲಾಕ್‌ಡೌನ್, ರಾಮಮಂದಿರ, ಕುಂಭಮೇಳ, ಭಾರತ-ಪಾಕಿಸ್ತಾನ ಯುದ್ಧ ಮತ್ತು ನಮ್ಮದೇ ಆರ್‌ಸಿಬಿ ಕಪ್ ಇವೆಲ್ಲವನ್ನೂ ಕಂಡ ನಮ್ಮ ಜನ್ಮ ಸಾರ್ಥಕ” ಎಂದು ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಕೊರೊನಾ, ರಾಮಮಂದಿರ, ಕುಂಭಮೇಳ, ಮತ್ತು ಆಪರೇಷನ್ ಸಿಂಧೂರಕ್ಕೆ ಸಂಬಂಧಿಸಿದ ಫೋಟೋಗಳನ್ನು ಸಹ ಒಳಗೊಂಡಿದೆ.


ಈ ಪೋಸ್ಟ್ 15 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಬಳಕೆದಾರರು ವಿವಿಧ ಕಾಮೆಂಟ್‌ಗಳ ಮೂಲಕ ತಮ್ಮ ಒಪ್ಪಿಗೆಯನ್ನು ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರರು, “ಇನ್ನೂ ಜೀವನದಲ್ಲಿ ಗೆದ್ದರೆ ಸಾಕು, ಸರ್ವೇಜನಃ ಸುಖಿನೋ ಭವಂತೋ” ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, “ನೋಟ್ ಬ್ಯಾನ್ ಕೂಡ ನಾವು ಕಂಡಿದ್ದೇವೆ, ಈ ಜನ್ಮ ಸಾರ್ಥಕ” ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು, “ನಮ್ಮ ಜನ್ಮ ಪಾವನವಾಯಿತು” ಎಂದು ಭಾವುಕವಾಗಿ ಬರೆದಿದ್ದಾರೆ.

“ನಿಜಕ್ಕೂ ನಾವು ಲಕ್ಕಿ ಜನರೇಷನ್! ಈ ಘಟನೆಗಳೆಲ್ಲವೂ ನಮ್ಮ ಜೀವನದಲ್ಲಿ ಸಂತೋಷ ಮತ್ತು ಸವಾಲುಗಳ ಒಂದು ಅನನ್ಯ ಮಿಶ್ರಣವನ್ನು ಒಡ್ಡಿವೆ.” ಎಂದು ಸೋಶಿಯಲ್ ಮೀಡಿಯಾ ಬಳಕೆದಾರ ಬರೆದಿದ್ದಾರೆ.

ನಾವು ಏಕೆ ಲಕ್ಕಿ?

ನಮ್ಮ ಜನರೇಷನ್ ಕಂಡ ಈ ಘಟನೆಗಳು ಕೇವಲ ಸುದ್ದಿಯಾಗಿರದೆ, ಇತಿಹಾಸದ ಒಂದು ಭಾಗವಾಗಿವೆ. ಕೋವಿಡ್ ಲಾಕ್‌ಡೌನ್‌ನ ಸವಾಲುಗಳು, ರಾಮಮಂದಿರದ ಐತಿಹಾಸಿಕ ಕ್ಷಣ, ಕುಂಭಮೇಳದ ಆಧ್ಯಾತ್ಮಿಕ ವೈಭವ, ಭಾರತ-ಪಾಕಿಸ್ತಾನ ಯುದ್ಧದ ರಾಷ್ಟ್ರೀಯ ಭಾವನೆ ಮತ್ತು ಕೊನೆಗೆ ಆರ್‌ಸಿಬಿ ಕಪ್‌ನ ಸಂತೋಷ ಇವೆಲ್ಲವೂ ನಮ್ಮ ಜೀವನವನ್ನು ಸಾರ್ಥಕಗೊಳಿಸಿವೆ. ವೈಯಕ್ತಿಕ ಯಶಸ್ಸಿನ ಜೊತೆಗೆ ಈ ಘಟನೆಗಳು ನಮಗೆ ಒಂದು ಅನನ್ಯ ಅನುಭವವನ್ನು ನೀಡಿವೆ.

 

Exit mobile version