ಹಾಟ್ ಏರ್ ಬಲೂನ್ ಬ್ಲಾಸ್ಟ್, 8 ಮಂದಿ ದಾರುಣ ಸಾವು: ಭಯಾನಕ ವೀಡಿಯೊ ವೈರಲ್

Untitled design 2025 06 21t215449.602

ಪ್ರಪಂಚದಾದ್ಯಂತ ಒಂದಿಲ್ಲೊಂದು ಆತಂಕಕಾರಿ ಘಟನೆಗಳು ಮತ್ತು ದುರಂತಗಳು ಸಂಭವಿಸುತ್ತಲೇ ಇವೆ. ಇತ್ತೀಚೆಗೆ ಭಾರತದ ಅಹಮದಾಬಾದ್‌ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತವು ಇಡೀ ವಿಶ್ವವನ್ನೇ ಬೆಚ್ಚಿಬೀಳಿಸಿತ್ತು. ಈ ದುರಂತ ಮಾಸುವ ಮುನ್ನವೇ, ಮತ್ತೊಂದು ಭೀಕರ ಘಟನೆ ವಿಶ್ವದ ಗಮನ ಸೆಳೆದಿದೆ.

ಬ್ರೆಜಿಲ್‌ನ ಸಾಂತಾ ಕ್ಯಾಟರಿನಾ ರಾಜ್ಯದ ಪ್ರಿಯಾ ಗ್ರಾಂಡೆ ಎಂಬಲ್ಲಿ ಹಾಟ್ ಏರ್ ಬಲೂನ್ ಸ್ಫೋಟಗೊಂಡು ಕನಿಷ್ಠ ಎಂಟು ಜನರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹಾಟ್ ಏರ್ ಬಲೂನ್‌ಗಳು ಸಾಮಾನ್ಯವಾಗಿ ಸಾಹಸಕ್ಕಾಗಿ ಮತ್ತು ಪ್ರವಾಸೋದ್ಯಮಕ್ಕಾಗಿ ಬಳಸಲಾಗುವ ವಾಹನಗಳಾಗಿವೆ. ಇವು ಪ್ಯಾರಾಚೂಟ್‌ನಂತೆ ಕಾರ್ಯನಿರ್ವಹಿಸಿ, ಸುರಕ್ಷಿತವೆಂದೇ ಪರಿಗಣಿತವಾಗಿವೆ. 22 ಜನರನ್ನು ಹೊತ್ತೊಯ್ಯುತ್ತಿದ್ದ ಈ ಬಲೂನ್, ಆಗಸದಲ್ಲಿ ತೇಲುತ್ತಿರುವಾಗ ಬೆಂಕಿಗೆ ಆಹುತಿಯಾಗಿದೆ. ಈ ಘಟನೆಯಲ್ಲಿ ಎಂಟು ಜನರು ಸಜೀವವಾಗಿ ದಹನವಾಗಿದ್ದಾರೆ. ಈ ದೃಶ್ಯವನ್ನು ಸೆರೆಹಿಡಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಈ ದುರಂತವು ಕೇವಲ ಬ್ರೆಜಿಲ್‌ಗೆ ಮಾತ್ರವಲ್ಲ, ಇಡೀ ವಿಶ್ವಕ್ಕೆ ಆಘಾತವನ್ನುಂಟುಮಾಡಿದೆ. ಹಾಟ್ ಏರ್ ಬಲೂನ್ ಸವಾರಿಯನ್ನು ಒಂದು ಸಾಹಸಮಯ ಮತ್ತು ಸಂತೋಷದಾಯಕ ಅನುಭವವೆಂದು ಭಾವಿಸುವವರಿಗೆ ಈ ಘಟನೆ ಎಚ್ಚರಿಕೆಯ ಗಂಟೆಯಾಗಿದೆ.

Exit mobile version