ದಳಪತಿ ವಿಜಯ್, ಟಿವಿಕೆ ಗೂಗಲ್ ಟ್ರೆಂಡ್‌ಗಳಲ್ಲಿ ಹೆಚ್ಚಾದ ಅಬ್ಬರ

526

ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನಗಳನ್ನು ಗೆದ್ದು ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಟಿವಿಕೆ ಮತ್ತು ಅದರ ನಾಯಕ ನಟ ವಿಜಯ್ ಅವರು ಗೂಗಲ್ ಟ್ರೆಂಡ್‌ಗಳಲ್ಲಿ ಅಬ್ಬರಿಸಿದ್ದಾರೆ.

ವಿಜಯ್ ಅವರ ಆಕರ್ಷಣೆಯೇ ಈ ಬೃಹತ್ ಗೆಲುವಿಗೆ ಮುಖ್ಯ ಕಾರಣ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಗೂಗಲ್ ಟ್ರೆಂಡ್ಸ್ ಡೇಟಾ ಪ್ರಕಾರ, ಏಪ್ರಿಲ್ 8 ರಿಂದ ಮೇ 8, 2026ರವರೆಗಿನ 30ಮ ದಿನಗಳ ಅವಧಿಯಲ್ಲಿ ವಿಜಯ್ ಮತ್ತು ಟಿವಿಕೆಗೆ ಸಂಬಂಧಿಸಿದ ಹುಡುಕಾಟಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿವೆ.

ಏಪ್ರಿಲ್ 14ರ ಸುಮಾರಿಗೆ ಭಾರತದಲ್ಲಿ ವಿಜಯ್ ಅವರ ಹುಡುಕಾಟ ತೀವ್ರವಾಗಿ ಏರಿಕೆಯಾಗಲು ಆರಂಭವಾಯಿತು. ಏಪ್ರಿಲ್ 23ರ ಮತದಾನ ದಿನದಂದು ಈ ಪ್ರವೃತ್ತಿ ಉಚ್ಚಸ್ಥಾಯಿಯನ್ನು ತಲುಪಿತು. ಜನರು ಚುನಾವಣೆ ಮತ್ತು ವಿಜಯ್ ಅವರ ಬಗ್ಗೆ ಹೆಚ್ಚು ತಿಳಿಯಲು ಗೂಗಲ್‌ನಲ್ಲಿ ಹುಡುಕಾಡಿದ್ದು ಕಂಡುಬಂದಿದೆ.

ಮೇ 4ರಂದು ಮತ ಎಣಿಕೆಯ ವೇಳೆ ಮತ್ತೊಂದು ದೊಡ್ಡ ಏರಿಕೆ ಕಂಡುಬಂದಿತು. ಟಿವಿಕೆ 108 ಸ್ಥಾನಗಳಲ್ಲಿ ಗೆಲುವು ಸಾಧಿಸುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದ್ದಂತೆ ಜನರ ಆಸಕ್ತಿ ಮತ್ತಷ್ಟು ಹೆಚ್ಚಾಯಿತು. ಆದರೆ ಮತ ಎಣಿಕೆಯ ನಂತರ ಕ್ರಮೇಣ ಈ ಟ್ರೆಂಡ್ ಕಡಿಮೆಯಾಗುತ್ತಿದೆ ಎಂದು ಗೂಗಲ್ ಟ್ರೆಂಡ್ಸ್ ತೋರಿಸುತ್ತಿದೆ.

ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಅವರ ಪಕ್ಷದ ಅಭೂತಪೂರ್ವ ಗೆಲುವು ತಮಿಳುನಾಡಿನಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಗೂಗಲ್ ಹುಡುಕಾಟಗಳಲ್ಲಿ ಸಾಕಷ್ಟು ಸ್ಥಾನ ಪಡೆದಿದೆ. ನಟನಿಂದ ರಾಜಕಾರಣಿಯಾಗಿ ಬದಲಾದ ವಿಜಯ್ ಅವರ ಜನಪ್ರಿಯತೆಯು ಯುವಕರ ಮತ್ತು ಮಧ್ಯ ವರ್ಗದವರ ನಡುವೆ ತೀವ್ರವಾಗಿ ಪ್ರಭಾವ ಬೀರಿದೆ.

ಟಿವಿಕೆ ಈಗ ಬಹುಮತ ಸಾಧಿಸಲು 2 ಶಾಸಕರ ಬೆಂಬಲಕ್ಕಾಗಿ ಕಸರತ್ತು ನಡೆಸುತ್ತಿರುವ ಹಿನ್ನೆಲೆಯಲ್ಲಿ ವಿಜಯ್ ಮತ್ತು ಅವರ ಪಕ್ಷದ ಬಗ್ಗೆ ಜನರ ಆಸಕ್ತಿ ಇನ್ನೂ ಮುಂದುವರಿದಿದೆ. ಗೂಗಲ್ ಟ್ರೆಂಡ್‌ಗಳು ರಾಜಕೀಯದಲ್ಲಿ ಸಾಮಾಜಿಕ ಮಾಧ್ಯಮ ಮತ್ತು ಡಿಜಿಟಲ್ ಜನಪ್ರಿಯತೆಯ ಪ್ರಾಮುಖ್ಯತೆಯನ್ನು ಇನ್ನೊಮ್ಮೆ ಸಾಬೀತುಪಡಿಸಿವೆ.ವಿಜಯ್ ಅವರ ಈ ಡಿಜಿಟಲ್ ಅಬ್ಬರವು ತಮಿಳುನಾಡು ರಾಜಕೀಯದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಿದೆ ಎಂಬುದು ಎಲ್ಲರ ಅಭಿಪ್ರಾಯವಾಗಿದೆ.

ತಮಿಳುನಾಡಿನಲ್ಲಿ ಎಲ್ಲಿದೆ?

ತಮಿಳುನಾಡಿನಲ್ಲಿ ಏಪ್ರಿಲ್ 8 ರಿಂದ ಮೇ 8, 2026ರವರೆಗಿನ ಅವಧಿಯ ಗೂಗಲ್ ಟ್ರೆಂಡ್ಸ್ ದತ್ತಾಂಶ ಪ್ರಕಾರ, ನಟ-ರಾಜಕಾರಣಿ ವಿಜಯ್ ಅವರ ಹುಡುಕಾಟ ಆಸಕ್ತಿ ತಿರುಪತ್ತೂರ್ನಲ್ಲಿ ಅತ್ಯಧಿಕವಾಗಿದೆ. ಈ ಪ್ರದೇಶವು 100 ಅಂಕಗಳ ಪೂರ್ಣ ಮೊತ್ತದೊಂದಿಗೆ ಮುಂಚೂಣಿಯಲ್ಲಿದೆ. ಕೋವಿಲ್ಪಟ್ಟಿ 71 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಮೈಲಾಡುತುರೈ ಮತ್ತು ಕಾರೈಕುಡಿ ಎರಡೂ 59 ಅಂಕಗಳೊಂದಿಗೆ ಸಮನಾಗಿ ಮೂರನೇ ಸ್ಥಾನವನ್ನು ಹಂಚಿಕೊಂಡಿವೆ.

ವಿಜಯ್ಗೆ ಸಂಬಂಧಿಸಿದ ಪ್ರಶ್ನೆಗಳ್ಯಾವುವು

ಹೀಗೆ ಮುಂತಾದ ರೀತಿಯ ಪ್ರಶ್ನೆಗಳು ಜನರಲ್ಲಿ ಏಳುತ್ತಿದ್ದು ಡಿಜಿಟಲ್‌ ಮೀಡಿಯಾದ ಗೂಗಲ್‌ ಟ್ರೆಂಡ್‌ಗಳಲ್ಲಿ ವಿಜಯ್‌ ಕುರಿತಾಗಿನ ಈ ಹುಡುಕಾಟಕ್ಕೆ ಸಾಕ್ಷಿಯಾಗಿವೆ. ವಿಜಯ್‌ ಅವರು ಕೇವಲ ಡಿಜಿಟಲ್‌ ಮಾಧ್ಯಮದಲ್ಲಿ ಮಾತ್ರವಲ್ಲ ಬದಲಾಗಿ ಜನರ ಮನೆ ಮನಗಳಲ್ಲೂ ಹಾಸುಹೊಕ್ಕಾಗಿರುವುದು ಇಂದು ತಮಿಳುನಾಡಿನಲ್ಲಿ ಮೂಡಿಸಿದ ರಾಜಕೀಯ ಕ್ರಾಂತಿಗೆ ಸಾಕ್ಷಿಯಾಗಿ ನಿಂತಿದೆ.

 

 

 

Exit mobile version