ಜನರ ಕೆಂಗೆಣ್ಣಿಗೆ ಗುರಿಯಾದ ನಟಿ ಓವಿಯಾ

Film 2025 04 06t150819.789

ಸದಾ ಒಂದಿಲ್ಲೊಂದು ಹೇಳಿಕೆ ಮೂಲಕ ಜನರ ಕೆಂಗೆಣ್ಣಿಗೆ ಗುರಿಯಾಗುತ್ತಿರು ನಟಿ ಓವಿಯಾರವರು ಕನ್ನಡದ ‘ಕಿರಾತಕ’ ಸಿನಿಮಾದಲ್ಲಿ ಯಶ್ ಜೊತೆ ನಟಿಸಿ ಕನ್ನಡಿಗರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು.

ತಮಿಳುನಾಡಿನ ಸುಂದರಿಯಾಗಿರುವ ನಟಿ ಓವಿಯಾ ಅವರ ವಿಡಿಯೋ ಸದ್ಯ ತುಂಬಾ ವೈರಲ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಧೂಮಪಾನ ಮಾಡುತ್ತಾ, ಕಡಲ ದಂಡೆಯಲ್ಲಿ ಸ್ನೇಹಿತೆ ಜೊತೆ ತಿರುಗಾಡುತ್ತಿರುವ ವಿಡಿಯೋ ಕಂಡು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹೌದು ನಟಿ ಓವಿಯಾ ಸಾರ್ವಜನಿಕ ಸ್ಥಳದಲ್ಲಿ ಆರಾಮಾಗಿ ಸಿಗರೇಟ್ ಸೇದುತ್ತಾ, ಧಮ್ ಎಳೆದು ಬೀಚ್‌ನಲ್ಲಿ ಓಡಾಡಿದ್ದಾರೆ. ಮೀನುಗಾರರ ಜೊತೆ ಮಾತನಾಡಿದ್ದಾರೆ. ಕಡಲ ಕಿನಾರೆಯಲ್ಲಿ ತಮ್ಮ ಸ್ನೇಹಿತೆಯ ಜೊತೆ ಸುತ್ತಾಡುತ್ತಾ ಅಲ್ಲಿಯೇ ಇದ್ದ ನಾಯಿಯ ಜೊತೆ ಆಟವನ್ನು ಆಡಿದ್ದಾರೆ. ಸದ್ಯಕ್ಕೆ ಓವಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಎಂದು ನಟಿಯಾಗಿ ಸಂದೇಶವನ್ನು ಸಾರಬೇಕಾದರೇ ಹೀಗೆ ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದು ಎಷ್ಟು ಸರಿ ಎಂದೆಲ್ಲಾ ನಟಿಗೆ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಪ್ರಶ್ನಿಸಿದ್ದರೆ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..

Exit mobile version