ಇನ್‌ಸ್ಟಾಗ್ರಾಂ ರೀಲ್ಸ್ ಪ್ರೇಮಿಗಳಿಗೆ ಗುಡ್ ನ್ಯೂಸ್: ಮೆಟಾದಿಂದ 5 ಭಾಷೆಗಳಲ್ಲಿ ಹೊಸ AI ಡಬ್ಬಿಂಗ್ ಫೀಚರ್‌ಗೆ ಗ್ರೀನ್‌ ಸಿಗ್ನಲ್‌

Untitled design 2026 01 20T224304.606

ಭಾರತದ ಬಹುಭಾಷೀಯ ಡಿಜಿಟಲ್ ಪ್ರೇಕ್ಷಕರನ್ನು ತಲುಪಲು ಮೆಟಾ (ಫೇಸ್‌ಬುಕ್, ಇನ್‌ಸ್ಟಾಗ್ರಾಮ್) ಹೊಸ AI ತಂತ್ರಜ್ಞಾನವನ್ನು ಪರಿಚಯಿಸಿದೆ. ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ರೀಲ್ಸ್‌ಗಳಿಗಾಗಿ ಸ್ವಯಂಚಾಲಿತ ಬಹುಭಾಷಾ ಅನುವಾದ ಮತ್ತು ಡಬ್ಬಿಂಗ್ ವೈಶಿಷ್ಟ್ಯವನ್ನು ಈಗ ಲಾಂಚ್ ಮಾಡಲಾಗಿದೆ.

ಹೊಸತೇನಿದೆ..? 

ಕ್ರಿಯೇಟರ್‌ಗಳು ತಮ್ಮ ರೀಲ್ಸ್ ವೀಡಿಯೊಗಳನ್ನು ಕನ್ನಡ, ತಮಿಳು, ತೆಲುಗು, ಬೆಂಗಾಲಿ ಮತ್ತು ಮರಾಠಿ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳಿಗೆ ಸುಲಭವಾಗಿ ಅನುವಾದಿಸಿ ಡಬ್ ಮಾಡಿಸಬಹುದು. ಇದಕ್ಕೂ ಮುಂಚೆ ಈ ಸೌಲಭ್ಯ ಕೇವಲ ಹಿಂದಿ, ಇಂಗ್ಲಿಷ್, ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಭಾಷೆಗಳಿಗೆ ಮಾತ್ರ ಲಭ್ಯವಿತ್ತು.

ಮುಖ್ಯ ವಿಶೇಷತೆಗಳು:

ಭದ್ರತೆ ಮತ್ತು ಗೌಪ್ಯತೆ:

ಮೆಟಾ, ಖಾಸಗಿ ಮಾಹಿತಿ ಸೋರಿಕೆಯ ಆತಂಕಗಳನ್ನು ನಿರಾಕರಿಸಿದೆ. ಈ ವ್ಯವಸ್ಥೆಯಲ್ಲಿ ಕೇವಲ ವೀಡಿಯೊದ ಆಡಿಯೋ ಮಾಹಿತಿ ಮಾತ್ರ ಅನುವಾದಗೊಳ್ಳುತ್ತದೆ. ಕ್ರಿಯೇಟರ್‌ನ ಮೂಲ ಧ್ವನಿ ದತ್ತಾಂಶವನ್ನು ಸುರಕ್ಷಿತವಾಗಿ ಸಂರಕ್ಷಿಸಲಾಗುತ್ತದೆ ಮತ್ತು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸುವುದಿಲ್ಲ ಎಂದು ಹೇಳಲಾಗಿದೆ.

ಹೇಗೆ ಬಳಸುವುದು ?
  1. ಇನ್‌ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಅಪ್‌ಲೋಡ್‌ನಲ್ಲಿ ಮೆಟಾ AI ಅನುವಾದ ಆಯ್ಕೆಯನ್ನು ಕ್ಲಿಕ್ ಮಾಡಿ

  2. ತಮಗೆ ಬೇಕಾದ ಟಾರ್ಗೆಟ್ ಭಾಷೆಯನ್ನು ಆಯ್ಕೆ ಮಾಡಿ

  3. AI ಸ್ವಯಂಚಾಲಿತವಾಗಿ ಧ್ವನಿಯನ್ನು ಅನುವಾದಿಸಿ, ಲಿಪ್-ಸಿಂಕ್ ಮಾಡಿ ಡಬ್ ಮಾಡುತ್ತದೆ

  4. ಮೂಲ ಧ್ವನಿಯ ಸಹಜತೆ ಕಾಪಾಡಿಕೊಂಡು ಬಹುಭಾಷಾ ರೀಲ್ಸ್ ಸಿದ್ಧವಾಗುತ್ತದೆ

ಟಿಕ್‌ಟಾಕ್‌ನೊಂದಿಗೆ ಸ್ಪರ್ಧೆ ಮಾಡಲು ಮತ್ತು ಭಾರತದ ವಿಶಾಲ ಬಹುಭಾಷೀಯರನ್ನ ತಲುಪಲು ಮೆಟಾ ಈ ಹೆಜ್ಜೆ ಇಟ್ಟಿದೆ. ಸ್ಥಳೀಯ ಭಾಷೆಯ ಪ್ರೇಕ್ಷಕರನ್ನು ನೇರವಾಗಿ ತಲುಪಲು ಇದು ಕ್ರಿಯೇಟರ್‌ಗಳಿಗೆ ಸಹಾಯವಾಗುತ್ತದೆ.

 

Exit mobile version