ವಿಚ್ಛೇದನ ನಂತರ ಯುವತಿ ಜೊತೆ ಕಾಣಿಸಿಕೊಂಡ ಸ್ಪಿನ್ನರ್ ಚಹಲ್

Untitled design (2)

ಟೀಮ್ ಇಂಡಿಯಾದ ಸ್ಪಿನ್ ಬೌಲರ್ ಯುಜುವೇಂದ್ರ ಚಹಲ್ ಇತ್ತೀಚೆಗೆ ಅವರ ಪತ್ನಿ ಧನಶ್ರೀ ವರ್ಮಾ ಜೊತೆ ವಿಚ್ಛೇದನ ಪಡೆದಿದ್ದಾರೆ. ಸುಮಾರು ಐದು ವರ್ಷಗಳ ದಾಂಪತ್ಯ ಜೀವನದ ನಂತರ, ಅವರಿಬ್ಬರೂ ಪ್ರತ್ಯೇಕವಾಗಲು ನಿರ್ಧರಿಸಿದರು.  ಕೊನೆಗೆ ಅವರಿಬ್ಬರೂ ತಮ್ಮ ಬದುಕಿನಲ್ಲಿ ಹೊಸ ಹಂತಕ್ಕೆ ಕಾಲಿಟ್ಟಿದ್ದಾರೆ.

ನ್ಯೂಜಿಲೆಂಡ್-ಭಾರತ ನಡುವಿನ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯ ನಡೆಯುತ್ತಿರುವಾಗ, ಯುಜುವೇಂದ್ರ ಚಹಲ್ ಮೈದಾನದಲ್ಲಿ ಕಾಣಿಸಿಕೊಂಡರು. ಆದರೆ, ಅವರ ಜೊತೆಯಲ್ಲಿ ಮತ್ತೊಬ್ಬ ಯುವತಿ ಕೂತು ವೀಕ್ಷಿಸಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಚಿತ್ರಗಳಲ್ಲಿ, ಚಹಲ್ ಜೊತೆ ಕುಳಿತಿರುವ ಈ ಯುವತಿಯ ಹೆಸರು ಮಹಾವಶ್ ಎಂಬುದಾಗಿ ತಿಳಿದುಬಂದಿದೆ. ದುಬೈನಲ್ಲಿ ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಾರೆ. ಇನ್ನು ಚಹಲ್-ಧನಶ್ರೀ ವಿಚ್ಛೇದನದ ಸುದ್ದಿ ಹೊರಬಂದ ಬೆನ್ನಲ್ಲೇ, ಮಹಾವಶ್ ಜೊತೆ ಚಹಲ್ ಕಾಣಿಸಿಕೊಂಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

Exit mobile version