‘ಲಕ್ಷಾಂತರ ಭಾವನೆಗಳು..ಶೂನ್ಯ ಪದಗಳು’: ಧನಶ್ರಿಗೆ ಟಕ್ಕರ್‌ ಕೊಟ್ಟ ಚಹಾಲ್

Untitled design (70)

ಮುಂಬಯಿ: ಕ್ರಿಕೆಟಿಗ ಯುಜ್ವೇಂದ್ರ ಚಹಾಲ್‌ ಮತ್ತು ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ನಡುವಿನ ವಿಚ್ಛೇದನ ವಿವಾದವು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಧನಶ್ರೀ ವರ್ಮಾ ತಮ್ಮ ವಿಚ್ಛೇದನದ ಬಗ್ಗೆ ಮೊದಲ ಬಾರಿಗೆ ಸಾರ್ವಜನಿಕವಾಗಿ ಮಾತನಾಡಿದ ಕೆಲವೇ ಗಂಟೆಗಳಲ್ಲಿ, ಚಹಾಲ್‌ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಪೋಸ್ಟ್‌ ಹಂಚಿಕೊಂಡು, ಪರೋಕ್ಷವಾಗಿ ಧನಶ್ರೀಗೆ ತಿರುಗೇಟು ನೀಡಿದ್ದಾರೆ.

ಧನಶ್ರೀ ವರ್ಮಾ ಒಂದು ಸಂದರ್ಶನದಲ್ಲಿ ತಮ್ಮ ವಿಚ್ಛೇದನದ ಕುರಿತು ಮಾತನಾಡಿದ್ದರು. ಈ ವೇಳೆ, ವಿಚ್ಛೇದನದ ಅಂತಿಮ ವಿಚಾರಣೆಯ ಸಂದರ್ಭದಲ್ಲಿ ಚಹಾಲ್‌ ಧರಿಸಿದ್ದ ಟಿ-ಶರ್ಟ್‌ನ ಬರಹದ ಬಗ್ಗೆ ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಚಹಾಲ್‌ ಧರಿಸಿದ್ದ ‘Be Your Own Sugar Daddy’ ಎಂಬ ಬರಹದ ಟಿ-ಶರ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಧನಶ್ರೀ, “ಜನರು ನನ್ನನ್ನು ದೂಷಿಸಲಿ ಎಂಬ ಉದ್ದೇಶದಿಂದ ಚಹಾಲ್‌ ಈ ರೀತಿಯ ಟಿ-ಶರ್ಟ್‌ ಧರಿಸಿದ್ದಾರೆ. ನನ್ನ ಮೇಲೆ ಸಿಟ್ಟಿದ್ದರೆ, ವಾಟ್ಸಾಪ್‌ನಲ್ಲಿ ನೇರವಾಗಿ ಹೇಳಬಹುದಿತ್ತು. ಇಂತಹ ಟಿ-ಶರ್ಟ್‌ ಧರಿಸುವ ಅಗತ್ಯವಿತ್ತೇ?” ಎಂದು ಲೇವಡಿ ಮಾಡಿದ್ದರು.

ಚಾಹಲ್‌ ಪೋಸ್ಟ್‌

ಧನಶ್ರೀಯವರ ಈ ಟೀಕೆಯ ಬೆನ್ನಲ್ಲೇ, ಚಹಾಲ್‌ ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಒಬ್ಬಂಟಿಯಾಗಿರುವ ಫೋಟೊವನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ‘ಲಕ್ಷಾಂತರ ಭಾವನೆಗಳು, ಆದರೆ ಶೂನ್ಯ ಪದಗಳು’ ಎಂಬ ಭಾವನಾತ್ಮಕ ಬರಹವನ್ನು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ನ ಮೂಲಕ ಚಹಾಲ್‌, ಧನಶ್ರೀಯವರ ಟೀಕೆಗೆ ಪರೋಕ್ಷವಾಗಿ ಉತ್ತರ ನೀಡಿದ್ದಾರೆ ಎಂದು ಭಾವಿಸಲಾಗಿದೆ.

ವಿಚ್ಛೇದನದ ಹಿನ್ನೆಲೆ

ಚಹಾಲ್‌ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ವಿಷಯವು ಕಳೆದ ಕೆಲವು ತಿಂಗಳುಗಳಿಂದ ಸುದ್ದಿಯಲ್ಲಿದೆ. ಈ ಜೋಡಿಯ ವೈಯಕ್ತಿಕ ಜೀವನದ ಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಗಮನ ಸೆಳೆದಿವೆ. ಈ ಹಿಂದೆ ಚಹಾಲ್‌ ಕೂಡ ತಮ್ಮ ವಿಚ್ಛೇದನದ ಬಗ್ಗೆ ಹಲವು ಸಂದರ್ಶನಗಳಲ್ಲಿ ಮಾತನಾಡಿದ್ದರು. ಈ ವೇಳೆ, ವಿಚ್ಛೇದನದಿಂದ ತಾವು ಭಾವನಾತ್ಮಕವಾಗಿ ಕುಗ್ಗಿದ್ದು, ಒಂದು ಹಂತದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದ ವಿಚಾರವನ್ನು ಬಹಿರಂಗಪಡಿಸಿದ್ದರು. ಈ ಹೇಳಿಕೆಯು ಅವರ ಅಭಿಮಾನಿಗಳಲ್ಲಿ ಆತಂಕವನ್ನುಂಟು ಮಾಡಿತ್ತು.

ಚಹಾಲ್‌ನ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಕೆಲವರು ಚಾಹಲ್‌ನ ಈ ಪೋಸ್ಟ್‌ ಅನ್ನು ಭಾವನಾತ್ಮಕವೆಂದರೆ, ಇನ್ನು ಕೆಲವರು ಇದು ಧನಶ್ರೀಗೆ ಉದ್ದೇಶಿತವಾಗಿರುವ ತಿರುಗೇಟು ಎಂದು ವಾದಿಸಿದ್ದಾರೆ.

Exit mobile version