ದೆಹಲಿ: ತವರಿನ ಮೈದಾನದಲ್ಲಿ ಅನುಭವಿಸಿದ್ದ ಸೋಲಿಗೆ ಕೊನೆಗೂ ಪ್ರತಿಕಾರ ತೀರಿಸಿಕೊಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ದೆಹಲಿ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ. 163 ರನ್ ಗುರಿ ಬೆನ್ನತ್ತಿದ ಆರ್‌ಸಿಬಿ, 6 ವಿಕೆಟ್‌ಗಳನ್ನು ಉಳಿಸಿಕೊಂಡು, ಇನ್ನೂ 9 ಎಸೆತ ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿತು.
ಈ ಪಂದ್ಯದಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು ವಿರಾಟ್ ಕೊಹ್ಲಿಯ ನಟನೆಯಷ್ಟೇ ಅಲ್ಲ, ಅವರು ಮಾಡಿದ “ಕಾಂತಾರ” ಸ್ಟೈಲ್ ರಿಕ್ರಿಯೇಷನ್ ಮಾಡಿದ್ದಾರೆ. ತವರಿನ ಹಾವಭಾವವನ್ನು ಮೆಲುಕು ಹಾಕಿದ ಕೊಹ್ಲಿ, ಅಭಿಮಾನಿಗಳ ಹೃದಯ ಗೆದ್ದರು.
Virat Kohli recreating KL Rahul’s celebration right before of KL Rahul😭 pic.twitter.com/FminZTvgE0
— Pari (@BluntIndianGal) April 27, 2025
ಹಿಂದಿನ ಎದುರಿನ ನೆನಪು
ಏಪ್ರಿಲ್ 10 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ದೆಹಲಿ ಕ್ಯಾಪಿಟಲ್ಸ್ ಮಧ್ಯೆ ನಡೆದ ಪಂದ್ಯದಲ್ಲಿ, ಆರ್‌ಸಿಬಿ 7 ವಿಕೆಟ್ ಕಳೆದುಕೊಂಡು 163 ರನ್ ಗಳಿಸಿ, ಬಳಿಕ ಕೆ ಎಲ್ ರಾಹುಲ್ ಬೃಹತ್ ಆಟದ ನೆರವಿನಿಂದ ದೆಹಲಿ ಗೆಲುವು ಸಾಧಿಸಿತ್ತು. ಆ ವೇಳೆ ರಾಹುಲ್, ಮೈದಾನದಲ್ಲಿ ‘ಕಾಂತಾರ’ ಚಿತ್ರದ ಪ್ರಸಿದ್ಧ ದೃಶ್ಯವನ್ನು ಅನುಕರಿಸಿ, ‘ಇದು ನನ್ನ ನೆಲ’ ಎಂಬ ಸಂದೇಶ ನೀಡಿದರೂ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿತ್ತು.
ಅದರ ಬೆನ್ನಲ್ಲೇ, ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಇದೀಗದ ಪಂದ್ಯ ಕೊಹ್ಲಿಗೆ ತವರಿನ ಮೈದಾನದಲ್ಲಿ ಡೆಲ್ಲಿ ವಿರುದ್ಧ ಗೆಲುವಿನ ನಗೆ ಬೀರಿ “ಕಾಂತಾರ” ಸ್ಟೈಲ್ ರಿಕ್ರಿಯೇಷನ್ ಮಾಡಿದ್ದಾರೆ.
Heres the video 😂😂😂https://t.co/j6Q7IR5xAe
— Pan India Review (@PanIndiaReview) April 27, 2025
ಆರ್‌ಸಿಬಿ ಆರಂಭದಲ್ಲಿ 26 ರನ್‌ಗೆ ಮೂರು ವಿಕೆಟ್ ಕಳೆದುಕೊಂಡು ಸಂಕಟಕ್ಕಿಡಾಗಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ಮತ್ತು ಕೃನಾಲ್ ಪಾಂಡ್ಯ ಭರ್ಜರಿ 119 ರನ್‌ಗಳ ಜತೆಯಾಟವಾಡಿ ತಂಡವನ್ನು ಗೆಲುವಿನ ಹತ್ತಿರ ತಂದು ನಿಲ್ಲಿಸಿದರು. ಕೊಹ್ಲಿ 47 ಎಸೆತಗಳಲ್ಲಿ 4 ಬೌಂಡರಿಗಳ ಸಹಾಯದಿಂದ ಆಕರ್ಷಕ 51 ರನ್ ಗಳಿಸಿ, ಮಹತ್ವದ ಪಾತ್ರ ವಹಿಸಿದರು.
ಆರ್‌ಸಿಬಿ ಗೆಲುವಿಗೆ ಕೇವಲ 18 ರನ್ ಅಗತ್ಯವಿದ್ದಾಗ, ಕೊಹ್ಲಿ ದುಸ್ಮಂತ್ ಚಮೀರಾದ ಬೌಲಿಂಗ್‌ನಲ್ಲಿ ಸಿಕ್ಸರ್ ಪ್ರಯತ್ನಿಸಿ ಮಿಚೆಲ್ ಸ್ಟಾರ್ಕ್‌ಗೆ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಆದರೂ, ಅವರ ಶ್ರೇಷ್ಠ ಆಟದಿಂದ ತಂಡ ಗೆಲುವಿನ ಹಾದಿಯತ್ತ ಸಾಗಿತ್ತು.
ಕಾಂತಾರ ಸ್ಟೈಲ್ ರಿಕ್ರಿಯೇಷನ್
ಪಂದ್ಯಾನಂತರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಕೊಹ್ಲಿ ಹಾಗೂ ರಾಹುಲ್ ಮುಖಾಮುಖಿಯಾದರು. ಈ ವೇಳೆ ಕೊಹ್ಲಿ, ರಾಹುಲ್ ಎದುರೇ “ಕಾಂತಾರ” ಶೈಲಿಯಲ್ಲಿ ನೆಲದ ಮೇಲೆ ವೃತ್ತ ಬರೆದು, “ಇದು ನನ್ನ ನೆಲ” ಎಂಬ ಸಂದೇಶವನ್ನು ಹಾಸ್ಯಭರಿತವಾಗಿ ಪುನರಾವೃತಿಸಿದರು. ಈ ಕ್ಷಣವನ್ನು ಕಂಡ ಅಭಿಮಾನಿಗಳು ಖುಷಿಯಿಂದ ಚಪ್ಪಾಳೆ ತಟ್ಟಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವನ್ನು ವೈರಲ್ ಮಾಡಿದರು.
ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೊಹ್ಲಿ, ಇದೀಗ ಐಪಿಎಲ್ 2025ರಲ್ಲಿ ಗರಿಷ್ಠ ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 10 ಪಂದ್ಯಗಳಲ್ಲಿ 443 ರನ್ ಗಳಿಸಿ, ಸೂರ್ಯಕುಮಾರ್ ಯಾದವ್ ಅವರನ್ನು ಹಿಂದಿಕ್ಕಿ ಆರೆಂಜ್ ಕ್ಯಾಪ್ ತಮ್ಮದಾಗಿಸಿಕೊಂಡಿದ್ದಾರೆ. ಸೂರ್ಯಕುಮಾರ್ 10 ಪಂದ್ಯಗಳಲ್ಲಿ 427 ರನ್ ಗಳಿಸಿದ್ದರೂ, ಕೊಹ್ಲಿಯ ಸ್ಥಿರತೆಯ ಆಟ ಪ್ರಶಂಸೆಗೆ ಪಾತ್ರವಾಗಿದೆ.