ಕ್ರಿಕೆಟ್​ ಜಗತ್ತಿಗೆ ವಿರಾಟ್​​ ಕೊಹ್ಲಿ ಕಾಲಿಟ್ಟು 17 ವರ್ಷ..ಹಲವು ದಾಖಲೆಗಳು ಉಡೀಸ್

Untitled design (43)

ಕಿರೀಟ ಇಲ್ಲದಿದ್ದರೂ ರಾಜ, ಸೈನ್ಯ ಇಲ್ಲದಿದ್ದರೂ ದೊರೆ ಎಂದರೆ ಅದು ಒನ್ ಆಂಡ್ ಒನ್ಲಿ ವಿರಾಟ್ ಕೊಹ್ಲಿ. ಇಂದಿಗೆ (ಆಗಸ್ಟ್ 18, 2025) ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟು 17 ವರ್ಷಗಳನ್ನು ಪೂರೈಸಿದ್ದಾರೆ. ಈ ವಿಶೇಷ ದಿನದಂದು ಕಿಂಗ್ ಕೊಹ್ಲಿ ತಮ್ಮ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ನೀಡಿದ್ದಾರೆ.

2008ರ ಆಗಸ್ಟ್ 18ರಂದು ವಿರಾಟ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಶೂನ್ಯದಿಂದ ಶುರುವಾದ ಅವರ ಪಯಣ ಇಂದು ವಿಶ್ವ ಕ್ರಿಕೆಟ್‌ನಲ್ಲಿ ದಿಗ್ಗಜರ ಸ್ಥಾನಕ್ಕೇರಿದೆ. 17 ವರ್ಷಗಳ ಕಾಲ ಕ್ರಿಕೆಟ್ ಲೋಕವನ್ನು ಆಳಿದ ವಿರಾಟ್, ಲೆಕ್ಕವಿಲ್ಲದಷ್ಟು ದಾಖಲೆಗಳನ್ನು ಬರೆದಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್, ಶತಕಗಳ ದಾಖಲೆ, ನಾಯಕನಾಗಿ ಮಾಡಿದ ಸಾಧನೆ, ಇವೆಲ್ಲವೂ ಕೊಹ್ಲಿಯನ್ನು ದಿ ಲೆಜೆಂಡ್ ಎನಿಸಿಕೊಳ್ಳುವಂತೆ ಮಾಡಿದೆ.

ಆದರೆ, ಇತ್ತೀಚಿನ ದಿನಗಳಲ್ಲಿ ವಿರಾಟ್‌ನ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಗೊಂದಲಗಳು ಹುಟ್ಟಿಕೊಂಡಿವೆ. ಬಿಸಿಸಿಐ ಅವರನ್ನು ಸೈಡ್‌ಲೈನ್ ಮಾಡುತ್ತಿದೆ ಎಂಬ ಚರ್ಚೆ, ಶೀಘ್ರದಲ್ಲೇ ಏಕದಿನ ಕ್ರಿಕೆಟ್‌ನಿಂದ ನಿವೃತ್ತಿಯಾಗಬಹುದು ಎಂಬ ಊಹಾಪೋಹಗಳು ಕೇಳಿಬಂದಿವೆ. ಇಂಗ್ಲೆಂಡ್ ಟೆಸ್ಟ್ ಸರಣಿಗೂ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಕೊಹ್ಲಿ, ಆಸ್ಟ್ರೇಲಿಯಾ ಪ್ರವಾಸಕ್ಕೂ ಮುನ್ನ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳುತ್ತಾರೆಯೇ ಎಂಬ ಪ್ರಶ್ನೆ ಎದ್ದಿತ್ತು.

ಈ ಎಲ್ಲ ಗೊಂದಲಗಳ ನಡುವೆ, ಲಂಡನ್‌ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ವಿರಾಟ್ ಕೊಹ್ಲಿ ಒಂದು ಫ್ಯಾನ್ಸ್ ಪೇಜ್‌ನ ಪೋಸ್ಟ್‌ಗೆ ಲೈಕ್ ಮಾಡಿದ್ದಾರೆ. ಆ ಪೋಸ್ಟ್‌ನ ವಿಶೇಷತೆ ಏನೆಂದರೆ, ಅದು ಆಸ್ಟ್ರೇಲಿಯಾ ಏಕದಿನ ಸರಣಿಗೆ ಕೊಹ್ಲಿ ಅಭ್ಯಾಸ ನಡೆಸುತ್ತಿದ್ದಾರೆ ಎಂಬ ಸಂದೇಶವನ್ನು ಹೊಂದಿತ್ತು. ಈ ಒಂದು ಲೈಕ್‌ನಿಂದಾಗಿ ಫ್ಯಾನ್ಸ್‌ ಒಂದು ದೊಡ್ಡ ಸಂದೇಶವನ್ನು ಓದಿದ್ದಾರೆ. ವಿರಾಟ್ ಆಸ್ಟ್ರೇಲಿಯಾ ಸರಣಿಯನ್ನು ಆಡುವ ಸಾಧ್ಯತೆ ಇದೆ ಎಂದು! ಈ ಲೈಕ್ ಒಂದು ಸೂಚನೆಯೇ ಎಂಬ ಚರ್ಚೆ ಈಗ ಜೋರಾಗಿದೆ.

ವಿರಾಟ್ ಕೊಹ್ಲಿಯ ಕ್ರಿಕೆಟ್ ಜೀವನವು ಸೋಲು-ಗೆಲುವಿನ ರೋಲರ್ ಕೋಸ್ಟರ್‌ನಂತಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯ, ಟೀಕೆ, ಅಪಮಾನ ಇವೆಲ್ಲವನ್ನೂ ಎದುರಿಸಿ, ಕಿಂಗ್ ಕೊಹ್ಲಿ ತಮ್ಮ ಆಟದ ಮೂಲಕ ಎಲ್ಲರಿಗೂ ಉತ್ತರ ನೀಡಿದ್ದಾರೆ. 2025ರವರೆಗೆ ಟೆಸ್ಟ್, ಒಡಿಐ, ಟಿ20 ಮೂರೂ ಫಾರ್ಮೆಟ್‌ಗಳಲ್ಲಿ ಅಬ್ಬರಿಸಿದ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ (50+ ಶತಕಗಳು) ಮತ್ತು ನಾಯಕನಾಗಿ ಅಪೂರ್ವ ಸಾಧನೆಯನ್ನು ಮಾಡಿದ್ದಾರೆ.

Exit mobile version