ಐಪಿಎಲ್ 2025ರ 28ನೇ ಪಂದ್ಯದಲ್ಲಿ ಜೈಪುರದ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಆಟದಲ್ಲಿ ರಾಜಸ್ಥಾನ ತಂಡ ಮೊದಲು ಬ್ಯಾಟಿಂಗ್ ಮಾಡಿ 173 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡಕ್ಕೆ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಶ್ರೇಷ್ಠ ಆರಂಭ ನೀಡಿದರು.
ಫಿಲ್ ಸಾಲ್ಟ್ ಸ್ಪೋಟಕ ಆಟದ ಮೂಲಕ ಅರ್ಧಶತಕವನ್ನು ಗಳಿಸಿ ಔಟಾದರೆ, ಕೊಹ್ಲಿ ತಾಳ್ಮೆಯ ಬ್ಯಾಟಿಂಗ್ ಮೂಲಕ 40 ಎಸೆತಗಳಲ್ಲಿ ತಮ್ಮ ಅರ್ಧಶತಕ ಪೂರೈಸಿದರು. ಇದು ಕೇವಲ ಐಪಿಎಲ್‌ನಲ್ಲಿಯೇ ಅಲ್ಲ, ಟಿ20 ಕ್ರಿಕೆಟ್ ಇತಿಹಾಸದಲ್ಲಿಯೂ ವಿಶೇಷವಾಗಿದೆ. ಟಿ20 ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನದ ನೂರನೇ ಅರ್ಧಶತಕವನ್ನು ಸಿಡಿಸಿ, ವಿರಾಟ್ ಕೊಹ್ಲಿ ಹೊಸ ದಾಖಲೆ ಬರೆದಿದ್ದಾರೆ.
ಐತಿಹಾಸಿಕ ಸಾಧನೆ ಮಾಡಿದ ಮೊದಲ ಏಷ್ಯನ್ ಬ್ಯಾಟ್ಸ್ಮನ್
ರಾಜಸ್ಥಾನ್ ವಿರುದ್ಧದ ಈ ಪಂದ್ಯದಲ್ಲಿ ಕೊಹ್ಲಿ ಅಜೇಯ 62 ರನ್ ಗಳಿಸಿದರು. ಈ ಇನ್ನಿಂಗ್ಸ್‌ನೊಂದಿಗೆ ಅವರು ಟಿ20 ಕ್ರಿಕೆಟ್‌ನಲ್ಲಿ ನೂರನೇ ಅರ್ಧಶತಕವನ್ನು ಪೂರ್ಣಗೊಳಿಸಿದ ಮೊದಲ ಏಷ್ಯಾದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈವರೆಗೆ ಟಿ20 ಮಾದರಿಯಲ್ಲಿ ಯಾವುದೇ ಏಷ್ಯನ್ ಆಟಗಾರನಿಗೂ ಈ ಸಾಧನೆ ಸಾಧ್ಯವಾಗಿರಲಿಲ್ಲ.
ಕೊಹ್ಲಿಯ ಈ ಸಾಧನೆಯು ಅವರು ಕೇವಲ ಅತಿದೊಡ್ಡ ಆಟಗಾರರಾಗಿದ್ದಾರೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸುತ್ತದೆ. ಅತಿದೊಡ್ಡ ವೇದಿಕೆಗಳ ಮೇಲೆ ತಮ್ಮ ತಂಡವನ್ನು ಮುನ್ನಡೆಸುವ ಅವರ ಸಾಮರ್ಥ್ಯ ಹಾಗೂ ನಿರಂತರ ಶ್ರಮ ಇದೀಗ ಮತ್ತಷ್ಟು ಎತ್ತರಕ್ಕೆ ಏರಿದೆ.
ಕಣಕ್ಕಿಳಿದ ಕ್ಷಣದಿಂದಲೇ ಕೊಹ್ಲಿ ತಾಳ್ಮೆಯ ಆಟವನ್ನಾಡತೊಡಗಿದರು. ಫಿಲ್ ಸಾಲ್ಟ್ ಆಟವಾಡಿದರೆ, ಕೊಹ್ಲಿ ಒಂದು ಕಡೆ ನಿಖರವಾದ ಆಟದ ಮೂಲಕ ಸ್ಕೋರ್ ಕಟ್ಟಿದರು. ಅವರು 45 ಎಸೆತಗಳನ್ನು ಎದುರಿಸಿ, ನಾಲ್ಕು ಬೌಂಡರಿ ಹಾಗೂ ಎರಡು ಸಿಕ್ಸರ್‌ಗಳ ಸಹಿತ 62 ರನ್ ಬಾರಿಸಿದರು. ಈ ರನ್‌ಗಳನ್ನು ಅವರು 137.78 ಸ್ಟ್ರೈಕ್ ರೇಟ್‌ನಲ್ಲಿ ಗಳಿಸಿದ್ದು, ಇದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.
ಇದು ಐಪಿಎಲ್ 2025ರಲ್ಲಿ ಕೊಹ್ಲಿಯ ಎರಡನೇ ಅರ್ಧಶತಕವಾಗಿದ್ದು, ಮೊದಲ ಅರ್ಧಶತಕವನ್ನು ಅವರು ಕೆಕೆಆರ್ ವಿರುದ್ಧ ಸಿಡಿಸಿದ್ದರು. ಈ ಪಂದ್ಯಗಳಿವು ಕೊಹ್ಲಿಯ ಕ್ರೀಡಾ ಶ್ರೇಷ್ಠತೆಯ ಸಾಕ್ಷ್ಯವಾಗಿವೆ.
ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರು
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ಅರ್ಧಶತಕ ಬಾರಿಸಿದ ಆಟಗಾರರ ಪಟ್ಟಿ ಈ ಕೆಳಗಿನಂತಿದೆ:
-
ಡೇವಿಡ್ ವಾರ್ನರ್ – 108 ಅರ್ಧಶತಕಗಳು
-
ವಿರಾಟ್ ಕೊಹ್ಲಿ – 100 ಅರ್ಧಶತಕಗಳು
-
ಬಾಬರ್ ಆಝಂ – 90 ಅರ್ಧಶತಕಗಳು
-
ಜೋಸ್ ಬಟ್ಲರ್ – 86 ಅರ್ಧಶತಕಗಳು
ಈ ಪಟ್ಟಿ ಕೊಹ್ಲಿಯ ನಿರಂತರ ಶ್ರಮ, ಕಠಿಣ ಪರಿಶ್ರಮ ಮತ್ತು ಆಟದ ಮೇಲಿನ ಕೌಶಲ್ಯವನ್ನು ಪ್ರತಿಬಿಂಬಿಸುತ್ತದೆ. ವಿಶ್ವದಾದ್ಯಾಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಕೊಹ್ಲಿ, ತಮ್ಮ ಇಂತಹ ಸಾಧನೆಗಳ ಮೂಲಕ ಹೊಸ ಪೀಳಿಗೆಯ ಆಟಗಾರರಿಗೆ ಪ್ರೇರಣೆಯಾಗಿದ್ದಾರೆ.
ನಿಮ್ಮ ನೆಚ್ಚಿನ ಗ್ಯಾರಂಟಿ ನ್ಯೂಸ್ ಈ ಕೆಳಕಂಡ ಕೇಬಲ್ & ಡಿಟಿಎಚ್ ನೆಟ್ ವರ್ಕ್ ಗಳಲ್ಲಿ ಲಭ್ಯ..
- Tata Play-1665
- U-Digital-ಮೈಸೂರು-160
- Metro Cast Network-ಬೆಂಗಳೂರು-ಬೆಳಗಾವಿ-30-828
- V4 digital network-623
- Abhishek network-817
- Malnad Digital network-45
- JBM network-ರಾಮದುರ್ಗ-54
- Channel net nine-ಧಾರವಾಡ-128
- Basava cable network-ಚಳ್ಳಕೆರೆ-54
- City channel network– ಚಳ್ಳಕೆರೆ-54
- RST digital-ಕಾರ್ಕಳ-101
- Vinayak cable-ಪಟ್ಟನಾಯಕನಹಳ್ಳಿ-54
- Mubarak digital-ಸಂಡೂರು-54
- SB cable-ಸವದತ್ತಿ-54
- Bhosale network-ವಿಜಯಪುರ-54
- Surya digital-ಜಗಳೂರು-54
- Gayatri network-ಸಿಂಧನೂರು-54
- Global vision-ದಾವಣಗೆರೆ-54
- Janani cable-ಮಂಡ್ಯ-54
- Hira cable-ಬೆಳಗಾವಿ-ಹುಬ್ಬಳ್ಳಿ-54
- UDC network-ಹಾರೋಗೇರಿ-54
- Moka cable-ಬಳ್ಳಾರಿ-100
- CAN network-ಚಿಕ್ಕೋಡಿ-54
- KK digital-ಗಂಗಾವತಿ-54
- Victory network-ದಾವಣಗೆರೆ-54
