ಭಾರತ-ಪಾಕಿಸ್ತಾನ ಪಂದ್ಯ ಟಿಕೆಟ್ ಸೋಲ್ಡ್‌ಔಟ್‌: ಕೇವಲ 100 ರು.ಗೆ ಟಿಕೆಟ್‌..ಫ್ಯಾನ್ಸ್‌ಗೆ ಐಸಿಸಿ ಮಸ್ತ್ ಗಿಫ್ಟ್

Untitled design 2025 12 11T224628.400

ಕ್ರಿಕೆಟ್ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌‌ ಸಿಕ್ಕಿದ್ದು, 2026ರ ಟಿ20 ವಿಶ್ವಕಪ್‌ ಟಿಕೆಟ್‌ ಮಾರಾಟ ಆರಂಭವಾಗಿದೆ. ಭಾರತ ಮತ್ತು ಶ್ರೀಲಂಕಾ ಸಂಯುಕ್ತವಾಗಿ ಆಯೋಜಿಸಲಿರುವ ಈ ಮಹಾ ಕ್ರೀಡಾಕೂಟಕ್ಕೆ ಕೇವಲ ಎರಡು ತಿಂಗಳು ಉಳಿದಿರುವ ಸಂದರ್ಭದಲ್ಲಿ, ಐಸಿಸಿ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ಕಿಂಗ್‌ಗೆ ಚಾಲನೆ ನೀಡಿದೆ. ವಿಶೇಷವಾಗಿ ಭಾರತ–ಪಾಕಿಸ್ತಾನ ನಡುವಿನ ಹೈವೋಲ್ಟೇಜ್‌ ಪಂದ್ಯಕ್ಕೆ ಅಭಿಮಾನಿಗಳಿಂದ ಬಂದ ಪ್ರತಿಕ್ರಿಯೆ ಅದ್ಭುತವಾಗಿದ್ದು, ಟಿಕೆಟ್‌ಗಳು ಆರಂಭವಾದ ಕೆಲವೇ ನಿಮಿಷಗಳಲ್ಲಿ ಸಂಪೂರ್ಣವಾಗಿ SOLD OUT ಆಗಿವೆ.

ಈ ಬಾರಿ ಐಸಿಸಿ ಅಭಿಮಾನಿಗಳನ್ನು ಸೆಳೆಯುವ ಉದ್ದೇಶದಿಂದ ಹಲವು ಪಂದ್ಯಗಳಿಗೆ ಕಡಿಮೆ ದರ ನಿಗದಿ ಮಾಡಿದ್ದು ಹೆಚ್ಚಿನ ಸಂಚಲನ ಸೃಷ್ಟಿಸಿದೆ. ₹100 ರಿಂದ ಟಿಕೆಟ್‌ಗಳು ಪ್ರಾರಂಭವಾಗಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ದೊರಕಿರುವ ಸುಧಾರಿತ ಅವಕಾಶವೂ ಹೌದು.

ಟಿಕೆಟ್ ಮಾರಾಟಕ್ಕೆ ಭರ್ಜರಿ ಪ್ರತಿಕ್ರಿಯೆ

ಫೆಬ್ರವರಿ 7 ರಿಂದ ಮಾರ್ಚ್ 8 ರವರೆಗೆ ನಡೆಯಲಿರುವ 2026ರ ಟಿ20 ವಿಶ್ವಕಪ್‌ನಲ್ಲಿ ಒಟ್ಟು 20 ತಂಡಗಳು ಭಾಗವಹಿಸಲಿವೆ. ಲೀಗ್ ಹಂತದಲ್ಲಿ ಮಾತ್ರವೇ 40 ಪಂದ್ಯಗಳು ನಡೆಯಲಿದ್ದು, ಗುರುವಾರ ಸಂಜೆ 6:45ಕ್ಕೆ ಟಿಕೆಟ್‌ ಮಾರಾಟ ಆರಂಭವಾಗುತ್ತಿದ್ದಂತೆ ಎಲ್ಲಾ ಟಿಕೆಟ್‌‌ಗಳು ಸೋಲ್ಡ್‌‌ಔಟ್‌ ಆಗಿವೆ.

ಐಸಿಸಿ ಬಿಡುಗಡೆ ಮಾಡಿದ ಮೊದಲ ಹಂತದ ಟಿಕೆಟ್‌ಗಳಲ್ಲಿ ಭಾರತದ ಪಂದ್ಯಗಳೇ ಹೆಚ್ಚಾಗಿ ಮಾರಾಟವಾಗಿದ್ದು, ಕೆಲವು ನಿಮಿಷಗಳಲ್ಲೇ ಹೆಚ್ಚಿನ ಸ್ಥಾನಗಳು ಬುಕ್‌ ಆಗಿವೆ. ವಿಶೇಷವಾಗಿ ಭಾರತ–ಪಾಕಿಸ್ತಾನ ಪಂದ್ಯಕ್ಕೆ ಬಂದ ಬೇಡಿಕೆ ಅಚ್ಚರಿ ಮೂಡಿಸುವಂತಿತ್ತು.

ಫೆಬ್ರವರಿ 15ರಂದು ಶ್ರೀಲಂಕಾದಲ್ಲಿ ನಡೆಯಲಿರುವ ಭಾರತ–ಪಾಕಿಸ್ತಾನ ಟಿ20 ವಿಶ್ವಕಪ್‌ ಕದನಕ್ಕಾಗಿ ಐಸಿಸಿ ಕಡಿಮೆ ಟಿಕೆಟ್ ದರ ನಿಗದಿಪಡಿಸಿತ್ತು. ಮೊದಲ ಹಂತದ ಟಿಕೆಟ್ ದರ: 1500 ಶ್ರೀಲಂಕಾ ರೂಪಾಯಿ (ಭಾರತೀ ಯ ಕರೆನ್ಸಿಯಲ್ಲಿ ₹438 ಮಾತ್ರ!). 

ಈ ಕಡಿಮೆ ದರವೇ ಅಭಿಮಾನಿಗಳಲ್ಲಿ ಉತ್ಸಾಹವನ್ನು ಹೆಚ್ಚಿಸಿ, ಟಿಕೆಟ್‌ಗಳನ್ನು ಕೆಲವೇ ಕ್ಷಣಗಳಲ್ಲಿ SOLD OUT ಮಾಡಿಸಿದೆ. ಕೇವಲ ಅರ್ಧ ಗಂಟೆಯೊಳಗೆ ಈ ಪಂದ್ಯಕ್ಕೆ ಲಭ್ಯವಿದ್ದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿರುವುದು ದಾಖಲೆಯಂತಾಗಿದೆ.

ಭಾರತ ತಂಡದ ಇತರ ಪಂದ್ಯಗಳಿಗೂ ಭಾರಿ ಬೇಡಿಕೆ

ಭಾರತ ತಂಡ ತನ್ನ ಮೊದಲ ಪಂದ್ಯವನ್ನು ಫೆಬ್ರವರಿ 7 ರಂದು ಮುಂಬೈನಲ್ಲಿ ಅಮೆರಿಕ ವಿರುದ್ಧ ಆಡಲಿದೆ. 750 ರೂ. ಗಳಿಂದ ಪ್ರಾರಂಭವಾಗಿದ್ದ ಈ ಪಂದ್ಯ ಟಿಕೆಟ್‌ಗಳು ಕೂಡ ಈಗಾಗಲೇ ಸಂಪೂರ್ಣವಾಗಿ ಬಿಕರಿಯಾಗಿವೆ.

ಫೆಬ್ರವರಿ 12ರಂದು ದೆಹಲಿಯಲ್ಲಿ ನಡೆಯಲಿರುವ ಭಾರತ–ನಮೀಬಿಯಾ ಪಂದ್ಯಕ್ಕೂ ಇದೇ ಪ್ರತಿಕ್ರಿಯೆ ದೊರೆತಿದೆ. ಇಲ್ಲಿ ಟಿಕೆಟ್‌ಗಳ ಆರಂಭಿಕ ದರವೂ 750 ರೂ. ಆಗಿತ್ತು.

ಈಗ ಉಳಿದಿರುವ ಮುಖ್ಯ ಪಂದ್ಯವೆಂದರೆ ಫೆಬ್ರವರಿ 18ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಭಾರತ–ನೆದರ್‌ಲ್ಯಾಂಡ್ಸ್‌ ಪಂದ್ಯ. ಈ ಪಂದ್ಯದ ಟಿಕೆಟ್‌ಗಳು ₹500 ರಿಂದ ಆರಂಭವಾಗುತ್ತಿದ್ದು, ಬುಕ್ಕಿಂಗ್ ಈಗಾಗಲೇ ವೇಗವಾಗಿ ಸಾಗುತ್ತಿದೆ.

ಐಸಿಸಿ ನೀಡಿರುವ ಕಡಿಮೆ ದರದ ಸ್ಕೀಮ್‌ ಜನಮನ ಗೆದ್ದಿದೆ

ಈ ಬಾರಿ ಐಸಿಸಿ ಟಿಕೆಟ್‌ ದರವನ್ನು ಸಾಮಾನ್ಯ ಅಭಿಮಾನಿಯ ಜೇಬಿಗೆ ತೊಂದರೆ ಆಗದಂತೆ ವಿನ್ಯಾಸಗೊಳಿಸಿದೆ. ಬಹುತೇಕ ಗುಂಪು ಹಂತದ ಪಂದ್ಯಗಳಿಗೆ ₹100 – ₹750 ನಡುವೆ ದರ ನಿಗದಿಪಡಿಸಿದೆ.

ಟಿಕೆಟ್ ತೆಗೆದುಕೊಳ್ಳಲು ಬಯಸುವವರಿಗೆ ಸಲಹೆ
Exit mobile version