ಭಾರತೀಯ ಕ್ರಿಕೆಟ್ನ ಮಹಾರಾಜ. ಕೋಲ್ಕತ್ತಾದ ದಾದಾ ಸೌರವ್ ಗಂಗೂಲಿ ಕುರಿತ ಬಯೋಪಿಕ್ ಬೆಳ್ಳೆತೆರೆ ಬೆಳಗುವುದು ಗ್ಯಾರಂಟಿ. ಈ ಬಗ್ಗೆ ಖುದ್ದು ಗಂಗೂಲಿ ಅವರೇ ಮಾಹಿತಿ ಬಹಿರಂಗಪಡಿಸಿದ್ದು, ಸಿನಿಮಾ ಯಾವಾಗ ಸೆಟ್ಟೇರುತ್ತೆ..? ಟೈಟಲ್ ಏನು..? ದಾದಾ ಪಾತ್ರಕ್ಕೆ ಜೀವ ತುಂಬುತ್ತಿರೋ ಬಾಲಿವುಡ್ ಸ್ಟಾರ್ ಯಾರು ಅನ್ನೋದ್ರ ಪಿನ್ ಟು ಪಿನ್ ಡಿಟೈಲ್ಸ್ ಇಲ್ಲಿದೆ.
ಕ್ರಿಕೆಟರ್ಸ್ ಬಹಳ ಮಂದಿ ಇದ್ದಾರೆ. ಆದ್ರೆ ವರ್ಲ್ಡ್ ಫೇಮಸ್ ಕ್ರಿಕೆಟರ್ಸ್ ಪಟ್ಟ ಕೆಲವರಷ್ಟೇ ಧರಿಸುತ್ತಾರೆ. ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಜಗತ್ತಿನ ಮೇರು ಶಿಖರಗಳಲ್ಲಿ ಒಬ್ಬರು. ಇಂಡಿಯನ್ ಕ್ರಿಕೆಟ್ನ ಮಹಾರಾಜನಾಗಿ, ಕೋಲ್ಕತ್ತಾದ ಅಚ್ಚುಮೆಚ್ಚಿನ ದಾದಾ ಆಗಿ, ನಮ್ಮ ಇಂಡಿಯನ್ ಕ್ರಿಕೆಟ್ಗೆ ಸಾಕಷ್ಟು ಕೊಡುಗೆ ನೀಡಿದಂತಹ ಅತ್ಯದ್ಭುತ ಆಟಗಾರ. ಕ್ಯಾಪ್ಟನ್ ಆಗಿ ಭಾರತ ತಂಡವನ್ನು ಮುನ್ನಡೆಸಿದ ಸಕ್ಸಸ್ಫುಲ್ ಕ್ಯಾಪ್ಟನ್ಗಳಲ್ಲಿ ಗಂಗೂಲಿ ಕೂಡ ಒಬ್ಬರು.
ADVERTISEMENT
ADVERTISEMENT
2002ರ ಐಸಿಸಿ ಚಾಂಪಿಯನ್ಸ್ ಟ್ರೋಫಿ, 2003ರ ವರ್ಲ್ಡ್ ಕಪ್, 2000 ಐಸಿಸಿ ಚಾಂಪಿಯನ್ಸ್ ಟ್ರೋಫಿ, 2004ರ ಏಷ್ಯಾ ಕಪ್ ಸೇರಿದಂತೆ ಹತ್ತು ಹಲವು ಮಹತ್ವದ ಮೈಲಿಗಲ್ಲುಗಳ ಪಾಲುದಾರ ಸೌರವ್ ಗಂಗೂಲಿ. 11363 ರನ್ಗಳನ್ನು ಕಲೆ ಹಾಕುವ ಮೂಲಕ, ಓಡಿಐ ಕರಿಯರ್ನಲ್ಲಿ ಅತಿಹೆಚ್ಚು ರನ್ಗಳನ್ನ ಬಾರಿಸಿದ ಕ್ರಿಕೆಟರ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಅಲಂಕರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಹಾಗೂ ಇಂಜಮಮ್ ಉಲ್ ಹಕ್ ಬಳಿಕ 10 ಸಾವಿರ ರನ್ ಕ್ಲಬ್ ಸೇರಿದ ಮೂರನೇ ಆಟಗಾರ ಅನ್ನೋ ಹೆಗ್ಗಳಿಕೆಗೆ ಪಾತ್ರರಾದವರು ಗಂಗೂಲಿ.
ಓಡಿಐ ಕ್ರಿಕೆಟ್ ವರ್ಲ್ಡ್ಕಪ್ನಲ್ಲಿ 183 ರನ್ ಬಾರಿಸುವ ಮೂಲಕ ಆಲ್ಟೈಂ ಗ್ರೇಟೆಸ್ಟ್ ಬ್ಯಾಟ್ಸಮನ್ ಅನಿಸಿಕೊಂಡಿದ್ದಾರೆ. 2008ರಲ್ಲಿ ಕ್ರಿಕೆಟ್ಗೆ ವಿದಆಯ ಹೇಳಿದ ಇವರು, 2021ರಲ್ಲಿ ಎಲ್ಲಾ ಕ್ರಿಕೆಟ್ ಫಾರ್ಮ್ಗಳಿಗೂ ವಿದಾಯ ಹೇಳಿದ್ರು. ಆದ್ರೆ 113 ಟೆಸ್ಟ್ ಪಂದ್ಯಗಳು ಹಾಗೂ 311 ಏಕದಿನ ಕ್ರಿಕೆಟ್ ಮ್ಯಾಚ್ಗಳಿಂದ ಇವರು ಮಾಡಿದ ದಾಖಲೆಗಳು ಅನನ್ಯ ಹಾಗೂ ಅಗಣಿತ. ಅದರಲ್ಲೂ ಇಂಗ್ಲೆಂಡ್ ವಿರುದ್ದ ಭಾರತ 2 ವಿಕೆಟ್ಗಳ ಜಯ ಕಂಡ ನ್ಯಾಟ್ವೆಸ್ಟ್ ಸೀರೀಸ್ನಲ್ಲಿ ಶರ್ಟ್ ಬಿಚ್ಚಿ ಕುಣಿದಿದ್ದ ಗಂಗೂಲಿ ಇಂದಿಗೂ ವರ್ಲ್ಡ್ ಫೇಮಸ್.
ಬಿಸಿಸಿಐ ಕ್ಯಾಪ್ಟನ್ ಆಗಿಯೂ ಕಾರ್ಯ ನಿರ್ವಹಿಸಿರೋ ಪದ್ಮಶ್ರೀ ಪುರಸ್ಕೃತ ಸೌರವ್ ಗಂಗೂಲಿ ಅವರ ಜೀವನ ಚರಿತ್ರೆ ಬೆಳ್ಳಿತೆರೆ ಬೆಳಗಬೇಕು ಅನ್ನೋದು ಅದೆಷ್ಟೋ ಮಂದಿ ಕ್ರಿಕೆಟ್ ಪ್ರೇಮಿಗಳ ಕನಸಾಗಿತ್ತು. ಅದಕ್ಕೀಗ ಸಮಯ ಕೂಡಿಬಂದಿದೆ. ವಿಕ್ರಮಾದಿತ್ಯ ಮೋಟ್ವಾನಿ ನಿರ್ದೇಶನದ ಸೌರವ್ ಗಂಗೂಲಿ ಬಯೋಪಿಕ್ಗೆ ದಾದಾಗಿರಿ ಅನ್ನೋ ಟೈಟಲ್ ಇಡಲಾಗಿದ್ದು, ನೆವರ್ ಎಂಡ್ಸ್ ಅನ್ನೋ ಟ್ಯಾಗ್ಲೈನ್ ಕೂಡ ಫಿಕ್ಸ್ ಆಗಿದೆ.
ಸದ್ಯ ಕಥೆ ಹಂತದಲ್ಲಿರೋ ಈ ಸಿನಿಮಾಗೆ ಸ್ವತಃ ಗಂಗೂಲಿ ಅವರೇ ಇನ್ಪುಟ್ಸ್ ನೀಡ್ತಿದ್ದು, ಟೈಟಲ್ ರೋಲ್ನಲ್ಲಿ ಬಾಲಿವುಡ್ ನಟ ರಾಜ್ಕುಮಾರ್ ರಾವ್ ನಟಿಸಲಿದ್ದಾರೆ. ಇದನ್ನ ಸ್ವತಃ ಗಂಗೂಲಿ ಅವರೇ ಅಧಿಕೃತವಾಗಿ ಅನೌನ್ಸ್ ಮಾಡಿದ್ದಾರೆ.
ದಾದಾಗಿರಿ ಸಿನಿಮಾ 2026ರ ಜನವರಿಯಲ್ಲಿ ಸೆಟ್ಟೇರಲಿದ್ದು, ಶೂಟಿಂಗ್ ಫಟಾಫಟ್ ಅಂತ ಮುಗಿಸೋ ಯೋಜನೆಯಲ್ಲಿದೆ ಟೀಂ. ಇನ್ನೂ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಗೆ ಹೆಚ್ಚಿನ ಸಮಯ ಹಿಡಿಯಲಿದ್ದು, 2026ರ ಡಿಸೆಂಬರ್ ಒಳಗೆ ಸೌರವ್ ಗಂಗೂಲಿ ಬಯೋಪಿಕ್ ಪ್ರೇಕ್ಷಕರ ಮುಂದೆ ಬರಲಿದೆಯಂತೆ. ಕೂಲ್ ಕ್ಯಾಪ್ಟನ್ ಧೋನಿ, ಸಚಿನ್, ಮುತ್ತಯ್ಯ ಮುರಳೀಧರನ್ ಬಯೋಪಿಕ್ಗಳ ಬಳಿಕ ಗಂಗೂಲಿ ಬಯೋಪಿಕ್ ಸದ್ಯ ಸಿಕ್ಕಾಪಟ್ಟೆ ಟಾಕ್ ಕ್ರಿಯೇಟ್ ಮಾಡಿದೆ.