ಸ್ಮೃತಿ ಮಂಧಾನ-ಪಲಾಶ್ ಮುಚ್ಚಾಲ್ ಮದುವೆ ರದ್ದು: ನಿಜವಾಗ್ಲೂ ನಡೆದದ್ದೇನು..?

Untitled design (99)

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಪ್ರಖ್ಯಾತ ಬ್ಯಾಟರ್ ಸ್ಮೃತಿ ಮಂಧನಾ ಮತ್ತು ಸಂಗೀತ ನಿರ್ದೇಶಕ ಪಲಾಶ್ ಮುಚ್ಚಾಲ್ ಅವರ ಮದುವೆ ಅನಿರ್ದಿಷ್ಟ ಕಾಲಕ್ಕೆ ಮುಂದೂಡಲ್ಪಟ್ಟಿದೆ. ಆರಂಭದಲ್ಲಿ ಸ್ಮೃತಿಯ ತಂದೆಗೆ ಆದ ಹೃದಯಾಘಾತವಾಗಿದ್ದರಿಂದ ಮದುವೆ ಮುಂದೂಡಲಾಗಿತ್ತು. ಆದರೆ, ಈಗ ಮದುವೆ ಮುಂದೂಡಲಾದ ಹಿನ್ನೆಲೆಯಲ್ಲಿ ಪಲಾಶ್ ಮುಚ್ಚಾಲ್ ಅವರ ಮೇಲೆ ವಂಚನೆಯ ಆರೋಪಗಳು ಕೇಳಿಬಂದಿವೆ.

ಮದುವೆ ಮುಂದೂಡಿಕೆಗೆ ನಿಜವಾದ ಕಾರಣ?

ಮದುವೆಯ ದಿನ ಸ್ಮೃತಿ ಮಂಧನಾ ಅವರ ತಂದೆಗೆ ಹೃದಯಾಘಾತವಾದದ್ದು ನಿಜವೇ. ಆ ಸಮಯದಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಈ ಆರೋಗ್ಯ ಸಮಸ್ಯೆಗೆ ಕಾರಣವೇನು ಎಂಬ ಪ್ರಶ್ನೆ ಉದ್ಭವಿಸಿದೆ. ಇದಕ್ಕೆ ಸಾಕ್ಷಿಯಂತೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕೆಲವು ಪೋಟೋಗಳು ಸಹ ಹರಿದಾಡುತ್ತಿವೆ.

ಮದುವೆಯ ಹಿಂದಿನ ರಾತ್ರಿ ಪಲಾಶ್ ಮುಚ್ಚಾಲ್ ತನ್ನ ಮಾಜಿ ಪ್ರೇಯಸಿಯಾದ, ನೃತ್ಯ ಸಂಯೋಜಕಿ ನಂದಿಕಾ ದ್ವಿವೇದಿ ಅವರೊಂದಿಗೆ ಸಂಬಂಧ ಹೊಂದಿದ್ದರು ಎಂದು ಸ್ಮೃತಿ ಮಂದಾನ ಮತ್ತು ಅವರ ಆಪ್ತ ಸ್ನೇಹಿತೆ, ಶ್ರೇಯಾಂಕ ಪಾಟೀಲ್ ಅವರು ‘ರೆಡ್-ಹ್ಯಾಂಡ್’ ಆಗಿ ಪತ್ತೆಹಚ್ಚಿದರಂತೆ.

ಈ ಘಟನೆಯಿಂದ ಎರಡು ಕುಟುಂಬಗಳ ನಡುವೆ ಉಗ್ರ ವಾಗ್ವಾದ ಉಂಟಾಗಿದೆ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಸ್ಮೃತಿ ಅವರ ಸಹೋದರ ಈ ಘಟನೆಯಿಂದ ಕೋಪಗೊಂಡು ಪಲಾಶ್ ಅವರ ಮೇಲೆ ಹಲ್ಲೆ ಮಾಡಿದರು, ಇದರಿಂದ ಅವರಿಗೆ ಸ್ವಲ್ಪಮಟ್ಟಿನ ಗಾಯಗಳಾಗಿವೆ. ಈ ಘಟನೆಯಿಂದ ಸ್ಮೃತಿ ಅವರ ತಂದೆಗೆ ಹೃದಯಾಘಾತವಾಗಿರಬಹುದು ಎಂದು ಊಹಿಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿ ಕೆಲವು ಮಾಹಿತಿಗಳನ್ನ ಹಂಚಿಕೊಂಡಿದ್ದಾರೆ. ಆ ವ್ಯಕ್ತಿ,  ನನ್ನ ಮಾಜಿ ಸಿಚುಯೇಶನ್‌ಶಿಪ್ ಜನಪ್ರಿಯ ಪಿಆರ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಸ್ಮೃತಿ ಕುರಿತಾಗಿ ಇದ್ದ ರೂಮರ್‌ಗಳ ವಿಚಾರವಾಗಿ ನಾನು ಆತನನ್ನು ಸಂಪರ್ಕ ಮಾಡಿದ್ದೆ. ಹಾಗಂತ ನಾನು ಇಲ್ಲಿ ಹೇಳುತ್ತಿರುವುದು ಯಾವುದೇ ಕಲ್ಪನೆಯ ಕಥೆಯಲ್ಲ. ಅವರು ತಮ್ಮ ಕೆಲಸದ ವಾಟ್ಸಾಪ್ ಗ್ರೂಪ್‌ನಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತಿದ್ದರು. ಹಾಗೂ ಈ ಚಾಟ್‌ಗಳನ್ನು ಅವರು ನನಗೆ ತೋರಿಸಿದರು ಎಂದು ಬರೆದುಕೊಂಡಿದ್ದಾರೆ.

ಇದರ ಪ್ರಕಾರ, ಪಲಾಶ್ ತನ್ನ ತಪ್ಪನ್ನ ಮರೆಮಾಚಲು ಪಿಆರ್ ಸಂಸ್ಥೆಗಳಿಗೆ ಹಣ ನೀಡಿದ್ದಾರೆ. ಈಗ ತಾನು ಆಸ್ಪತ್ರೆಗೆ ಅಡ್ಮಿಟ್‌ ಆಗಿರುವ ಸುದ್ದಿಗೆ ಅನುಗುಣವಾಗಿ ಪಿಆರ್‌ ಸಂಸ್ಥೆಗಳಿಗೆ ಹಣ ನೀಡುತ್ತಿದ್ದಾನೆ. ಅವರು ಆಸ್ಪತ್ರೆಯ ಭೇಟಿಯ ಸುದ್ದಿಗಳನ್ನ ನೋಡಿಕೊಳ್ಳುತ್ತಿದ್ದಾರೆ. ಈ ರೀತಿಯಾಗಿ ಪಲಾಶ್ ತನ್ನ ತಪ್ಪನ್ನ ವೈಟ್‌ವಾಶ್‌ ಮಾಡಲು ಮೀಮ್‌ ಪೇಜ್‌ಗಳಿಗೂ ಹಣ ಕೊಡುತ್ತಿದ್ದಾರೆ ಆದರೆ ಇದಾವುದೂ ಕೆಲಸ ಮಾಡುತ್ತಿಲ್ಲ ಎಂದು ಬರೆದುಕೊಂಡಿದ್ದಾರೆ.

ಈ ಎಲ್ಲಾ ಆಘಾತಕಾರಿ ಘಟನೆಗಳ ನಡುವೆ, ಸ್ಮೃತಿ ಮಂಧಾನ ಅವರನ್ನು ಅವರ ಕುಟುಂಬ ಮತ್ತು ಕ್ರಿಕೆಟ್ ಸ್ನೇಹಿತೆಯರು ಬಲವಾಗಿ ಬೆಂಬಲಿಸುತ್ತಿದ್ದಾರೆ. ಅವರ ತಂದೆಯ ಆರೋಗ್ಯವು ಈಗ ಸುಧಾರಿಸುತ್ತಿದೆ ಎಂಬುದು ಸಮಾಧಾನದ ವಿಷಯವಾಗಿದೆ. ಮದುವೆ ರದ್ದಾಗಿದೆಯೋ ಅಥವಾ ಕೇವಲ ಮುಂದೂಡಲ್ಪಟ್ಟಿದೆಯೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ, ಪಲಾಶ್‌ ನಿಜವಾಗಿಯೂ ವಂಚನೆ ಮಾಡಿದ್ದಾರೆಯೇ ಅಥವಾ ಇವೆಲ್ಲಾ ಕೇವಲ ಸುಳ್ಳು ಸುದ್ದಿಯೇ ಎಂದು ಕಾದು ನೋಡಬೇಕಿದೆ.

Exit mobile version