ಸಾರಾ ತೆಂಡುಲ್ಕರ್ ಮತ್ತು ಸಾರಾ ಅಲಿ ಖಾನ್ ಜೊತೆಗಿನ ಗಾಸಿಪ್‌ಗಳನ್ನು ಮೀರಿ, ಟೀಮ್ ಇಂಡಿಯಾ ಕ್ಯಾಪ್ಟನ್ ಶುಭ್‌ಮನ್ ಗಿಲ್ ಇದೀಗ ಹೊಸ ರೂಮರ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಇಂಗ್ಲೆಂಡ್ ಪ್ರವಾಸವನ್ನು ಯಶಸ್ವಿಯಾಗಿ ಮುಗಿಸಿ ಮರಳಿದ ಬಳಿಕ ಮುಂಬೈನಲ್ಲಿ ರಿಲ್ಯಾಕ್ಸ್ ಮೋಡ್‌ಗೆ ಜಾರಿದ ಗಿಲ್, ಬಾಲಿವುಡ್ ಯುವ ನಟಿ ಅಂಜಿನಿ ಧವನ್ ಜೊತೆಗೆ ಕಾಣಿಸಿಕೊಂಡು ಮತ್ತೆ ಸುದ್ದಿಯ ಕೇಂದ್ರಬಿಂದುವಾಗಿದ್ದಾರೆ.
ಹೌದು, ಕಳೆದ ತಿಂಗಳುಗಳಲ್ಲಿ ಆನ್-ಫೀಲ್ಡ್ ಪ್ರದರ್ಶನದಿಂದ ಗಮನ ಸೆಳೆದಿದ್ದ ಗಿಲ್, ಇದೀಗ ಆಫ್-ಫೀಲ್ಡ್ ಆಕ್ಟಿವಿಟಿಗಳಿಂದ ಚರ್ಚೆಗೆ ಗ್ರಾಸವಾಗಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಯುವ ಭಾರತ ತಂಡವನ್ನು ಸಮರ್ಥವಾಗಿ ಮುನ್ನಡೆಸಿ ಸಮಬಲ ಸಾಧಿಸಿದ ನಾಯಕ ಗಿಲ್, ಮುಂಬೈಗೆ ಮರಳಿ ಫುಲ್ ರಿಲ್ಯಾಕ್ಸ್ ಮೋಡ್‌ನಲ್ಲಿದ್ದಾರೆ. ಆದರೆ, ಈ ರಿಲ್ಯಾಕ್ಸ್ ಸಮಯದಲ್ಲಿ ಹೊಸ ಬೆಡಗಿ ಅಂಜಿನಿ ಧವನ್ ಜೊತೆಗಿನ ಸುತ್ತಾಟ ಅವರನ್ನು ಮತ್ತೆ ಗಾಸಿಪ್‌ಗಳ ಕೇಂದ್ರಕ್ಕೆ ತಂದಿದೆ.
ಕ್ರಿಕೆಟ್ ಜಗತ್ತಿಗೆ ಕಾಲಿಟ್ಟ ಕೆಲವೇ ಪಂದ್ಯಗಳಲ್ಲಿ ಶೈನ್ ಆದ ಗಿಲ್, ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ಜೊತೆಗೆ ಮೊದಲು ಲಿಂಕ್ ಆಗಿದ್ದರು. ನಂತರ ಸಾರಾ ಅಲಿ ಖಾನ್ ಹೆಸರು ಕೂಡ ಸೇರಿಕೊಂಡಿತ್ತು. ಈಗ ಆ ಲಿಸ್ಟ್‌ಗೆ ಅಂಜಿನಿ ಧವನ್ ಎಂಟ್ರಿಯಾಗಿದ್ದಾರೆ. ಮುಂಬೈನ ಬಾಂದ್ರಾದ ಪ್ರತಿಷ್ಠಿತ ಹೋಟೆಲ್‌ವೊಂದರಲ್ಲಿ 2-3 ದಿನಗಳ ಹಿಂದೆ ಇಬ್ಬರೂ ಡಿನ್ನರ್ ಡೇಟ್‌ನಲ್ಲಿ ಕಾಣಿಸಿಕೊಂಡಿದ್ದರು. ಗಿಲ್ ಕ್ಯಾಮರಾ ಕಣ್ಣುಗಳನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ, ಅಂಜಿನಿ ಕ್ಯಾಮರಾ ಸೆರೆಯಾಗಿ ಡೇಟಿಂಗ್ ರೂಮರ್‌ಗಳು ಜೋರಾಗಿ ಹಬ್ಬಿವೆ.
ಈ ಜೋಡಿ ಮೊದಲ ಬಾರಿಗೆ 2021ರ ಡಿಸೆಂಬರ್‌ನಲ್ಲಿ ಬಾಂದ್ರಾ ಹೋಟೆಲ್‌ನಲ್ಲಿ ಕಾಣಿಸಿಕೊಂಡಿತ್ತು. ಅಂದಿನಿಂದಲೇ ಡೇಟಿಂಗ್ ಗಾಸಿಪ್ ಶುರುವಾಗಿತ್ತು. ಆದರೆ, ನಂತರ ಸಾರ್ವಜನಿಕವಾಗಿ ಇಬ್ಬರು ಕಾಣಿಸಿಕೊಳ್ಳಲಿಲ್ಲ. ಇದೀಗ 4 ವರ್ಷಗಳ ಬಳಿಕ ಮತ್ತೆ ಒಟ್ಟಿಗೆ ಕಾಣಿಸಿಕೊಂಡಿರುವುದು ಪ್ರೇಮ ಕಥೆಯ ಗಾಸಿಪ್‌ಗೆ ಮರುಜೀವ ನೀಡಿದೆ.
ಯಾರು ಈ ಅಂಜಿನಿ ಧವನ್?
ಬಾಲಿವುಡ್‌ನ ಯುವ ನಟಿ ಅಂಜಿನಿ, ಹಿರಿಯ ನಟ ಸಿದ್ಧಾರ್ಥ್ ಧವನ್ ಅವರ ಮಗಳು ಮತ್ತು ಸ್ಟಾರ್ ನಟ ವರುಣ್ ಧವನ್ ಕುಟುಂಬದ ಸದಸ್ಯೆ. ಅಲ್ಬಂ ಸಾಂಗ್ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಅಂಜಿನಿ, 2024ರಲ್ಲಿ ‘ಬಿನ್ನಿ ಆ್ಯಂಡ್ ಫ್ಯಾಮಿಲಿ’ ಚಿತ್ರದಲ್ಲಿ ಮುಖ್ಯ ಪಾತ್ರ ನಿರ್ವಹಿಸಿದರು. ಈ ವರ್ಷ ಸಲ್ಮಾನ್ ಖಾನ್ ನಟನೆಯ ‘ಸಿಕಂದರ್’ ಚಿತ್ರದಲ್ಲೂ ಸ್ಕ್ರೀನ್ ಶೇರ್ ಮಾಡಿದ್ದಾರೆ.
ಇಂಗ್ಲೆಂಡ್ ಪ್ರವಾಸದ ಬಳಿಕ ಈ ರೂಮರ್ ಮತ್ತೆ ಉಕ್ಕಿ ಬಂದಿದ್ದು, ಫ್ಯಾನ್ಸ್‌ಗಳಲ್ಲಿ ಕುತೂಹಲ ಹುಟ್ಟಿಸಿದೆ. ಇದು ಕೇವಲ ಗಾಸಿಪ್ ಆಗಿ ಮುಗಿಯುತ್ತದೆಯೇ ಅಥವಾ ನಿಜವಾದ ಪ್ರೇಮ ಕಥೆಯಾಗಿ ಬದಲಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕು.